ಫೋರ್ಬ್ಸ್ ತನ್ನ 17ನೇ ವಾರ್ಷಿಕ ಫಿಲಾಂತ್ರಪಿ ಪಟ್ಟಿಯನ್ನು ಪ್ರಕಟಿಸಿದ್ದು, ಕಳೆದ ವರ್ಷವಿಡೀ ಬಹು ದೊಡ್ಡ ದೇಣಿಗೆಗಳನ್ನು ಸಮರ್ಪಣೆಯಿಂದ ಲೋಕೋಪಕಾರಿ ಸೇವೆಗಳಿಗೆ ನೀಡಿ ದ ವರ ಹೆಸರು ಈ ಲಿಸ್ಟ್ ನಲ್ಲಿರುತ್ತದೆ. ಏಷ್ಯಾ-ಪೆಸಿಫಿಕ್ ಪ್ರದೇಶದ ಹೆಸರುಗಳು ಶ್ರೇಯಾಂಕರಹಿತ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಫೋರ್ಬ್ಸ್ ಏಷ್ಯಾ ಪಟ್ಟಿಯಲ್ಲಿ ವೈಯಕ್ತಿಕ ನಿಧಿಯಿಂದ ದೇಣಿಗೆ ನೀಡುವ ವ್ಯಕ್ತಿಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದು, ಅವರ, ವಿವಿಧ ಕಾರಣಗಳಿಗಾಗಿ ಅವರ ಲೋಕೋಪಕಾರಿ ವಿಚಾರದಲ್ಲಿ ತಮ್ಮ ಸಮರ್ಪಣೆ ಯನ್ನು ನೀಡಿರುತ್ತಾರೆ. ಈ ಪಟ್ಟಿಯಲ್ಲಿ ಡಿಎಲ್‌ಎಫ್‌ನ ಕೆಪಿ ಸಿಂಗ್, ಇನ್ಫೋಸಿಸ್‌ನ ನಂದನ್ ನಿಲೇಕಣಿ ಮತ್ತು ಜೆರೋಧಾದ ನಿಖಿಲ್ ಕಾಮತ್ ಈ ಮೂವರು ಭಾರತೀಯರು ಈ ವರ್ಷ ಪಟ್ಟಿಯಲ್ಲಿದ್ದಾರೆ. ಈ ಪೈಕಿ ನಾವು ಕೆಪಿ ಸಿಂಗ್ ಅವರ ಬಗ್ಗೆ ಹೇಳಲೇಬೇಕು.

ಡಿಎಲ್‌ಎಫ್‌ನ ಮಾಜಿ ಅಧ್ಯಕ್ಷರಾಗಿರುವ ಕೆಪಿ ಸಿಂಗ್ ದೆಹಲಿ ಮೂಲದ ರಿಯಲ್ ಎಸ್ಟೇಟ್ ಕಂಪನಿಯಲ್ಲಿದ್ದ ತಮ್ಮ ಕೊನೆಯ ನೇರ ಷೇರನ್ನು ಮಾರಾಟ ಮಾಡಿ $ 89 ಮಿಲಿಯನ್ ಸಂಗ್ರಹಿಸಿದರು. ಫೋರ್ಬ್ಸ್ ಪ್ರಕಾರ, ಸಂಗ್ರಹಿಸಿದ ಹಣವು, 2020 ರಲ್ಲಿ ಸ್ಥಾಪಿಸಲಾದ ಕೆಪಿ ಸಿಂಗ್ ಫೌಂಡೇಶನ್ ನ ದತ್ತಿ ಯೋಜನೆಗಳಿಗೆ ಇದು ಸಹಾಯ ಮಾಡುತ್ತದೆ.
ಮಾತ್ರವಲ್ಲದೇ ಅಂದಾಜು 14.3 ಬಿಲಿಯನೇರ್ ಡಾಲರ್ ನಿವ್ವಳ ಮೌಲ್ಯದೊಂದಿಗೆ, 92 ವಯಸ್ಸಿನ ಸಿಂಗ್ ಅವರು ಡಿಎಲ್‌ಎಫ್‌ನ ಬೆಳವಣಿಗೆ ಮತ್ತು ಗುರುಗ್ರಾಮವನ್ನು ತಂತ್ರಜ್ಞಾನ ಕೇಂದ್ರವಾಗಿ ಅಭಿವೃದ್ಧಿ ಮಾಡಲು ಕಾರಣ ಕರ್ತರಾಗಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.
ಕುಶಾಲ್ ಪಾಲ್ ಸಿಂಗ್ ಬಗ್ಗೆ:
ಕುಶಾಲ್ ಪಾಲ್ ಸಿಂಗ್ ಅವರು 1931 ರಲ್ಲಿ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಜನಿಸಿದರು. ಇವರು ಮೀರತ್ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದು ಬಳಿಕ ಯುಕೆಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದರು ನಂತರ ಬ್ರಿಟಿಷ್ ಅಧಿಕಾರಿಗಳ ಸೇವೆಗಳ ಆಯ್ಕೆ ಮಂಡಳಿ, ಯುಕೆ ಭಾರತೀಯ ಸೇನೆಗೆ ಆಯ್ಕೆಯಾದರು.
1951 ರಲ್ಲಿ ಅವರನ್ನು ಡೆಕ್ಕನ್ ಹಾರ್ಸ್‌ಗೆ ನಿಯೋಜಿಸಲಾಯಿತು. ಇವರ ತಂದೆ ಚೌಧರಿ ಮುಖ್ತಾರ್ ಸಿಂಗ್, ಬುಲಂದ್‌ಶಹರ್‌ನಲ್ಲಿ ಹೆಸರಾಂತ ವಕೀಲರಾಗಿದ್ದರು. ಬಿಲಿಯನೇರ್ ಕುಶಾಲ್ ಪಾಲ್ ಸಿಂಗ್ ಅವರು ಅತ್ಯುನ್ನತ ವೃತ್ತಿಜೀವನವನ್ನು ಹೊಂದಿದವರಾಗಿದ್ದಾರೆ.
ಸಿಂಗ್ ಅವರು 1961 ರಲ್ಲಿ ತಮ್ಮ ಸೇನಾ ಹುದ್ದೆಯನ್ನು ತೊರೆದು, 1946 ರಲ್ಲಿ ಅವರ ಮಾವ ಪ್ರಾರಂಭಿಸಿದ ಡಿಎಲ್ಎಫ್ ಲಿಮಿಟೆಡ್ ಕಂಪನಿಗೆ ಸೇರ್ಪಡೆಗೊಂಡರು. ಸಿಂಗ್ ತನ್ನ ಶೋಕೇಸ್ ಸಿಟಿ ನಿರ್ಮಿಸಲು ಗುರುಗ್ರಾಮದಲ್ಲಿ ರೈತರಿಂದ ಭೂಮಿಯನ್ನು ಖರೀದಿಸಿ ಡಿಎಲ್ಎಫ್ ಸಿಟಿಯನ್ನು ನಿರ್ಮಾಣ ಮಾಡಿದರು.
ಇಂದು, ಭಾರತದಲ್ಲಿ ಸಾರ್ವಜನಿಕವಾಗಿ ವ್ಯವಹಾರ ಮಾಡುವ ರಿಯಲ್ ಎಸ್ಟೇಟ್ ವ್ಯವಹಾರವು ಡಿಎಲ್‌ಎಫ್ ಆಗಿದ್ದು, ಇದು ದೆಹಲಿಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಪ್ರಸ್ತುತ ಕೆಪಿ ಸಿಂಗ್ ಅವರ ಪುತ್ರ ರಾಜೀವ್ ಕಂಪನಿಯ ಅಧ್ಯಕ್ಷರಾಗಿದ್ದಾರೆ. ರಾಜೀವ್ ಅವರ ಪತ್ನಿ ಕವಿತಾ ಸಿಂಗ್ ಅವರು ನವೆಂಬರ್ 2002 ರಲ್ಲಿ ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್ ಲಿಮಿಟೆಡ್ ನ ಸಲಹೆಗಾರರಾಗಿ ಸೇರ್ಪಡೆಗೊಂಡರು.
50 ವರ್ಷಗಳಿಗೂ ಹೆಚ್ಚು ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಸಿಂಗ್ ಅವರು 2020ರ ಜೂನ್ ನಲ್ಲಿ ನಿವೃತ್ತರಾದರು. ಅವರ ಅಧಿಕಾರಾವಧಿಯಲ್ಲಿ ಗುರುಗ್ರಾಮದಲ್ಲಿ ಅಧಿಕ ಸಂಖ್ಯೆಯಲ್ಲಿ ಭೂಕಂಪ-ನಿರೋಧಕ ವಾಣಿಜ್ಯ ಕಟ್ಟಡಗಳು, ಮನೆ, ರಿಟೇಲ್ ಸೆಂಟರ್ ಗಳು ಹಾಗೂ ಇತರ ಕಟ್ಟಡಗಳನ್ನು ನಿರ್ಮಿಸಿದರು.
ಅವರು ಡಿಎಲ್‌ಎಫ್‌ನ ಅಧ್ಯಕ್ಷರಾಗಿದ್ದಾಗ, ಕಂಪನಿಯು 2007 ರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ತೆರೆದುಕೊಂಡು ಸುಮಾರು 2.24 ಬಿಲಿಯನ್ ಡಾಲರ್ ಗಳಿಸಿತು. ಕೆ.ಪಿ ಸಿಂಗ್ ಅವರು ಫೋರ್ಬ್ಸ್ 2008 ರಲ್ಲಿ ವಿಶ್ವದ 8 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ಆತ್ಮಚರಿತ್ರೆ, Whatever the Odds: The Incredible Story Behind DLF ಅನ್ನು 2011 ರಲ್ಲಿ ಪ್ರಕಟಿಸಲಾಯಿತು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications