Animall: ಜಾನುವಾರು ಮಾರಾಟಕ್ಕೆ ಆನ್‌ಲೈನ್ ಪ್ಲಾಟ್‌ಫಾರ್ಮ್ ಸ್ಥಾಪಿಸಿದ ರೂಮ್‌ಮೇಟ್‌ಗಳು, ಆದಾಯ ಕೇಳಿದ್ರೆ ಬೆರಗಾಗ್ತೀರಿ!

ಐಐಟಿ ದೆಹಲಿಯ ಇಬ್ಬರು ವಿದ್ಯಾರ್ಥಿಗಳು ಜಾನುವಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಆನ್‌ಲೈನ್ ಪ್ಲಾಟ್‌ಫಾರ್ಮ್ 'ಅನಿಮಾಲ್' (animall) ಅನ್ನು ಪ್ರಾರಂಭಿಸಿ ಯಶಸ್ಸು ಕಂಡ ಸಾಧನೆಯ ಕಥೆಯಿದು. 'ಅನಿಮಾಲ್' ಆದಾಯವು 2022ರ ಆರ್ಥಿಕ ವರ್ಷದಲ್ಲಿ 7.4 ಕೋಟಿ ರೂ. ಆಗಿದ್ದು, ಹೀಗಾಗಿ ಈ ಕಂಪನಿಯ ಮೌಲ್ಯವು ಗಮನಾರ್ಹವಾದ 565 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಸ್ಟಾರ್ಟ್‌ಅಪ್ ಪೀಡಿಯಾ ವರದಿ ಮಾಡಿದೆ.

ಅನಿಮಾಲ್' ಎಂದರೇನು?: 'ಅನಿಮಾಲ್' ಜಾನುವಾರುಗಳನ್ನು ಮಾರಾಟ - ಖರೀದಿ ಮಾಡುವ ಮಾರುಕಟ್ಟೆಯಾಗಿದೆ. ಇದು ದನ ಮತ್ತು ಎಮ್ಮೆಗಳ ಖರೀದಿ ಮತ್ತು ಮಾರಾಟಕ್ಕಾಗಿ ಆನ್‌ಲೈನ್ ವಹಿವಾಟುಗಳನ್ನು ನಡೆಸುತ್ತದೆ. ಅನಿಮಾಲ್ ಅನ್ನು 2019 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಅನಿಮಾಲ್ ನ ಪೂರ್ಣ ಹೆಸರು "ಅನಿಮಾಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್" ಆಗಿದೆ.

 ಜಾನುವಾರು ಮಾರಾಟಕ್ಕೆ ಆನ್‌ಲೈನ್ ಪ್ಲಾಟ್‌ಫಾರ್ಮ್, ಆದಾಯ ನೋಡಿ!

ಅನಿಮಾಲ್ ಸ್ಥಾಪಕರು ಯಾರು?

ಅನಿಮಲ್ ಅನ್ನು ಅನುರಾಗ್ ಬಿಸೋಯ್, ಕೀರ್ತಿ ಜಾಂಗ್ರಾ (ಸಿಒಒ), ಲಿಬಿನ್ ವಿ ಬಾಬು, ನೀತು ವೈ, ನೀತು ಯಾದವ್ (ಸಿಇಒ) ಮತ್ತು ಸಂದೀಪ್ ಮಹಾಪಾತ್ರ ಇವರು ಸ್ಥಾಪಿಸಿದ್ದಾರೆ. ಅನಿಮಲ್‌ನ ಪ್ರಮುಖ ಹೂಡಿಕೆದಾರರು ಶಾದಿ.ಕಾಮ್‌ನ ಸ್ಥಾಪಕ ಮತ್ತು ಸಿಇಒ ಅನುಪಮ್ ಮಿತ್ತಲ್, ಜೊಮ್ಯಾಟೋ ಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯೆಲ್, ಅಂಜಲಿ ಬನ್ಸಾಲ್, ಮೋಹಿತ್ ಕುಮಾರ್ ಮತ್ತು ಸಾಹಿಲ್ ಬರುವಾ ಸೇರಿದಂತೆ ಇತರ ಮೂವರಿದ್ದಾರೆ.

ಅನಿಮಾಲ್ ನ ಯಶಸ್ಸಿನ ಕಥೆ:

ಐಐಟಿ-ದೆಹಲಿಯಲ್ಲಿ ಓದುತ್ತಿರುವಾಗ ಒಂದೇ ಕೊಠಡಿ ಹಂಚಿಕೊಂಡು ಆತ್ಮೀಯವಾಗಿದ್ದ ನೀತು ಯಾದವ್ ಮತ್ತು ಕೀರ್ತಿ ಜಂಗ್ರಾ ಅವರು ತಾವು ಕಂಡ ಕನಸನ್ನು ನನಸಾಗಿಸಲು ಯತ್ನಿಸಿದರು. ಇವರು ಹೈನುಗಾರರಿಗೆ ನ್ಯಾಯೋಚಿತ ಮೌಲ್ಯ ಮತ್ತು ಅವಕಾಶ ದೊರಕಿಸಿಕೊಡಲು ಬಯಸಿದ್ದರು. 2019ರ ನವೆಂಬರ್ ನಲ್ಲಿ, ನೀತು ಅನಿಮಾಲ್ ಅನ್ನು ಪ್ರಾರಂಭಿಸಲು ಕೀರ್ತಿಯನ್ನು ನೇಮಿಸಿಕೊಂಡು, ತಮ್ಮಿಬ್ಬರು ಪ್ರತಿಲಿಪಿ ಸಹೋದ್ಯೋಗಿಗಳೊಂದಿಗೆ ಅನ್‌ಲೈನ್ ಜಾನುವಾರು ಮಾರುಕಟ್ಟೆ ಆರಂಭಿಸಿದರು. ಈ ತಂಡ ಬೆಂಗಳೂರಿನಲ್ಲಿ ಒಂದು ಬಾಡಿಗೆ ಕೊಠಡಿ ಪಡೆದು ಅನಿಮಾಲ್ ಗಾಗಿ ಕಾರ್ಯನಿರ್ವಹಿಸತೊಡಗಿತು.

ಹೈನುಗಾರ ರೈತರ ಜೀವನವನ್ನು ಸುಧಾರಿಸುವ ಮತ್ತು ಜಾನುವಾರು ವ್ಯಾಪಾರ ಮತ್ತು ಡೈರಿ ಕೃಷಿ ಉದ್ಯಮಗಳನ್ನು ಹೆಚ್ಚು ಲಾಭದಾಯಕವಾಗಿಸುವ ಉದ್ದೇಶದಿಂದ ಅನಿಮಾಲ್ ಅನ್ನು ಸ್ಥಾಪಿಸಲಾಗಿದೆ. ಪ್ರತಿ ಇತರ ಸ್ಟಾರ್ಟ್‌ಅಪ್‌ಗಳಂತೆ ಆರಂಭದಲ್ಲಿ ತೊಂದರೆಗಳನ್ನು ಎದುರಿಸಿದ ನಂತರ ಅವರು ಎಮ್ಮೆಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಜನರಿಂದ ಹೆಚ್ಚು ಹೆಚ್ಚು ಆರ್ಡರ್‌ಗಳನ್ನು ಪಡೆಯಲು ಪ್ರಾರಂಭಿಸಿದರು.

ಈ ಡಿಜಿಟಲ್ ಪ್ಲಾಟ್‌ಫಾರ್ಮ್ ನಲ್ಲಿ ಜಾನುವಾರುಗಳ ಮಾರಾಟ, ಕೊಳ್ಳುವಿಕೆ ಮಾತ್ರವಲ್ಲದೆ ಪ್ರಾಣಿಗಳ ಆರೋಗ್ಯ ಸೇವೆಗಳನ್ನು ಸಹ ಒದಗಿಸಲಾಗುತ್ತಿದೆ. 2022 ಆರ್ಥಿಕ ವರ್ಷದಲ್ಲಿ ಕಂಪನಿಯು ತನ್ನ ಆದಾಯದ ಶೇಕಡ 90 ಅನ್ನು ಜಾನುವಾರು ವ್ಯಾಪಾರದಿಂದ ಮಾಡಿದ್ದರೆ, ಉಳಿದ ಶೇಕಡ 10 ಆದಾಯವನ್ನು ಆರೋಗ್ಯ ರಕ್ಷಣೆ, ಕೃತಕ ಗರ್ಭಧಾರಣೆ ಮತ್ತು ಸೇಲ್ಸ್ ಕಮಿಷನ್‌ನಿಂದ ಬಂದಿದೆ. 2021ರ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂಪಾಯಿಯಿಂದ ಆರಂಭಗೊಂಡ ಉದ್ಯಮವು, 2022 ರ ಆರ್ಥಿಕ ವರ್ಷದಲ್ಲಿ 148 ಪಟ್ಟು ಹೆಚ್ಚಾಗಿ 7.4 ಕೋಟಿ ರೂಪಾಯಿ ವಹಿವಾಟು ಮಾಡಿಕೊಂಡಿದೆ. ಹೀಗೆ ತಮ್ಮ ಸ್ವಂತ ಪ್ರಯತ್ನದಿಂದ ಆದಾಯವನ್ನು ಹೆಚ್ಚಿಸಿಕೊಂಡ ಹಲವಾರು ಸ್ಪೂರ್ತಿದಾಯಕ ವ್ಯಕ್ತಿಗಳ ಬಗ್ಗೆ ನಾವು ಈ ಹಿಂದೆ ಮಾಹಿತಿ ನೀಡಿದ್ದೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+