ಅತ್ಯಂತ ಸಿರಿವಂತ, ಬಿಲಿಯನೇರ್ ಉದ್ಯಮಿಯಾಗಿರುವ ಕುಶಾಲ್ ಪಾಲ್ ಸಿಂಗ್ ಅವರ ಜೀವನ ಗಮನಿಸಿದರೆ ಅವರೊಬ್ಬ ಯಶಸ್ವಿ ವರ್ಕ್ ಲೈಫ್ ಹೊಂದಿದ ವ್ಯಕ್ತಿಯಾಗಿದ್ದಾರೆ. ಆದರೆ ಹೆಚ್ಚಿನ ಜನರಿಗೆ ಕುಶಾಲ್ ಪಾಲ್ ಸಿಂಗ್ ಚಿರಪರಿಚಿತರಲ್ಲದಿದ್ದರೂ ಅವರ ಸಂಸ್ಥೆಯ ಹೆಸರು ಮಾತ್ರ ಗೊತ್ತಿದೆ. 'ಪ್ರಾಪರ್ಟಿ ಟೈಕೂನ್' ಆಗಿರುವ ಕುಶಾಲ್ ಪಾಲ್ ಸಿಂಗ್ ಅವರು, 1961 ರಲ್ಲಿ ಭಾರತೀಯ ಸೇನೆಯನ್ನು ತೊರೆದು, ನಂತರ ಅವರ ಮಾವ 1946ರಲ್ಲಿ ಸ್ಥಾಪಿಸಿದ ಡಿಎಲ್ಎಫ್ (DLF) ಲಿಮಿಟೆಡ್ ಗೆ ಸೇರ್ಪಡೆಗೊಂಡರು.
ಕೆಲ ಸಮಯದ ಬಳಿಕ ಸಿಂಗ್ ರೈತರಿಂದ ಭೂಮಿಯನ್ನು ಖರೀದಿಸಿ ಅದನ್ನು ದೆಹಲಿ ನಗರದ ಹೊರಗೆ ಪ್ರಸ್ತುತ ಗುರ್‌ಗ್ರಾಮದಲ್ಲಿರುವ ಡಿಎಲ್ಎಫ್ ಸಿಟಿಯನ್ನು ನಿರ್ಮಿಸಲು ಬಳಸಿಕೊಂಡರು. ಇಂದು, ಡಿಎಲ್ಎಫ್ ದೆಹಲಿಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದ್ದು ಇದರ ಅಧ್ಯಕ್ಷರಾಗಿ ಅವರ ಮಗ ರಾಜೀವ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇದು ಭಾರತದಲ್ಲಿ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿಯಾಗಿದೆ.

ಸಿಂಗ್ ಅವರು ಡಿಎಲ್‌ಎಫ್‌ನ ಬಾಡಿಗೆ ಬಿಸಿನೆಸ್ ಅನ್ನು ಸಿಂಗಪುರದ ಸರ್ಕಾರಿ ವೆಲ್ತ್ ಫಂಡ್‌ಗೆ 2017 ರ ಆಗಸ್ಟ್‌ನಲ್ಲಿ 1.9 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ್ದರು. ಡಿಎಲ್‌ಎಫ್ ಹಾಗೂ ಜಿಐಸಿ ಜತೆಗಿನ ಡೀಲಕ್ಸ್ ವಸತಿ ಯೋಜನೆಯನ್ನು 2022ರಲ್ಲಿ ದಿಲ್ಲಿಯಲ್ಲಿ ಪರಿಚಯಿಸಲಾಯಿತು. 50 ವರ್ಷಗಳಿಗೂ ಹೆಚ್ಚು ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಸಿಂಗ್ ಅವರು 2020 ರ ಜೂನ್‌ನಲ್ಲಿ ನಿವೃತ್ತರಾದರು.
ಕೆಪಿ ಸಿಂಗ್ ಯಾರು?
ಉತ್ತರ ಪ್ರದೇಶದಲ್ಲಿ ಬುಲಂದ್‌ಶಹರ್‌ಗೆ ಸೇರಿದ ಕೆಪಿ ಸಿಂಗ್ ಅವರು ಪ್ರಸಿದ್ಧ ವಕೀಲರಾಗಿದ್ದ ಚೌಧರಿ ಮುಖ್ತಾರ್ ಸಿಂಗ್ ಅವರ ಕುಟುಂಬದಲ್ಲಿ ಜನಿಸಿದ್ದಾರೆ. ಉತ್ತರ ಪ್ರದೇಶದ ಮೀರತ್ ಕಾಲೇಜಿನಿಂದ ವಿಜ್ಞಾನ ಪದವಿಯನ್ನು ಪಡೆದುಕೊಂಡ ನಂತರ ಸಿಂಗ್ ಅವರು ಯುಕೆಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ಯುಕೆಯಲ್ಲಿನ ಬ್ರಿಟಿಷ್ ಅಧಿಕಾರಿಗಳ ಸೇವೆ ಆಯ್ಕೆ ಮಂಡಳಿಯು ಅವರನ್ನು ಭಾರತೀಯ ಸೇನೆಗೆ ಆಯ್ಕೆಗೊಳಿಸಲು ನೆರವಾಗಿತ್ತು. 1951 ರಲ್ಲಿ ಅವರು ಡೆಕ್ಕನ್ ಹಾರ್ಸ್‌ಗೆ ನೇಮಕಗೊಂಡರು.
ಆದರೆ ಸಿಂಗ್ ಅವರ ಮನಸ್ಸಿನಲ್ಲಿ ಬೇರೆಯೇ ಆಲೋಚನೆ ಇತ್ತು. ಅವರು 1960ರಲ್ಲಿ ಅಮೆರಿಕನ್ ಯೂನಿವರ್ಸಲ್ ಎಲೆಕ್ಟ್ರಿಕ್ ಕಂಪನಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದರು. ಶೀಘ್ರದಲ್ಲೇ ಅದು ಡಿಎಲ್‌ಎಫ್ ಯೂನಿವರ್ಸಲ್ ಲಿಮಿಟೆಡ್ ಜತೆ 1979ರಲ್ಲಿ ವಿಲೀನಗೊಂಡಿತ್ತು. ಚೌಧರಿ ರಘುವೇಂದರ್ ಸಿಂಗ್ ಅವರ ಬಳಿಕ ಕಂಪನಿಗೆ ಅವರು ವ್ಯವಸ್ಥಾಪಕ ನಿರ್ದೇಶಕರಾದರು. ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿ ಕುಶಾಲ್ ಪಾಲ್ ಸಿಂಗ್ 2008ರಲ್ಲಿ ಫೋರ್ಬ್ಸ್‌ನ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರು.
ಕೆಪಿ ಸಿಂಗ್ ಅವರ ಅಪಾರ ನಿವ್ವಳ ಮೌಲ್ಯ
ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಡಿಎಲ್‌ಎಫ್ ಸಿಟಿಯನ್ನು ನಿರ್ಮಿಸಿರುವ ಕೆಪಿ ಸಿಂಗ್ ಅವರು ಪ್ರಸ್ತುತ ಸುಮಾರು 11.1 ಬಿಲಿಯನ್ ಡಾಲರ್ (90,000 ಕೋಟಿ ರೂಪಾಯಿ) ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. ಕೆಪಿ ಸಿಂಗ್ ಅವರು ಗುರುಗ್ರಾಮದಲ್ಲಿ ಭೂಕಂಪ ತಡೆಯುವ ಕೆಲಸದ ಸ್ಥಳಗಳು, ವಸತಿ ಸಮುಚ್ಚಯಗಳು, ರಿಟೇಲ್ ಸೆಂಟರ್‌ಗಳು ಹಾಗೂ ಅತ್ಯಾಧುನಿಕ ಮನರಂಜನಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಗಮನಸೆಳೆದಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications