ಎಡೆಲ್ ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿಯನ್ನು ವರ್ಷಕ್ಕೆ ಒಮ್ಮೆ ಬಿಡುಗಡೆ ಮಾಡಲಾಗುತ್ತದೆ. ಈ ಟಾಪ್ 10 ಪಟ್ಟಿಯಲ್ಲಿ ಏಕೈಕ ಮಹಿಳೆ ರೋಹಿಣಿ ನಿಲೇಕಣಿ ಆಗಿದ್ದಾರೆ. 64 ವರ್ಷ ವಯಸ್ಸಿನ ರೋಹಿಣಿ ನಿಲೇಕಣಿ ಪರಿಸರ ವ್ಯವಸ್ಥೆಯ ಅಭಿವೃದ್ಧಿಗಾಗಿ ನೀಡಿದ 170 ಕೋಟಿ ರೂಪಾಯಿಯಿಂದಾಗಿ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.
ಪ್ರಮುಖವಾಗಿ ರೋಹಿಣಿ ನಿಲೇಕಣಿ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ಪತ್ನಿಯಾಗಿದ್ದಾರೆ. ನಂದನ್ ನಿಲೇಕಣಿ ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಮಹಿಳಾ ಲೋಕೋಪಕಾರಿಯಾಗಿ ರೋಹಿಣಿ ನಿಲೇಕಣಿ ಬಳಿಕ ಅನು ಅಗಾ ಮತ್ತು ಥರ್ಮಾಕ್ಸ್ ಕುಟುಂಬವಿದ್ದು, 23 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಅದರ ನಂತರದ ಸ್ಥಾನದಲ್ಲಿ ಯುಎಸ್‌ವಿಯ ಲೀನಾ ಗಾಂಧಿ ತಿವಾರಿಯಿದ್ದು 23 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ತನ್ನ ಪರೋಪಕಾರಿ ನಂಬಿಕೆಗಳಿಗೆ ಅನುಗುಣವಾಗಿ, ಭಾರತದ ಶ್ರೀಮಂತ ವ್ಯಕ್ತಿಗಳು ಈ ಸಮಯದಲ್ಲಿ ನಾಗರಿಕ ಸಮಾಜವನ್ನು ಬೆಂಬಲಿಸುವ ನಿಟ್ಟಿನಲ್ಲಿ ಅಧಿಕ ದೇಣಿಗೆ ನೀಡುವ ಕಾರ್ಯ, ಜನರಿಗೆ ಸಹಾಯವಾಗುವ ಕಾರ್ಯಗಳನ್ನು ಮಾಡಬೇಕು ಎಂದು ನಿಲೇಕಣಿ ಈ ಹಿಂದೆ ಹೇಳಿದ್ದರು.
ಹೆಸರಾಂತ ಹೂಡಿಕೆದಾರರಾದ ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಪ್ರಾರಂಭಿಸಿದ ಕಾರ್ಯಕ್ರಮಕ್ಕೆ ಹೆಚ್ಚಿನ ದೇಣಿಗೆಯನ್ನು ನೀಡದ ಭಾರತೀಯರನ್ನು ಕೂಡಾ ರೋಹಿಣಿ ನಿಲೇಕಣಿ ಟೀಕೆ ಮಾಡಿದ್ದಾರೆ. ಈ ಹೆಸರಾಂತ ವ್ಯಕ್ತಿಗಳು ತಮ್ಮ ಆದಾಯದ ಬಹುಪಾಲು ದತ್ತಿ ಕಾರ್ಯಗಳಿಗೆ ಮೀಸಲಿಡುತ್ತಾರೆ. ಅಂತಹ ಕಾರ್ಯವನ್ನು ನಾವು ಕೂಡಾ ಮಾಡಬೇಕು ಎಂದು ಹೇಳಿದರು.
ರೋಹಿಣಿ ನಿಲೇಕಣಿ ಯಾರು?
ರೋಹಿಣಿ ನಿಲೇಕಣಿ ಪ್ರಸ್ತುತ ಭಾರತದ ಅತೀ ಅಧಿಕ ದೇಣಿಗೆಯನ್ನು ನೀಡಿರುವ ಮಹಿಳೆಯಾಗಿದ್ದಾರೆ. ಲಾಭರಹಿತ ಶೈಕ್ಷಣಿಕ ವೇದಿಕೆ ಎಕ್‌ಸ್ಟೆಪ್ ಮತ್ತು ಮಕ್ಕಳ ಪುಸ್ತಕ ಕಂಪನಿ ಪ್ರಥಮ್ ಬುಕ್ಸ್ ಸಹ-ಸ್ಥಾಪಿಸಿದರು. ಶುದ್ಧ ನೀರು ಮತ್ತು ನೈರ್ಮಲ್ಯವನ್ನು ಉತ್ತೇಜಿಸುವ ರಾಷ್ಟ್ರೀಯ ಉಪಕ್ರಮಗಳಿಗೆ ಸಹಾಯ ಮಾಡಲು, ಅರ್ಘ್ಯಮ್ ಫೌಂಡೇಶನ್ ಅನ್ನು ಸಹ ಸ್ಥಾಪಿಸಿದರು.
ಪತ್ರಕರ್ತರಾದ ಅವರು, ಪ್ರಸಿದ್ಧ ನಿಯತಕಾಲಿಕೆಗಳಿಗೆ ಕೊಡುಗೆ ನೀಡಿದರು. ರೋಹಿಣಿ ಭಾರತದ ಬಾಂಬೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರು. ಆಕೆಯ ತಂದೆ ಇಂಜಿನಿಯರ್ ಆಗಿದ್ದರೆ, ತಾಯಿ ಗೃಹಿಣಿ. ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಫ್ರೆಂಚ್ ಸಾಹಿತ್ಯದಲ್ಲಿ ಪದವಿ ಪಡೆದರು.
ರೋಹಿಣಿ ಮತ್ತು ನಂದನ್ ನಿಲೇಕಣಿ 1981 ರಲ್ಲಿ ಇತರ ಆರು ಸಾಫ್ಟ್‌ವೇರ್ ಇಂಜಿನಿಯರ್‌ಗಳೊಂದಿಗೆ ಇನ್ಫೋಸಿಸ್ ಅನ್ನು ಸ್ಥಾಪಿಸಿದಾಗ ವಿವಾಹವಾದರು. ವುಮೆನ್ಸ್ ವೆಬ್ ಪ್ರಕಾರ, ಕಂಪನಿಯಲ್ಲಿ ತನ್ನ ಎಲ್ಲಾ ಸಂಪನ್ಮೂಲಗಳನ್ನು ಒಟ್ಟು 10,000 ರೂಪಾಯಿಗಳನ್ನು ಹೂಡಿಕೆ ಮಾಡಿರುವುದಾಗಿ ನಿಲೇಕಣಿ ಹೇಳಿಕೊಂಡಿದ್ದಾಳೆ.
ಕಂಪನಿಯು ಅಸಾಧಾರಣ ಬೆಳವಣಿಗೆ ಕಂಡಾಗ ನಂದನ್ ಜೊತೆ ರೋಹಿಣಿ ಕೂಡಾ ಶ್ರೀಮಂತರಾಗಿದ್ದಾರೆ. ಸಂಪೂರ್ಣವಾಗಿ ತನ್ನ ಆದಾಯವನ್ನು ಗಳಿಸಲು ಕಂಪನಿಯಲ್ಲಿ ವೈಯಕ್ತಿಕ ಹೂಡಿಕೆಯನ್ನು ಹೇಗೆ ನಿರ್ವಹಣೆ ಮಾಡಿದ್ದಾರೆ ಎಂಬುವುದನ್ನು ಈ ಹಿಂದೆ ರೋಹಿಣಿ ವಿವರಿಸಿದ್ದಾರೆ.


Click it and Unblock the Notifications