ರಾಜಸ್ತಾನದ ಉದಯಪುರ ಮದುವೆಗಳಿಗೆ ಅದರಲ್ಲೂ ವಿಶೇಷವಾಗಿ ಸೆಲೆಬ್ರಿಟಿಗಳ, ಬಾಲಿವುಡ್ ತಾರೆಯರ ಪ್ರಿಯವಾದ ತಾಣವಾಗಿದೆ. ಪ್ರಿಯಾಂಕಾ ಚೋಪ್ರಾ - ನಿಕ್ ಜೋನಾಸ್ ಅವರಂತಹ ಇಂಟರ್ ನ್ಯಾಷನಲ್ ಸೆಲೆಬ್ರಿಟಿಗಳು ಕೂಡಾ ಉದಯಪುರದಲ್ಲಿರುವ ಐಷಾರಾಮಿ ಉಮೈದ್ ಭವನ್ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅರಮನೆ-ಕಮ್- ಹೋಟೆಲ್ ಆಗಿರುವ ಈ ಬೃಹತ್ ಐಷಾರಾಮಿ ಕಟ್ಟಡದಲ್ಲಿ ಸುಮಾರು 347 ಕೊಠಡಿಗಳಿದ್ದು, ಇದು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾಗಿದೆ. ಈ ಐಷಾರಾಮಿ ಅರಮನೆಯು ಶಿವರಂಜನಿ ರಾಜೆ ಅವರಿಗೆ ಸೇರಿದ್ದಾಗಿದ್ದು, ಇವರು ರಾಜೆ ರಾಜಮನೆತನದ ಉದ್ಯಮಿಯಾಗಿದ್ದಾರೆ.

ಜೋಧಪುರದ ಗಜ್ ಸಿಂಗ್ - 2 ರ ಹಿರಿಯ ಮತ್ತು ಏಕೈಕ ಪುತ್ರಿಯಾಗಿದ್ದಾರೆ. ಇವರು ರಾಜಮನೆತನದ ಅದೃಷ್ಟದ ಭವಿಷ್ಯವನ್ನೇ ಬದಲಾಯಿಸಿದವರು ಎಂದರೂ ತಪ್ಪಾಗಲಾರದು. ಶಿವರಂಜನಿ ಅವರು ತಮ್ಮ ಕುಟುಂಬದ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಈ ಪೈಕಿ ಕೋಟೆಗಳು ಮತ್ತು ಅರಮನೆಗಳನ್ನು ವಸ್ತುಸಂಗ್ರಹಾಲಯಗಳು ಮತ್ತು ಹೋಟೆಲ್‌ಗಳಾಗಿ ಪರಿವರ್ತಿಸುವುದನ್ನು ಒಳಗೊಂಡಿದೆ.
ರಾಜೆ ಅವರು ಸುಮಾರು ಎರಡು ದಶಕಗಳ ಹಿಂದೆ ತಮ್ಮ ಕುಟುಂಬದ ವ್ಯವಹಾರ ಜಗತ್ತಿಗೆ ಕಾಲಿಸಿರಿಸಿದರು. ಈ ವೇಳೆ ಅವರ ಕುಟುಂಬದ ವ್ಯವಹಾರವು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿತ್ತು. ಅವರ ಕಿರಿಯ ಸಹೋದರ ಪೋಲೋ ಆಟದಲ್ಲಿನ ಬಹುದೊಡ್ಡ ಅಪಘಾತಕ್ಕೆ ಒಳಗಾಗಿ ಕೋಮಾದಲ್ಲಿದ್ದರು. ಅವರ ಚೇತರಿಕೆಗೆ ವರ್ಷಗಳೇ ಬೇಕಾಯಿತು.
ಶಿವರಂಜನಿ ರಾಜೆ ತಂದೆ ಮಹಾರಾಜರಾಗುವ ಮೊದಲು ಅವರ ಹಿಂದೆ ಇದ್ದ ಮಹಾರಾಜರು ವಿಮಾನ ಅಪಘಾತದಲ್ಲಿ ನಿಧನರಾದಾಗ ಗಜ್ ಸಿಂಗ್ - 2 ಅವರಿಗೆ ಕೇವಲ ನಾಲ್ಕು ವರ್ಷ ವಯಸ್ಸಾಗಿತ್ತು. ಉಮೈದ್ ಅರಮನೆಯನ್ನು ಮಹಾರಾಜ ಉಮೈದ್ ಸಿಂಗ್ ಅವರು 1943 ರಲ್ಲಿ ನಿರ್ಮಿಸಿದರು.
ಶಿವರಂಜನಿ ರಾಜೆ ಅವರು ಕುಟುಂಬದ ವ್ಯವಹಾರವನ್ನು ವಹಿಸಿಕೊಂಡು ರಾಜಮನೆತನಕ್ಕೆ ಬೇಕಾದ ಸಂಪತ್ತನ್ನು ಹೆಚ್ಚಿಸಲು ಅವರು ಸಾಹಸವನ್ನೇ ಮಾಡಿದರು. ಶಿವರಂಜಿನಿ ಬೆಳೆದಿದ್ದು ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ. ಯಾಕೆಂದರೆ ಅವರ ತಂದೆ ರಾಜತಾಂತ್ರಿಕ ಅಧಿಕಾರಿಯಾಗಿದ್ದರು.
ತಮ್ಮ ಆರನೇ ವಯಸ್ಸಿನಲ್ಲಿ ಭಾರತಕ್ಕೆ ಮರಳಿದಳು. ಬಳಿಕ ರಾಜೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಇಂಗ್ಲೆಂಡ್‌ಗೆ ತೆರಳಿ ಅಲ್ಲಿ ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರದಲ್ಲಿ ಅಧ್ಯಯನ ಮಾಡಿ ನಂತರ ನ್ಯೂಯಾರ್ಕ್‌ನಲ್ಲಿ ಫಿಲ್ಮ್‌ಮೇಕಿಂಗ್ ಕೋರ್ಸ್ ಮಾಡಿದರು.


Click it and Unblock the Notifications