ಭಾರತೀಯ ಮೂಲದ ಉದ್ಯಮಿ, ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್‌ನ ಮಾಜಿ ನಿರ್ದೇಶಕ ಮತ್ತು ಮೆಕಿನ್ಸೆ & ಕಂಪನಿ ಜಾಗತಿಕ ವ್ಯವಸ್ಥಾಪಕ ನಿರ್ದೇಶಕ ರಜತ್ ಗುಪ್ತಾ ಅವರ ಜೀವನದ ಕಥೆಯೂ ಸ್ಪೂರ್ತಿದಾಯಕ ಅಥವಾ ಪ್ರತಿ ಹೆಜ್ಜೆಯಲ್ಲೂ ನಾವು ಮೈ ಮರೆಯಬಾರದು ಎನ್ನುವ ಎಚ್ಚರಿಸುವ ಸಂದೇಶವೂ ಆಗಿರಬಹುದು.
ರಜತ್ ಗುಪ್ತಾ ತಮ್ಮ 45ನೇ ವಯಸ್ಸಿನಲ್ಲಿ ಅಮೆರಿಕದ ಮೆಕಿನ್ಸೆ ಕನ್ಸಲ್ಟಿಂಗ್ ಕಂಪನಿಯ ಮೊದಲ ಭಾರತೀಯ ಸಿಇಒ ಆಗಿ ಗಮನ ಸೆಳೆದಿದ್ದರು. ಅಲ್ಲದೇ, ಪ್ರತಿಷ್ಠಿತ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಸಹ-ಸಂಸ್ಥಾಪಕರೂ ಹೌದು. ಜಾಗತಿಕವಾಗಿ ಅತ್ಯಂತ ಗೌರವಾನ್ವಿತವಾಗಿದ್ದ ಹಾಗೂ ಶ್ರೀಮಂತ ಭಾರತೀಯ ಸಿಇಒಗಳಲ್ಲಿ ಒಬ್ಬರಾಗಿದ್ದ ಗುಪ್ತಾ ಅವರ ಜೀವನ ಏರುಪೇರಾಗಿ ಜೈಲು ವಾಸ ಅನುಭವಿಸಬೇಕಾದ ಸವಾಲಿನ ಸಮಯವನ್ನು ಎದುರಿಸಿದ್ದರು.

ಅದೇನೇ ಇದ್ದರೂ, ಜೀವನ ಎಳುಬೀಳುಗಳ ನಡುವೆಯೂ ತಮ್ಮ ಅಭಿಮಾನಿಗಳನ್ನು ಉಳಿಸಿಕೊಂಡರು. ಅತ್ಯಂತ ಶಕ್ತಿಶಾಲಿ ವ್ಯಾಪಾರ ನಾಯಕರಲ್ಲಿ ಒಬ್ಬರಾಗಿ ಮತ್ತು ಬದ್ಧತೆಯ ಲೋಕೋಪಕಾರಿಯಾಗಿ ತಮ್ಮ ತಾಯ್ನಾಡಿನಲ್ಲಿ ಹಿಂದಿರುಗಿದರು. ಗುಪ್ತಾ ಕೇವಲ 16 ನೇ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು.
ಇದಾದ ಬಳಿಕ ಎರಡು ವರ್ಷಗಳ ನಂತರ ತಾಯಿಯನ್ನು ಕಳೆದುಕೊಂಡರು. ಗುಪ್ತಾ ಮತ್ತು ಅವರೊಂದಿಗೆ ಒಡಹುಟ್ಟಿದ ಮೂವರು ಮಕ್ಕಳು ಅನಾಥರಾದರು. ಯಾರ ಸಹಾಯ ಯಾಚಿಸದೇ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದರು. ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಗಳಿಸಿದ ಅವರು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 15 ರ್‍ಯಾಂಕ್ ನೊಂದಿಗೆ ಅಗ್ರಸ್ಥಾನ ಪಡೆದರು.
ಇದೇ ವೇಳೆ ಭಾರತೀಯ ಪ್ರಮುಖ ಸಂಸ್ಥೆ ಐಟಿಸಿಯಿಂದ ಆಫರ್ ಪಡೆದರೂ, ವಿದ್ಯಾರ್ಥಿವೇತನದ ಮೂಲಕ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಸಿದ್ಧ ಅಮೇರಿಕನ್ ಸಂಸ್ಥೆಯಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದರು. ಗುಪ್ತಾ ಅವರು 1973 ರಲ್ಲಿ ಜಾಗತಿಕ ಸಲಹಾ ದೈತ್ಯ ಮೆಕಿನ್ಸೆ & ಕಂಪನಿಯನ್ನು ಸೇರಿದರು.
1994 ರಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಆಯ್ಕೆಯಾದಾಗ ಬಹುರಾಷ್ಟ್ರೀಯ ಕಂಪನಿಯ ಮೊದಲ ಭಾರತೀಯ ಮೂಲದ ಸಿಇಒ ಆಗುವ ಮೂಲಕ ಇತಿಹಾಸ ಬರೆದರು. ಮೂರು ಅವಧಿಯವರೆಗೆ ಮೆಕಿನ್ಸೆಯನ್ನು ಮುನ್ನಡೆಸಿದರು. 1993 ರಲ್ಲಿ ಸುಮಾರು $1.2 ಶತಕೋಟಿಯಿಂದ 2002ರ ವೇಳೆಗೆ ಸುಮಾರು $3.4 ಶತಕೋಟಿ ಆದಾಯವನ್ನು ಗಳಿಸಿತು.
2001 ರಲ್ಲಿ ಹೈದರಾಬಾದ್‌ನಲ್ಲಿ ಪ್ರೀಮಿಯಂ ಇಂಡಿಯನ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB) ಸಹ-ಸಂಸ್ಥಾಪಿಸಿದರು. ಅವರ ನಿವ್ವಳ ಮೌಲ್ಯವನ್ನು ಒಮ್ಮೆ ಸುಮಾರು $100 ಮಿಲಿಯನ್ ಎಂದು ಅಂದಾಜಿಸಲಾಗಿದೆ.
ಗೋಲ್ಡ್‌ಮನ್ ಸ್ಯಾಚ್ಸ್ ಸಮೂಹ ಕಂಪನಿಯ ನಿರ್ದೇಶಕರಾಗಿದ್ದ ರಜತ್ ಗುಪ್ತ, ತಮ್ಮ ಕಂಪನಿಯ ಸಾಂಸ್ಥಿಕ ವ್ಯವಹಾರ ರಹಸ್ಯಗಳನ್ನು ಗ್ಯಾಲಿಯನ್ ಗ್ರೂಪ್‌ನ ರಾಜ್ ರಾಜರತ್ನಮ್ ಅವರಿಗೆ ಒದಗಿಸುತ್ತಿದ್ದರು. ಜತೆಗೆ, ಗುಪ್ತಾ ಅವರು ಸುಮಾರು 2 ವರ್ಷಗಳ ಕಾಲ ಬಂಡವಾಳ ಮಾರುಕಟ್ಟೆಯ ಒಳವ್ಯವಹಾರಗಳ ಬಗ್ಗೆ ಸುಳಿವು ನೀಡುತ್ತಿದ್ದರು.
ಸಾಂಸ್ಥಿಕ ರಹಸ್ಯಗಳನ್ನು ಗುಪ್ತಾ ನಿರ್ದಯವಾಗಿ ಸೋರಿಕೆ ಮಾಡುತ್ತಿದ್ದರು ಎಂಬ ಆರೋಪ ಎದುರಿಸಿದರು. ಗುಪ್ತಾ ಅವರನ್ನು 2012 ರಲ್ಲಿ, ಫೆಡರಲ್ ಜ್ಯೂರಿ ತಪ್ಪಿತಸ್ಥರೆಂದು ಘೋಷಿಸಿತು. ಗುಪ್ತಾ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದರು. ಇದು 8 ವಾರಗಳ ಏಕಾಂತ ಬಂಧನವನ್ನು ಒಳಗೊಂಡಿತ್ತು.
ಅವರು 2016 ರಲ್ಲಿ ಜೈಲಿನಿಂದ ಹೊರಬಂದರು. ನಂತರ ಅವರು ಜನರನ್ನು ನಿರಾಸೆಗೊಳಿಸಿದ್ದಕ್ಕಾಗಿ ಕ್ಷಮೆಯಾಚಿಸಿದರು. ತಮ್ಮ ಕಡೆಯಿಂದ "ತಪ್ಪುಗಳಾಗಿವೆ ಜೊತೆಗೆ ಮಿಸ್ ಜೆಡ್ಜ್ಮೆಂಟ್ಸ್" ಇವೆ ಎಂದು ಒಪ್ಪಿಕೊಂಡರು. ಆದರೆ ಅವರು ಗುಪ್ತಾ ಅವರು "ಒಳವ್ಯವಹಾರದ ರಹಸ್ಯ ಒದಗಿಸುವ ವ್ಯಾಪಾರಿ ತಾನಲ್ಲ" ಎಂದು ಪ್ರತಿಪಾದಿಸಿಕೊಂಡಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ



Click it and Unblock the Notifications