ಪ್ರತಿ ವರ್ಷವೂ ಕೂಡಾ ನಾವು ದಂಡದಿಂದ ತಪ್ಪಿಸಿಕೊಳ್ಳಬೇಕಾದರೆ ಅವಧಿಗೂ ಮುನ್ನವೇ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಬೇಕಾಗುತ್ತದೆ. 2022-23ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಗಡುವು ಇಂದು (ಜುಲೈ 31) ಕೊನೆಗೊಳ್ಳಲಿದೆ. 2022-23ರ ಹಣಕಾಸು ವರ್ಷದಲ್ಲಿ ಇದುವರೆಗೆ 6 ಕೋಟಿ ರೂಪಾಯಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಭಾನುವಾರ ತಿಳಿಸಿದೆ.
ಭಾನುವಾರ ಸಂಜೆಯವರೆಗೆ ಸುಮಾರು 27 ಲಕ್ಷ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ಅದು ಹೇಳಿದೆ. ಈ ರಿಟರ್ನ್ ಫೈಲಿಂಗ್ ಸೀಸನ್‌ನಲ್ಲಿ ದೇಶದಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಕಟ್ಟುವವರು ಯಾರು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು?. ನೀವು ಈ ಬಗ್ಗೆ ಆಲೋಚನೆ ಮಾಡಿ, ದೇಶದಲ್ಲಿ ಅತೀ ಅಧಿಕ ತೆರಿಗೆ ಪಾವತಿ ಮಾಡುವವರು ಅಂಬಾನಿ, ಅದಾನಿ, ಟಾಟಾ- ಬಿರ್ಲಾ ಮೊದಲಾದವರು ಆಗಿರಬಹುದು ಎಂದುಕೊಳ್ಳಬಹುದು.

ಆದರೆ ನೀವು ಅಂದುಕೊಳ್ಳುವುದು ತಪ್ಪಾಗುತ್ತದೆ. ಅದಕ್ಕೆ ಸಾಮಾನ್ಯ ಕಾರಣ ಇವೆರಲ್ಲರೂ ದೇಶದ ಅತೀ ಶ್ರೀಮಂತ ವ್ಯಕ್ತಿಗಳೆನ್ನುವುದು ಆಗಿದೆ. ದೇಶದಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಟಾಟಾ, ಬಿರ್ಲಾ ಅತೀ ಶ್ರೀಮಂತ ವ್ಯಕ್ತಿಗಳೆನಿಸಿಕೊಂಡಿದ್ದಾರೆ. ಹಾಗಾಗಿ ಸಾಮಾನ್ಯವಾಗಿಯೇ ಅಧಿಕ ತೆರಿಗೆ ಪಾವತಿ ಮಾಡುವವರಿವರು ಎಂದು ನೀವು ಅಂದುಕೊಳ್ಳಬಹುದು. ಆದರೆ ನೀವು ಅಂದುಕೊಳ್ಳುವುದು ಸಂಪೂರ್ಣವಾಗಿ ತಪ್ಪಾಗಿದೆ.
ದೇಶದಲ್ಲಿ ಅಧಿಕ ತೆರಿಗೆ ಪಾವತಿಸುವವರು ಯಾರು?
ದೇಶದಲ್ಲಿ ಅತೀ ಅಧಿಕ ಸಂಪಾದನೆ ಮಾಡುವವರು ಮುಕೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಅಥವಾ ಇತರ ಯಾವುದೇ ಕೈಗಾರಿಕೋದ್ಯಮಿಗಳು ಆಗಿದ್ದರೂ ಕೂಡಾ ಅಧಿಕ ತೆರಿಗೆಯನ್ನು ಇವರು ಪಾವತಿಸುತ್ತಿಲ್ಲ. ಆಶ್ಚರ್ಯವೆಂದರೆ ಟಾಪ್ 10 ಕಾರ್ಪೋರೇಟ್ ತೆರಿಗೆದಾರರ ಪಟ್ಟಿಯಲ್ಲಿ ಅದಾನಿ ಗ್ರೂಪ್ ಇಲ್ಲವೆ ಇಲ್ಲ. ಈ ನಡುವೆ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರರು ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಆಗಿದ್ದಾರೆ.
ಆದಾಯ ತೆರಿಗೆ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಕಳೆದ ವರ್ಷ ಅಂದರೆ 2021-22 ರ ಆರ್ಥಿಕ ವರ್ಷದಲ್ಲಿ ಅಕ್ಷಯ್ ಕುಮಾರ್ ಭಾರತದ ಅತಿ ಹೆಚ್ಚು ತೆರಿಗೆದಾರರಾಗಿದ್ದಾರೆ. ಅಕ್ಷಯ್ ಕುಮಾರ್ 2022 ರಲ್ಲಿ 29.5 ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಡೆಪಾಸಿಟ್ ಮಾಡಿದ್ದರು. ಹಾಗೆಯೇ ತನ್ನ ವರ್ಷದ ಆದಾಯವನ್ನು 486 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಬಾಲಿವುಡ್‌ನ ದೊಡ್ಡ ತಾರೆಗಳಲ್ಲಿ ಒಬ್ಬರಾಗಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಅಕ್ಷಯ್ ಕುಮಾರ್ ವರ್ಷಕ್ಕೆ ಸುಮಾರು 4-5 ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ. ಇದಲ್ಲದೆ, ಅಕ್ಷಯ್ ಕುಮಾರ್ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಮತ್ತು ಕ್ರೀಡಾ ತಂಡವನ್ನು ನಡೆಸುತ್ತಿದ್ದಾರೆ.
ವಿವಿಧ ಬ್ರಾಂಡ್‌ಗಳ ಅಂಬಾಸಿಡರ್ ಕೂಡಾ ಅಕ್ಷಯ್ ಕುಮಾರ್ ಆಗಿದ್ದು, ಸಾಕಷ್ಟು ಸಂಪಾದನೆಯನ್ನು ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ 2022 ಕ್ಕಿಂತ ಮುಂಚೆಯೇ ಭಾರತದಲ್ಲಿ ಅಗ್ರ ಆದಾಯ ತೆರಿಗೆ ಪಾವತಿದಾರರಾಗಿದ್ದರು. 2020-21 ಹಣಕಾಸು ವರ್ಷದಲ್ಲಿ ಅಕ್ಷಯ್ ಕುಮಾರ್ ಅವರು 25.5 ಕೋಟಿ ರೂಪಾಯಿಗಳ ಆದಾಯ ತೆರಿಗೆಯನ್ನು ಡೆಪಾಸಿಟ್ ಮಾಡಿದ್ದರು.
ಈಗ ಮುಕೇಶ್ ಅಂಬಾನಿ, ಗೌತಮ್ ಅದಾನಿ ಅಥವಾ ರತನ್ ಟಾಟಾ ಏಕೆ ದೇಶದ ಅಗ್ರ ತೆರಿಗೆ ಪಾವತಿದಾರರಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಉದ್ಯಮಿಗಳು ವೈಯಕ್ತಿಕ ಆಸ್ತಿಯನ್ನು ಹೊಂದಿಲ್ಲ, ಆದರೆ ಅವರ ಕಂಪನಿಗಳ ಹೆಸರಿನಲ್ಲಿ ಆಸ್ತಿಯನ್ನು ಹೊಂದಿದ್ದಾರೆ. ಈ ನಡುವೆ ಗಳಿಕೆಯು ಅವರ ಕಂಪನಿಗಳ ಪಾಲಿಗೆ ಹೋಗುತ್ತದೆ. ಆದ್ದರಿಂದಾಗಿ ಅವರ ಕಂಪನಿಯು ಕಾರ್ಪೊರೇಟ್ ಆದಾಯ ತೆರಿಗೆಯನ್ನು ಪಾವತಿಸುತ್ತದೆ.
1. ಟಿಸಿಎಸ್: 1404 ಮಿಲಿಯನ್ ಡಾಲರ್
2. ರಿಲಯನ್ಸ್ ಇಂಡಸ್ಟ್ರೀಸ್: 937.7 ಮಿಲಿಯನ್ ಡಾಲರ್
3. ಇನ್ಫೋಸಿಸ್: 883.3 ಮಿಲಿಯನ್ ಡಾಲರ್
4. ಐಸಿಐಸಿಐ ಬ್ಯಾಂಕ್: 844.9 ಮಿಲಿಯನ್ ಡಾಲರ್
5. ಐಟಿಸಿ: 580.9 ಮಿಲಿಯನ್ ಡಾಲರ್
6. ಎಚ್‌ಸಿಎಲ್: 417.3 ಮಿಲಿಯನ್ ಡಾಲರ್
7. ಎಚ್‌ಯುಎಲ್: 355.6 ಮಿಲಿಯನ್ ಡಾಲರ್
8. ಬಜಾಜ್ ಫೈನಾನ್ಸ್: 272.2 ಮಿಲಿಯನ್ ಡಾಲರ್
9. ಲಾರ್ಸೆನ್ & ಟೌಬ್ರೊ: 261.9 ಮಿಲಿಯನ್ ಡಾಲರ್
10. ಅಲ್ಟ್ರಾಟೆಕ್ ಸಿಮೆಂಟ್: 149.3 ಮಿಲಿಯನ್ ಡಾಲರ್
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications