ಇನ್ನು ಮುಂದಿನ ಕೆಲ ವಾರಗಳಲ್ಲೇ ದೇಶದಾದ್ಯಂತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಕೇಂದ್ರಗಳು ಸೇರಿದಂತೆ ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಪ್ಲೇಸ್‌ಮೆಂಟ್ ಸೀಸನ್ ಪ್ರಾರಂಭವಾಗಲಿದೆ.
ಈ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಲು ಸಂದರ್ಶನಗಳಿಗೆ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ಐಐಟಿ ರಿಸರ್ಚ್ ಇಂಟರ್ನ್ ಮಾಡಿರುವ ಎಕ್ಸ್ ಪೋಸ್ಟ್ ಈಗ ವೈರಲ್ ಆಗಿದೆ.

ರಿಸರ್ಚ್ ಇಂಟರ್ನ್, ಹೃತಿಕ್ ತಲ್ವಾರ್ ಅವರು ಮಾಡಿರುವ ಪೋಸ್ಟ್ ಇದಾಗಿದ್ದು, "ತನಗೆ ಜ್ಯೊಮಾಟೊದಲ್ಲಿ ಉದ್ಯೋಗವನ್ನು ಹೇಗೆ ನೀಡಲಾಯಿತು ಮತ್ತು ಇದಾದ ಬಳಿಕ ಉದ್ಯೋಗದ ಪ್ರಸ್ತಾಪವನ್ನು ಯಾವ ರೀತಿ ಹಿಂತೆಗೆದುಕೊಳ್ಳಲಾಯಿತು," ಎಂದು ಬರೆದುಕೊಂಡಿದ್ದಾರೆ.
ಹೃತಿಕ್ ತಲ್ವಾರ್ ಅವರ ಪೋಸ್ಟ್ ಪ್ರಕಾರ, ಜೊಮ್ಯಾಟೊದ ಕಾರ್ಯನಿರ್ವಾಹಕರು ಐಐಟಿ ದೆಹಲಿ ಕ್ಯಾಂಪಸ್‌ಗೆ ಭೇಟಿ ನೀಡಿ ಸಂದರ್ಶನದ ಬಳಿಕ ಅವರಿಗೆ 1.6 ಕೋಟಿ ರೂಪಾಯಿಗಳ ಪ್ಯಾಕೇಜ್‌ನೊಂದಿಗೆ ಅಲ್ಗಾರಿದಮ್ ಇಂಜಿನಿಯರ್ ಹುದ್ದೆಯ ಉದ್ಯೋಗದ ಆಫರ್ ನೀಡಿದರು. ಆದರೆ ಉದ್ಯೋಗ ಸಿಕ್ಕ ಖುಷಿ ಕೇವಲ ಅಲ್ಪಕಾಲಿಕವಾಗಿತ್ತು ಎಂದಿದ್ದಾರೆ.
ಆಫರ್ ಹಿಂಪಡೆದುಕೊಂಡಿದ್ದು ಯಾಕೆ?
ಕಂಪನಿಯ ನಿರ್ಬಂಧಗಳನ್ನು ಉಲ್ಲೇಖಿಸಿ ಜೊಮ್ಯಾಟೊ ನಂತರ ಉದ್ಯೋಗ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು. ಹೃತಿಕ್ ಅವರ ಪೋಸ್ಟ್ ಹಲವಾರು ರೀಟ್ವೀಟ್‌ಗಳು ಮತ್ತು ಕಾಮೆಂಟ್‌ಗಳನ್ನು ಬಂದಿದ್ದು, ನೆಟ್ಟಿಗರು ಸಂದೇಹ ಮತ್ತು ಕುತೂಹಲವನ್ನು ತಮ್ಮ ಕಾಮೆಂಟ್ ನಲ್ಲಿ ವ್ಯಕ್ತಪಡಿಸಿದ್ದಾರೆ.
ವರದಿ ಮಾಡಿರುವ 1.6 ಕೋಟಿ ರೂಪಾಯಿ ಆಫರ್ ನಿಖರವಾಗಿದೆಯೇ ಅಥವಾ ತಪ್ಪಾಗಿ ಟೈಪ್ ಮಾಡಲಾಗಿದೆಯೇ ಎಂದು ಕೆಲವು ಬಳಕೆದಾರರು ಪ್ರಶ್ನಿಸಿದ್ದಾರೆ. ಇದು 16 ಲಕ್ಷದ ಹೆಚ್ಚು ತೋರಿಕೆಯ ಅಂಕಿಅಂಶವನ್ನು ಸೂಚಿಸುತ್ತದೆ. ಅವರಿಗೆ ನಿಜವಾಗಿ ಜೊಮ್ಯಾಟೊದಿಂದ ರೂ 1.6 ಕೋಟಿ ಆಫರ್ ನೀಡಲಾಗಿದೆಯೇ ಅಥವಾ ಇಲ್ಲವೇ ಎಂದು ಕೇಳಿದರು.
"ಇದು 16 ಲಕ್ಷ ರೂಪಾಯಿ ಆಗಿದ್ದು, 1.6 crore ಎಂದು ತಪ್ಪಾಗಿ ಟೈಪ್ ಮಾಡಲಾಗಿದೆಯೇ," ಎಂದು ಕೆಲವು ಬಳಕೆದಾರರು ಪ್ರಶ್ನಿಸಿದ್ದಾರೆ. "ನಾನು ಸುದ್ದಿಯನ್ನು ಓದಿದ ಕ್ಷಣದಲ್ಲಿ ಇದು ಮಾರ್ಕೆಟಿಂಗ್ ತಂತ್ರ ಎಂದು ನನಗೆ ಅನಿಸಿತು. ಜೊಮ್ಯಾಟೊದಂತಹ ಕಂಪನಿಯು ಫ್ರೆಶರ್‌ಗೆ 1.6 ಕೋಟಿ ನೀಡಲು ಸಾಧ್ಯವಿಲ್ಲ," ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಘಟನೆಯು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಪ್ರಕ್ರಿಯೆಯ ಅನಿರೀಕ್ಷಿತ ಸ್ವರೂಪದ ಮೇಲೆ ಬೆಳಕು ಚೆಲ್ಲುವುದು ಖಂಡಿತಾ. ಮಾತ್ರವಲ್ಲದೇ ಇದು ಉದ್ಯೋಗ ನೇಮಕಾತಿ ಮಾಡುವವರು ಮತ್ತು ಅಭ್ಯರ್ಥಿಗಳ ನಡುವಿನ ಮಾತುಕತೆಯ ನಡುವಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಜೊತೆಗೆ ಇಂತಹ ವಹಿವಾಟುಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.


Click it and Unblock the Notifications