ಉದ್ಯಮಿ ಸುಪಮ್ ಮಹೇಶ್ವರಿ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯಮ ಸಂಸ್ಥಾಪಕರು ಎಂದು ವರದಿಯಾಗಿದೆ. ಇವರು 2,00,00,00,000 ರೂಪಾಯಿಗಿಂತ ಹೆಚ್ಚು ವಾರ್ಷಿಕ ಸಂಭಾವನೆ ಪಡೆಯುವ ಮೂಲಕ "ಅತಿ ಹೆಚ್ಚು ವೇತನ ಪಡೆಯುವ ಸಂಸ್ಥಾಪಕರು" ಎಂದು ತಿಳಿದುಬಂದಿದೆ.
Inc42 ನ ಸ್ಟಾರ್ಟ್ಅಪ್ ಫೌಂಡರ್ ಸ್ಯಾಲರೀಸ್ ಹಣಕಾಸು ವರ್ಷ 2023 ಟ್ರ್ಯಾಕರ್‌ನ ವರದಿಯ ಪ್ರಕಾರ, ಸುಪಮ್ ಮಹೇಶ್ವರಿ 2023 ರಲ್ಲಿ ಅತಿ ಹೆಚ್ಚು ಗಳಿಸಿದ ಸಂಸ್ಥಾಪಕರಾಗಿದ್ದಾರೆ. ಟ್ಯಾಲೆಂಟ್ , ಸೃಜನಶೀಲತೆಗೆ ಜೊತೆಗೆ ಸಂಪೂರ್ಣ ಸಮರ್ಪಣೆ ಮೂಲಕ ವ್ಯಾಪಾರ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸುಪಮ್ ಮಹೇಶ್ವರಿ ಅವರು ಇಂದಿನ ಯುವಜನತೆಗೆ ದಾರ್ಶನಿಕರಾಗಿದ್ದಾರೆ.

ತಾಯಿ ಮತ್ತು ಮಗುವಿನ ಆರೈಕೆ ಉತ್ಪನ್ನಗಳಲ್ಲಿ ಭಾರತದ ಅತಿದೊಡ್ಡ ಮಾರಾಟ ಸಂಸ್ಥೆಯಾದ ಫಸ್ಟ್‌ಕ್ರೈ (FirstCry) ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವಾಗ ಮಹೇಶ್ವರಿ ಅವರು ಇ-ಕಾಮರ್ಸ್ ಕ್ರಾಂತಿಯನ್ನು ಹರಿಕಾರರಾಗಿದ್ದಾರೆ. ತಮ್ಮ ಸ್ವಂತ ಮಗುವಿಗೆ ಉತ್ತಮ ಗುಣಮಟ್ಟದ ಬೇಬಿ ಕೇರ್ ಉತ್ಪನ್ನಗಳನ್ನು ಹುಡುಕುತ್ತಿರುವ ಪೋಷಕರಂತೆ ಸುಪಮ್ ಮಹೇಶ್ವರಿ ಅವರು ಕೂಡಾ ಉತ್ತಮ ಗುಣಮಟ್ಟದ ಉತ್ಪನ್ನಗಳ ಹುಡುಕಾಟದ ಸಂದರ್ಭ, ಫಸ್ಟ್‌ಕ್ರೈ ಅನ್ನು ಪ್ರಾರಂಭಿಸುವ ಆಲೋಚನೆಯನ್ನು ಹುಟ್ಟಿಕೊಂಡಿತು.
ಗುಣಮಟ್ಟದ ಉತ್ಪನ್ನಗಳ ಕೊರತೆ ಹಾಗೂ ಅವರು ಪೋಷಕರು ತಮ್ಮ ಮಕ್ಕಳಿಗೆ ಶಾಪಿಂಗ್ ಮಾಡುವಾಗ ಆಗುವ ಸಮಸ್ಯೆಯನ್ನು ಅವರು ಅವಕಾಶವಾಗಿ ಪರಿವರ್ತಿಸಿಕೊಂಡರು. ಇದಕ್ಕಾಗಿ ಅವರು ಬ್ರೈನ್‌ಬೀಸ್ ಸೊಲ್ಯೂಷನ್ಸ್ ಮತ್ತು ಅದರ ಪ್ರಮುಖ ಬ್ರ್ಯಾಂಡ್, ಬೇಬಿಕೇರ್ ಕಂಪನಿ ಫಸ್ಟ್‌ಕ್ರೈ ಅನ್ನು 2010 ರಲ್ಲಿ ಅಮಿತವಾ ಶಾ ಜೊತೆಗೂಡಿ ಸ್ಥಾಪಿಸಿದರು.
ಫಸ್ಟ್‌ಕ್ರೈ ಮೊದಲಿಗೆ ಮಗುವಿನ ಆರೈಕೆ ಉತ್ಪನ್ನಗಳನ್ನು ಆನ್‌ಲೈನ್ ಮಾರಾಟ ಮಾಡುವ ಮೂಲಕ ಪ್ರಾರಂಭವಾಯಿತು, ಆದರೆ ಬಳಿಕ ರಾಷ್ಟ್ರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಮಳಿಗೆಗಳನ್ನು ತೆರೆಯುವ ಮೂಲಕ ತ್ವರಿತವಾಗಿ ಬೆಳೆದುನಿಂತಿತು. ಸುಪಮ್ ಮಹೇಶ್ವರಿ ಅವರು ಆರಂಭದಲ್ಲಿ ಬ್ರೈನ್ವಿಸಾ ಟೆಕ್ನಾಲಜೀಸ್ ಅನ್ನು ಅಮಿತವ ಶಾ ಅವರೊಂದಿಗೆ ಸಹ-ಸ್ಥಾಪಿಸಿದರು. ಆದರೆ ಈ ಉದ್ಯಮ ಮಾರಾಟ ಮಾಡಿದ ನಂತರ, ಅವರು ಫಸ್ಟ್‌ಕ್ರೈ ಅನ್ನು ಪ್ರಾರಂಭಿಸಲು ಬ್ರೇನ್‌ಬೀಸ್ ಅನ್ನು ಬಳಸಿದರು.
ಮಹೇಶ್ವರಿ ಅವರು ತಮ್ಮ ಶಿಕ್ಷಣವನ್ನು ಅಪೀಜಯ್ ಶಾಲೆಯಲ್ಲಿ ಪಡೆದಿದ್ದು ಆ ಬಳಿಕ ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಅದರ ನಂತರ, ಅವರು ಪಿಜಿಡಿಎಂ ಗಳಿಸಲು ಐಐಎಂ-ಅಹಮದಾಬಾದ್‌ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ವರದಿಗಗಳ ಪ್ರಕಾರ ಅವರು 1577 ಕೋಟಿ ರೂಪಾಯಿಗಿಂತ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ.


Click it and Unblock the Notifications