ಭಾರತದಲ್ಲಿ ವಿವಿಧ ರೀತಿಯ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಯೂಟ್ಯೂಬರ್‌ಗಳು ಇದ್ದಾರೆ. ದಿನ ದಿನಕ್ಕೆ ಹೊಸ ಹೊಸ ಯೂಟ್ಯೂಬ್‌ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಆದರೆ ಈ ನಡುವೆ ಭಾರತದಲ್ಲಿ ಬರೋಬ್ಬರಿ 11 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಹೊಂದಿದ್ದಾರೆ. ಅದು ಬರೀ ಯೂಟ್ಯೂಬ್‌ನ ಸಂಪಾದನೆಯಿಂದಾಗಿ.!
ಸಿಆರ್‌ಇ ಮ್ಯಾಟ್ರಿಕ್ಸ್ (ರಿಯಲ್ ಎಸ್ಟೇಟ್ ಡೇಟಾ ಅನಾಲಿಟಿಕ್ಸ್ ಸಂಸ್ಥೆ) ದಾಖಲೆಯ ಪ್ರಕಾರ ಯೂಟ್ಯೂಬರ್ ಭುವನ್ ಬಾಮ್ ಅವರು ರಾಷ್ಟ್ರ ರಾಜಧಾನಿಯ ಗ್ರೇಟರ್ ಕೈಲಾಶ್ ಪ್ರದೇಶದ ಪ್ರಮುಖ ಏರಿಯಾದಲ್ಲಿ ಬರೋಬ್ಬರಿ 11 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಖರೀದಿಸಿದ್ದಾರೆ.

ಒಪ್ಪಂದದ ಮೇಲೆ ಅವರು 77 ಲಕ್ಷ ರೂಪಾಯಿಗಳ ಸ್ಟ್ಯಾಂಪ್ ಶುಲ್ಕವನ್ನು ಪಾವತಿಸಿದ್ದಾರೆ. ಬಂಗಲೆಯ ಒಟ್ಟಾರೆ ವಿಸ್ತೀರ್ಣ 2233 ಚದರ ಅಡಿ, 1937 ಚದರ ಅಡಿ ವಿಸ್ತೀರ್ಣವಿದೆ ಎಂದು ದಾಖಲೆಗಳು ತೋರಿಸಿವೆ. ಆಸ್ತಿಯನ್ನು ಆಗಸ್ಟ್ 7, 2023 ರಂದು ನೋಂದಾಯಿಸಲಾಗಿದೆ.
ಭುವನ್ ಬಾಮ್ ತನ್ನ ತಮಾಷೆಯ ಕಿರು ವೀಡಿಯೊ ಸಿರೀಸ್ ಬಿಬಿ ಕಿ ವೈನ್ಸ್‌ನಿಂದಾಗಿ ಜನಪ್ರಿಯರಾದರು, ಇದರಲ್ಲಿ ಅವರು ಬಹು ಪಾತ್ರಗಳನ್ನು ನಿರ್ವಹಿಸಿದರು. ಅವರು ಪ್ರತಿಭಾನ್ವಿತ ಗಿಟಾರ್ ವಾದಕರಾಗಿ ಪ್ರದರ್ಶನ ನೀಡುತ್ತಾ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಆದರೆ ಪ್ರಸ್ತುತ ಭಾರತದಲ್ಲಿ ಶ್ರೀಮಂತ ಯೂಟ್ಯೂಬರ್ ಆಗಿದ್ದಾರೆ. ವಲಯದಲ್ಲಿ ಉನ್ನತ ಆದಾಯವನ್ನು ಗಳಿಸುತ್ತಿದ್ದಾರೆ. ಮೂಲತಃ ಗುಜರಾತ್‌ನ ವಡೋದರಾದಿಂದ ಬಂದ ಭುವನ್ ಬಾಮ್, ಸಂಗೀತ ವೃತ್ತಿಜೀವನ ಆರಂಭಿಸಿದ್ದು, ಈಗ ಯೂಟ್ಯೂಬರ್ ಆಗಿ ಜನಪ್ರಿಯರಾಗಿದ್ದಾರೆ.
ಹಿಂದಿನ ಸಂದರ್ಶನಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಭುವನ್ ಬಾಮ್ ಅವರು ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಂಗೀತಗಾರರಾಗಿ ತಿಂಗಳಿಗೆ ಕೇವಲ 5,000 ರೂಪಾಯಿಗಳನ್ನು ಗಳಿಸುತ್ತಿದ್ದರು. ಭುವನ್ ಬಾಮ್ ಮೂಲತಃ ಗುಜರಾತ್‌ನ ವಡೋದರಾದವರಾಗಿದ್ದು, ಸಂಗೀತ ವೃತ್ತಿಜೀವನದಿಂದ ಖ್ಯಾತಿ ಮತ್ತು ಯಶಸ್ಸಿನತ್ತ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.
ಭುವನ್ ಬಾಮ್ ಸುಮಾರು 15 ಮಿಲಿಯನ್ ಡಾಲರ್ ನಿವ್ವಳ ಆದಾಯವನ್ನು ಹೊಂದಿದ್ದಾರೆ. ಅಂದರೆ ಸುಮಾರು 122 ಕೋಟಿ ರೂಪಾಯಿ ಆದಾಯವಾಗಿದೆ. ಬ್ರ್ಯಾಂಡ್ ಎಂಡೋರ್ಸ್‌ಮೆಂಟ್, ಪ್ರೊಮೋಟ್ ಡೀಲ್‌ಗಳನ್ನು ಮಾಡುತ್ತಾರೆ. ಹಾಗೆಯೇ ವೆಬ್ ಸಿರೀಸ್, ಸಿನಿಮಾದಿಂದ ಯೂಟ್ಯೂಬ್‌ನಿಂದ ಆದಾಯ ಪಡೆಯುತ್ತಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications