ಭಾರತದ ಅನೇಕ ಫ್ಯಾಷನ್ ಡಿಸೈನರ್‌ಗಳು ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸುವ ಮೂಲಕ ಹೆಚ್ಚಿನ ಶ್ರೀಮಂತಿಕೆ ಪಡೆದುಕೊಂಡಿದ್ದಾರೆ. ಮನೀಷ್ ಮಲ್ಹೋತ್ರಾ, ರಿತು ಕುಮಾರ್ ಹಾಗೂ ಸಬ್ಯಸಾಚಿಯಂಥ ಡಿಸೈನರ್‌ಗಳು ಭಾರತವನ್ನು ನೆಲೆಯಾಗಿಸಿಕೊಂಡು ಜಗತ್ತಿನೆಲ್ಲೆಡೆ ಗಮನಸೆಳೆದಿದ್ದಾರೆ. ಹೀಗಿರುವಾಗ, ದೇಶದ ಅತ್ಯಂತ ಶ್ರೀಮಂತ ಮತ್ತು ವೇಗವಾಗಿ ಬೆಳೆಯುತ್ತಿರುವ ಫ್ಯಾಷನ್ ಡಿಸೈನರ್‌ಗಳ ಪಟ್ಟಿಯಲ್ಲಿ ಅನಿತಾ ಡೋಂಗ್ರೆ ಅವರು ಕೂಡ ಸೇರಿದ್ದಾರೆ.
ಅನಿತಾ ಡೋಂಗ್ರೆ ಅವರು ಭಾರತದ ಅಗ್ರ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾಗಿದ್ದು, ದೇಶಾದ್ಯಂತ 270ಕ್ಕೂ ಹೆಚ್ಚು ಮಳಿಗೆಗಳೊಂದಿಗೆ ನೂರಾರು ಕೋಟಿ ರೂಪಾಯಿ ಮೌಲ್ಯದ ಉದ್ಯಮವನ್ನು ನಿರ್ಮಿಸಿದ್ದಾರೆ. ಆದರೆ, ಡೋಂಗ್ರೆ ಅವರು ಇಷ್ಟೊಂದು ಎತ್ತರಕ್ಕೆ ಬೆಳೆಯಬೇಕಾದರೆ ಅವರು ನಡೆದು ಬಂದ ಹಾದಿಯೂ ಅಷ್ಟೇ ಕಠಿಣವಾಗಿತ್ತು.

ಕೇವಲ ಎರಡು ಹೊಲಿಗೆ ಯಂತ್ರಗಳಿಂದ ಪ್ರಾರಂಭವಾದ ಅವರ ವೃತ್ತಿ ಬದುಕು ಈಗ ಬಹುಕೋಟಿ ಉದ್ಯಮವಾಗಿ ಬದಲಾಗಿದೆ. ಅನಿತಾ ಡೋಂಗ್ರೆ ಅವರ ತಾಯಿ ಪುಷ್ಪಾ ತಮ್ಮ ಮಕ್ಕಳಿಗೆ ಬಟ್ಟೆ ಹೊಲಿದು ಕೊಡುತ್ತಿದ್ದರು. ಅದೇ ಅವರ ಮಗಳು ಫ್ಯಾಷನ್ ಡಿಸೈನರ್ ಆಗುವುದಕ್ಕೆ ಸ್ಫೂರ್ತಿ ನೀಡಿದೆ. ಅವರು ದೊಡ್ಡವರಾದಾಗ, ಭಾರತದಲ್ಲಿ ಯಾವುದೇ ರಿಟೇಲ್ ಬ್ರಾಂಡ್ ಕೈಗೆಟಕುವ ದರದಲ್ಲಿ ದುಡಿಯುವ ಮಹಿಳೆಯರಿಗೆ ಲಭಿಸುತ್ತಿಲ್ಲ ಎನ್ನುವುದು ಅರಿವಾಗಿತ್ತು.
ಕೂಡಲೇ ಅವರು ಕೇವಲ ಎರಡು ಹೊಲಿಗೆ ಯಂತ್ರದೊಂದಿಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ನಿರ್ಧರಿಸಿದರು. ಇದಕ್ಕಾಗಿ ತಮ್ಮ ತಂದೆ ಅವರಿಂದ ಸಣ್ಣ ಸಾಲವನ್ನು ಪಡೆದುಕೊಂಡಿದ್ದರು. 1995ರಲ್ಲಿ ಅನಿತಾ ಹಾಗೂ ಅವರ ಸಹೋದರಿ ಸೇರಿಕೊಂಡು ಸಣ್ಣ ಅಪಾರ್ಟ್‌ಮೆಂಟ್‌ವೊಂದರಲ್ಲಿ ವೆಸ್ಟರ್ನ್ ಔಟ್‌ಫಿಟ್ ಬಟ್ಟೆಗಳ ಹೊಲಿಗೆಯನ್ನು ಪ್ರಾರಂಭಿಸಿದರು.
ಎಲ್ಲ ಮಾಲ್ ಹಾಗೂ ದೊಡ್ಡ-ದೊಡ್ಡ ಬ್ರಾಂಡ್‌ಗಳು ಅವರು ಹೊಲಿದ ಬಟ್ಟೆಗಳನ್ನು ಖರೀದಿಸುವುದಕ್ಕೆ ನಿರಾಕರಿಸಿದ್ದವು. ಆದರೆ ಅನಿತಾ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಉದ್ಯಮವನ್ನು ಮುನ್ನಡೆಸಬೇಕೆಂಬ ಛಲವನ್ನು ಹೊಂದಿದ್ದರು.
ಬಹುತೇಕ ಎಲ್ಲ ಮಾಲ್ ಹಾಗೂ ಬ್ರಾಂಡ್‌ಗಳು ತಮ್ಮ ಬಟ್ಟೆಗಳನ್ನು ತಿರಸ್ಕರಿಸಿದ ಬಳಿಕ ಅನಿತಾ ಡೋಂಗ್ರೆ ಅವರು ತಮ್ಮದೇ ಸ್ವಂತ ಬ್ರಾಂಡ್ ಅನ್ನು ಹುಟ್ಟು ಹಾಕಲು ನಿರ್ಧರಿಸಿದರು.
ಅವರು ಅಂದು ಪ್ರಾರಂಭಿಸಿದ್ದ ಬ್ರಾಂಡ್ ಈಗ ಭಾರತದೆಲ್ಲೆಡೆ ಜನಪ್ರಿಯತೆ ಪಡೆದುಕೊಂಡಿದೆ. ಅದೇ AND. 2015ರಲ್ಲಿ AND ಡಿಸೈನ್ಸ್ ಅನ್ನು ಪ್ರಾರಂಭಿಸಿದ ಬಳಿಕ ಅವರ ಕಂಪನಿಯನ್ನು ಹೌಸ್ ಆಫ್ ಅನಿತಾ ಡೋಂಗ್ರೆ ಎಂದು ಬದಲಾಯಿಸಿಕೊಂಡರು.
ಜವಳಿ ಉದ್ಯಮದಲ್ಲಿ ಒಂದು ಜನಪ್ರಿಯ ಬ್ರಾಂಡ್ ಆಗಿ ಬೆಳೆದ ನಂತರ ಅನಿತಾ ಅವರು ಅದರಡಿ ಬೇರೆಬೇರೆ ವೆಂಚರ್ ಅನ್ನು ಪ್ರಾರಂಭಿಸಿದ್ದಾರೆ. ಅವುಗಳೆಂದರೆ, ಗ್ಲೋಬಲ್ ದೇಸಿ, ಅನಿತಾ ಡೋಂಗ್ರೆ ಬ್ರೈಡಲ್ ಕೌಚರ್, ಅನಿತಾ ಡೋಂಗ್ರೆ ಗ್ರಾಸ್‌ರೂಟ್ ಮತ್ತು ಅನಿತಾ ಡೋಂಗ್ರೆಎ ಪಿಂಕ್ ಸಿಟಿ ಮುಂತಾದವುಗಳು.
ಭಾರತದಲ್ಲಿ 270ಕ್ಕೂ ಹೆಚ್ಚು ಮಳಿಗೆಗಳನ್ನು ಪ್ರಾರಂಭಿಸಿದ ಬಳಿಕ ತನ್ನ ಚಿಲ್ಲರೆ ವಹಿವಾಟು 2019-20ನೇ ಹಣಕಾಸು ವರ್ಷದಲ್ಲಿ ಸುಮಾರು 800 ಕೋಟಿ ರೂಪಾಯಿ ಆಗಿರುವುದಾಗಿ ಸಂದರ್ಶನವೊಂದರಲ್ಲಿ ಅನಿತಾ ಡೋಂಗ್ರೆ ಹೇಳಿದ್ದಾರೆ. 2023ರಲ್ಲಿ ಅವರ ಆದಾಯವು 1000 ಕೋಟಿ ರೂಪಾಯಿ ದಾಟುವ ನಿರೀಕ್ಷೆಯಿದೆ. ಆ ಮೂಲಕ ಭಾರತದಲ್ಲಿ ಅನಿತಾ ಅವರು ಶ್ರೀಮಂತ ಫ್ಯಾಷನ್ ಡಿಸೈನರ್ ಆಗಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.


Click it and Unblock the Notifications