ಸಿಲಿಕಾನ್ ಸಿಟಿಯಲ್ಲಿ ನೆಲೆಸಿರುವ ಕುರಿಯನ್ ಬದರ್ಸ್ ಎಂದೇ ಖ್ಯಾತರಾದ ಜಾರ್ಜ್ ಮತ್ತು ಥಾಮಸ್ ಅವರು ತಮ್ಮ ಯಶಸ್ಸಿನ ಪ್ರಯಾಣದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. ಥಾಮಸ್ ಕುರಿಯನ್ ಹಾಗೂ ಜಾರ್ಜ್ ಕುರಿಯನ್ ಇವರಿಬ್ಬರು ತನ್ನ ಅವಳಿ ಸಹೋದರರಾಗಿದ್ದಾರೆ. ಇವರ ಮುಂದೆ ಅತ್ಯಂತ ಸವಾಲಿನ ವೃತ್ತಿ ಮಾರ್ಗಗಳಿದ್ದರೂ, ಅವನ್ನು ಮೀರಿಸುವಂತಹ ಅವಳಿಗಳ ನಡುವಿನ ಬಾಂಧವ್ಯವಿದೆ.
ಮೂಲತಃ ಕೇರಳದ ಹಿಂದುಳಿದ ವರ್ಗದಿಂದ ಬಂದ, ಕುರಿಯನ್ ಸಹೋದರರ ಮೇಲೆ ಅವರ ತಾಯಿಯ ಪ್ರಭಾವ ಹೆಚ್ಚಾಗಿ ಬೀರಿತ್ತು. ಇದೇ ಇಂದು ಅವರನ್ನು ಡೈನಾಮಿಕ್ ಜೋಡಿಯಾಗಿ ರೂಪಿಸಿತು. ಕುರಿಯನ್ ಅವಳಿ ಸಹೋದರರು ಬೆಂಗಳೂರಿನ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರು.

ಮುಂದೆ ಇಬ್ಬರೂ ಐಐಟಿ ಮದ್ರಾಸ್‌ನಲ್ಲಿ ವ್ಯಾಸಂಗ ಮಾಡಿದರು. ಹದಿನಾರನೇ ವಯಸ್ಸಿನಲ್ಲಿ, ಯುನೈಟೆಡ್ ಸ್ಟೇಟ್ಸ್‌ಗೆ ಬಂದ ಅವರು, ವಿದ್ಯಾರ್ಥಿವೇತನ ಪಡೆದುಕೊಂಡು ತಮ್ಮ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು. ಇದಾದ ಬಳಿಕ ಟೆಕ್ ಉದ್ಯಮದಲ್ಲಿ ಸಹೋದರರಿಬ್ಬರು ಪ್ರತ್ಯೇಕ ವೃತ್ತಿ ಜೀವನದ ಪ್ರಯಾಣವನ್ನು ಆರಂಭಿಸಿದರು.
1996 ರಲ್ಲಿ ಅವರು ಉದ್ಯೋಗಗಳನ್ನು ಬೇರೆ ಬೇರೆಯಾಗಿ ಆಯ್ಕೆ ಮಾಡಿಕೊಂಡಾಗ ಅವರ ಕಥೆಯು ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಜಾರ್ಜ್ ಮೆಕಿನ್ಸೆಗೆ ಮತ್ತು ಥಾಮಸ್ ಒರಾಕಲ್ ಗೆ ಉದ್ಯೋಗಕ್ಕಾಗಿ ಸೇರ್ಪಡೆಗೊಂಡರು. ಅಂದು ಅವರ ಈ ಉದ್ಯೋಗ ಬದಲಾವಣೆಯೂ ಇಂದು ಪ್ರಮುಖ ಟೆಕ್ ದೈತ್ಯರ ಸಿಇಒಗಳಾಗಿ ಅವರ ಪ್ರಸ್ತುತ ಪಾತ್ರಗಳ ಮುನ್ನುಡಿಯಾಯಿತು. ಜಾರ್ಜ್ ಅವರು ಡೇಟಾ ಸಂಗ್ರಹಣಾ ಶಕ್ತಿ ಕೇಂದ್ರವಾದ ನೆಟ್ಆಪ್ (ಡೇಟಾ ಸ್ಟೋರೇಜ್ ಪವರ್ ಹೌಸ್ ) ಮತ್ತು ಥಾಮಸ್ ಅವರು ಗೂಗಲ್ ಕ್ಲೌಡ್‌ನ ಚುಕ್ಕಾಣಿ ಹಿಡಿದಿದ್ದಾರೆ.
"ಭಾರತದಿಂದ ಅಮೆರಿಕಕ್ಕೆ ಬಂದಾಗ ಆ ಪ್ರಯಾಣವು ಸವಾಲುಗಳಿಲ್ಲದೆ ಇರಲಿಲ್ಲ, ಆದರೆ ನಾವಿಬ್ಬರು ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು, ಇದು ನಮ್ಮ ಬಂಧವನ್ನು ಮತ್ತಷ್ಟು ಬಲಪಡಿಸಿತು. ನಮ್ಮ ಜೀವನದ ಬಹುಪಾಲು ನಾವು ಉತ್ತಮ ಸ್ನೇಹಿತರಾಗಿದ್ದೇವೆ," ಎಂದು ಜಾರ್ಜ್ ಬಿಸಿನೆಸ್ ಇನ್‌ಸೈಡರ್ ಗೆ ತಿಳಿಸಿದ್ದಾರೆ.
ಗೂಗಲ್ ಕ್ಲೌಡ್ ಅನ್ನು ಪುನರುಜ್ಜೀವನಗೊಳಿಸಿದ ಹೆಗ್ಗಳಿಕೆ ಥಾಮಸ್ ಕುರಿಯನ್ ಅವರಿಗೆ ಹೆಚ್ಚಾಗಿ ಸಲ್ಲುತ್ತದೆ. ಜಾರ್ಜ್ ಅವರು ಪಾರದರ್ಶಕತೆ ಮತ್ತು ಮಲ್ಟಿ ಇಯರ್ ವಿಷನ್ ದೃಷ್ಟಿಕೋನದ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳುತ್ತಿದ್ದು, ಇವುಗಳು ಥಾಮಸ್ ಅವರಿಗೆ ಗೂಗಲ್ ಕ್ಲೌಡ್‌ನಲ್ಲಿ ಅಧಿಕಾರ ವಹಿಸಿಕೊಂಡಾಗ ಪಾಠಗಳಾಯಿತು.
ಜಾರ್ಜ್ ನೆಟ್‌ಆಪ್‌ನ ರೂಪಾಂತರವನ್ನು ನ್ಯಾವಿಗೇಟ್ ಮಾಡುವುದು ಮತ್ತು ಉದ್ಯಮದ ದೈತ್ಯರ ವಿರುದ್ಧ ಗೂಗಲ್ ಕ್ಲೌಡ್ ಅನ್ನು ಮುನ್ನಡೆಸುವ ಥಾಮಸ್ ಹೀಗೆ ಅವರ ವಿಭಿನ್ನ ಪಾತ್ರಗಳಲ್ಲಿನ ವ್ಯತ್ಯಾಸಗಳ ನಡುವೆಯೂ, ಈ ಅವಳಿ ಸಹೋದರರ ನಡುವೆ ತಮ್ಮ ಸಂಸ್ಥೆಗಳನ್ನು ಪುನರ್ ರೂಪಿಸುವ ಬದ್ಧತೆಯಲ್ಲಿ ಇವರಿಬ್ಬರ ನಡುವೆ ಸಾಮಾನ್ಯ ಹೋಲಿಕೆಗಳು ಕಂಡುಬರುತ್ತದೆ.
ಯಶಸ್ಸಿನ ಕಥೆಗಳು ಸಾಮಾನ್ಯವಾಗಿ ಹೀಗೆ ವೈಯಕ್ತಿಕ ಒಡನಾಟ ಹೊಂದಿರದ ಜಗತ್ತಿನಲ್ಲಿ, ಕುರಿಯನ್ ಸಹೋದರರು ಕುಟುಂಬದ ಶಕ್ತಿ ಮತ್ತು ಅನುಭವವನ್ನು ಹಂಚಿಕೊಳ್ಳುವ ಪ್ರಯಾಣವು ನಿಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಎಂಬುವುದನ್ನು ನೆನಪಿಸುತ್ತಾರೆ.
ಅವಳಿ ಸಹೋದರರು ಕೇವಲ ಟೆಕ್ ಪ್ಲೇಬುಕ್ ಅನ್ನು ಬರೆಯುತ್ತಿಲ್ಲ, ಅದನ್ನು ಸಾಬೀತುಪಡಿಸುತ್ತಿದ್ದಾರೆ. ಒಟ್ಟಾರೆ ನಮ್ಮ ಜೊತೆಯಲ್ಲಿ ಓರ್ವ ಉತ್ತಮ ಸಹೋದರ ಇದ್ದರೆ, ಜಗತ್ತಿನಲ್ಲಿ ಎಲ್ಲಾ ಬದಲಾವಣೆಗಳನ್ನು ಮಾಡಬಹುದು ಎಂದು ಕುರಿಯನ್ ಬ್ರದರ್ಸ್ ಸಾಬೀತುಪಡಿಸಿದ್ದಾರೆ.


Click it and Unblock the Notifications