ಇತ್ತೀಚೆಗೆ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವರದಿ ಪ್ರಕಾರ ಭಾರತದಲ್ಲಿ ಹೊಸದಾಗಿ ಬಿಲಿಯನೇರ್‌ಗಳು ಸೇರ್ಪಡೆಯಾಗಿದ್ದಾರೆ. ಒಟ್ಟಾಗಿ ಭಾರತದಲ್ಲಿ 187 ಬಿಲಿಯನೇರ್‌ಗಳು ಇದ್ದಾರೆ. ಭಾರತದಲ್ಲಿ 28 ಮಂದಿ ತಮ್ಮ ಬಿಲಿಯನೇರ್ ಪಟ್ಟವನ್ನು ಕಳೆದುಕೊಂಡಿದ್ದಾರೆ. ಆದರೆ ಈ ಪಟ್ಟಿಗೆ 16 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ವಿಶ್ವದಲ್ಲಿ ಅತೀ ಅಧಿಕ ಬಿಲಿಯನೇರ್‌ಗಳು ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದಲ್ಲಿ ಬಿಲಿಯನೇರ್‌ಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ 16 ಮಂದಿ ಬಿಲಿಯನೇರ್‌ಗಳ ಪೈಕಿ ಹರಿ ಕೃಷನ್ ಅಗರ್ವಾಲ್ ಕೂಡಾ ಒಬ್ಬರಾಗಿದ್ದಾರೆ. ಪೋರ್ಬ್ಸ್ ಮಾಹಿತಿ ಪ್ರಕಾರ ಉದ್ಯಮಿ ಹರಿ ಕೃಷನ್ ಅಗರ್ವಾಲ್ ನಿವ್ವಳ ಆದಾಯವು 1.1 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಹರಿ ಕೃಷನ್ ಅಗರ್ವಾಲ್ ದೆಹಲಿ ಮೂಲದ ಕ್ಯಾಂಪಸ್ ಆಕ್ಟಿವ್‌ವಿಯರ್ (ಚಪ್ಪಲಿ/ ಶೂ) ಸಂಸ್ಥೆಯ ಚೇರ್‌ಮನ್ ಆಗಿದ್ದಾರೆ. ಇದು ದೇಶದಲ್ಲಿ ಅತೀ ಹೆಚ್ಚು ಸ್ಪೋರ್ಟ್ಸ್ ಶೂಗಳನ್ನು ಉತ್ಪಾದನೆ ಮಾಡುವ ಸಂಸ್ಥೆಯಾಗಿದೆ.

ಹಣಕಾಸು ವರ್ಷ 2022ರಲ್ಲಿ ಹರಿ ಕೃಷನ್ ಅಗರ್ವಾಲ್ ಮಾಲೀಕತ್ವದ ಸ್ಪೋರ್ಟ್ಸ್ ಶೂಗಳನ್ನು ಉತ್ಪಾದನೆ ಮಾಡುವ ಈ ಸಂಸ್ಥೆಯು 19.3 ಮಿಲಿಯನ್ ಜೋಡಿ ಶೂಗಳನ್ನು ಮಾರಾಟ ಮಾಡಿದೆ. ಈ ಮಾರಾಟದಿಂದಾಗಿ ಒಟ್ಟಾಗಿ 158 ಮಿಲಿಯನ್ ಡಾಲರ್ ಆದಾಯವನ್ನು ಪಡೆದುಕೊಂಡಿದೆ. ಈ ಕ್ಯಾಂಪಸ್ ಆಕ್ಟಿವ್ ವಿಯರ್ ಸಂಸ್ಥೆಯು ಭಾರತದಲ್ಲಿ ಒಟ್ಟಾಗಿ ಐದು ಫಾಕ್ಟರಿಗಳನ್ನು ಹೊಂದಿದೆ.
ಹರಿ ಕೃಷನ್ ಅಗರ್ವಾಲ್ ಬಿಲಿಯನೇರ್ ಆದ ಕಥೆಯಿದು
66 ವರ್ಷ ಪ್ರಾಯದ ಹರಿ ಕೃಷನ್ ಅಗರ್ವಾಲ್ ತನ್ನ ಸಂಸ್ಥೆಯ ಐಪಿಒ ಅನ್ನು ನಡೆಸಲು ಅಥವಾ ಜಾರಿ ಮಾಡಲು ನಿರ್ಧಾರ ಮಾಡಿದ ಬಳಿಕ ಭಾರತ ದೇಶದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹರಿ ಕೃಷನ್ ಅಗರ್ವಾಲ್‌ರ ಸಂಸ್ಥೆಯು ಸ್ಟಾಕ್ ಮಾರುಕಟ್ಟೆಯಲ್ಲಿ ಮೇ 2022ರಲ್ಲಿ ಶೇಕಡ 23ರಷ್ಟು ಪ್ರೀಮಿಯಂ ಬೆಲೆಗೆ ಲೀಸ್ಟಿಂಗ್ ಆಗಿದೆ.
ಹರಿ ಕೃಷನ್ ಅಗರ್ವಾಲ್ 1983ರಲ್ಲಿ ಆಕ್ಷನ್ ಎಂಬ ಬ್ರ್ಯಾಂಡ್ ಅಡಿಯಲ್ಲಿ ಸ್ಪೋರ್ಟ್ಸ್ ಶೂಗಳನ್ನು ಮಾರಾಟ ಮಾಡುವ ಉದ್ಯಮವನ್ನು ಆರಂಭ ಮಾಡಿದ್ದಾರೆ. ಅದಾದ ಬಳಿಕ ಹರಿ ಕೃಷನ್ ಅಗರ್ವಾಲ್ 2005ರಲ್ಲಿ ಕ್ಯಾಪಸ್ ಹೆಸರಿನಲ್ಲಿ ಶೂಗಳನ್ನು ಮಾರಾಟಕ್ಕಾಗಿ ಬಿಡುಗಡೆ ಮಾಡಿದರು, ಅದು ಕೂಡಾ ಈ ಶೂ ಬೆಲೆಯು 800 ರೂಪಾಯಿಗಿಂತ ಕಡಿಮೆಯಾಗಿತ್ತು. ಅತೀ ಕಡಿಮೆ ಬೆಲೆಗೆ ಶೂ ಲಭ್ಯವಾಗುವುದರಿಂದಾಗಿ ಹೆಚ್ಚಿನ ಗ್ರಾಹಕರ ಗಮನವನ್ನು ಸೆಳೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಯಾಂಪಸ್‌ನ ಮುಖ್ಯ ಹಣಕಾಸು ಅಧಿಕಾರಿ ರಾಮನ್ ಚವ್ಲಾ, "ಸ್ಪೋರ್ಟ್ಸ್ ಶೂಗೆ ಆ ಕಾಲದಲ್ಲಿ ಅದು ಅತೀ ಕಡಿಮೆ ಬೆಲೆಯಾಗಿದೆ. ಶೂ ಬೆಲೆಯು 10ರಿಂದ 40 ಡಾಲರ್ ಸರಾಸರಿಯಲ್ಲಿತ್ತು," ಎಂದು ತಿಳಿಸಿದ್ದಾರೆ. 2021ರಲ್ಲಿ ಕ್ಯಾಂಪಸ್ ಸಂಸ್ಥೆಯ 13 ಮಿಲಿಯನ್ ಜೋಡಿ ಶೂಗಳು ಮಾರಾಟವಾಗಿದ್ದು, 94 ಮಿಲಿಯನ್ ಯುಎಸ್ ಡಾಲರ್ ಆದಾಯ ಲಭ್ಯವಾಗಿದೆ.
ತಜ್ಞರ ಪ್ರಕಾರ ಮುಂದಿನ ತಿಂಗಳುಗಳಲ್ಲಿ ಕ್ಯಾಂಪಸ್ ತನ್ನ ಉದ್ಯಮವನ್ನು ವಿಸ್ತರಿಸುವ ಸಾಧ್ಯತೆಯಿದೆ. ಹಾಗೆಯೇ ಚಪ್ಪಲಿ ಹಾಗೂ ಶೂಗಳ ಉತ್ಪಾದನಾ ಇಂಡಸ್ಟ್ರೀಯಲ್ಲಿ ಈ ಸಂಸ್ಥೆಯು ಅತೀ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಪ್ರಸ್ತುತ ಪಾರ್ದ್ವೆ ಯೂನಿವರ್ಸಿಟಿಯಲ್ಲಿ ಇಂಡಸ್ಟ್ರೀಯಲ್ ಇಂಜಿನಿಯರಿಂಗ್ ಮಾಡಿದ ಅಗರ್ವಾಲ್‌ರ ಪುತ್ರ ನಿಖಿಲ್ ಅಗರ್ವಾಲ್ ಸಂಸ್ಥೆಯ ಸಿಇಒ ಆಗಿದ್ದಾರೆ. ನಿಖಿಲ್ ಪತ್ನಿ ಪ್ರೇರಣ ಮುಖ್ಯ ಮಾರುಕಟ್ಟೆ ನಿರ್ವಹಣಾ ಅಧಿಕಾರಿಯಾಗಿದ್ದಾರೆ. ಹರಿ ಪತ್ನಿ ವಿನೋದ್ ಅಗರ್ವಾಲ್ ಸಂಸ್ಥೆಯ ಬೋರ್ಡ್ ಸದಸ್ಯರಾಗಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications