ನಮ್ಮ ಭಾರತ ದೇಶದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳಾಗಿ ಬಹುಕೋಟಿ ಆಸ್ತಿಯ ಸಾಮ್ರಾಜ್ಯ ಮುನ್ನಡೆಸುತ್ತಿರುವ ಹಲವಾರು ಯಶೋಗಾಥೆಗಳಿವೆ. ಈ ಪೈಕಿ ಹಲವರು ಉದ್ಯಮವನ್ನು ಹುಟ್ಟು ಹಾಕಿ ಬಳಿಕ ಅದನ್ನು ತಮ್ಮ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಮೂಲಕ ಉದ್ಯಮವನ್ನು ಕೂಡ ಬಹಳ ಎತ್ತರಕ್ಕೆ ವಿಸ್ತರಿಸುತ್ತಿದ್ದಾರೆ.
ಅಂಥಹ ಮಹಿಳಾ ಉದ್ಯಮಿಗಳ ಸಾಲಿನಲ್ಲಿ ಅನು ಅಗಾ ಅವರು ಕೂಡ ನಿಲ್ಲುತ್ತಾರೆ. ಅವರು ಎನರ್ಜಿ ಹಾಗೂ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ಬಿಸಿನೆಸ್‌ನ ಥರ್ಮಕ್ಸ್ ಕಂಪನಿ ಮುನ್ನಡೆಸುತ್ತಿದ್ದಾರೆ. ಅಗಾ ಅವರು ಭಾರತೀಯ ಬಿಲಿಯನೇರ್ ಮಹಿಳಾ ಉದ್ಯಮಿಯಷ್ಟೇ ಅಲ್ಲ; ಜತೆಗೆ ಸಾಮಾಜಿಕ ಕಾರ್ಯಕರ್ತೆ ಕೂಡ.

ಅನು ಅಗಾ ಯಾರು ತಿಳಿಯಿರಿ
2004ರಲ್ಲಿ ಅವರು ಕಂಪನಿಯ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಿದ್ದು, 2018ರಿಂದ ಅವರು ನಾನ್ ಎಕ್ಸಿಕ್ಯೂಟೀವ್ ಡೈರಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಈ ಕಂಪನಿಯನ್ನು 1996ರಿಂದ 2004 ರವರೆಗೆ ಮುನ್ನಡೆಸಿದ್ದು, ಬಳಿಕ 2004ರ ಅಕ್ಟೋಬರ್‌ನಲ್ಲಿ ಮಗಳು ಮೆಹರ್ ಪುದುಮುಜೆ ಅವರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದ್ದಾರೆ.
ಥರ್ಮಕ್ಸ್ ಕಂಪನಿಯು ಈಗ ಅಂದರೆ ಡಿಸೆಂಬರ್ 4 ರ ಮಾಹಿತಿಯಂತೆ 30,408 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಕಂಪನಿಯ ಷೇರು ದರವು 2700 ರೂಪಾಯಿ ಇದೆ. ಅವರು ಕಂಪನಿಯಿಂದ ನಿವೃತ್ತಿ ಪಡೆದುಕೊಂಡ ಬಳಿಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉದ್ಯಮ ಕ್ಷೇತ್ರದಲ್ಲಿನ ಅವರ ಸಾಧನೆಗಾಗಿ ಕೇಂದ್ರ ಸರ್ಕಾರವು ಪದ್ಮಶ್ರೀ ಬಿರುದು ಕೂಡ ನೀಡಿ ಗೌರವಿಸಿದೆ.
ಫೋರ್ಬ್ಸ್ ಪಟ್ಟಿ ಏನು ಹೇಳುತ್ತದೆ?
ಫೋರ್ಬ್ಸ್ ಮಾಹಿತಿ ಪ್ರಕಾರ, ಅಗಾ ಅವರು 20,000 ಕೋಟಿ ರೂಪಾಯಿ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಅವರು ಎಂಜಿನಿಯರಿಂಗ್ ವಲಯದಲ್ಲಿ ಅತ್ಯಂತ ಶ್ರೀಮಂತ ಮಹಿಳೆ ಎಂಬುದಾಗಿ ಫೋರ್ಬ್ಸ್ ಕೂಡ ಪಟ್ಟಿ ಮಾಡಿದೆ. ಅವರು ತಮ್ಮ, ಹೆಚ್ಚಿನ ಸಂಪತ್ತನ್ನು ಥರ್ಮೆಕ್ಸ್‌ನಿಂದ ಗಳಿಸುತ್ತಿದ್ದಾರೆ. ಅಗಾ ಅವರು ಥರ್ಮೆಕ್ಸ್‌ನಲ್ಲಿ 1985ರಲ್ಲಿ ತಮ್ಮ ವೃತ್ತಿ ಜೀವನವನ್ನು ತಮ್ಮ ಪತಿಯೊಂದಿಗೆ ಪಾರಂಭಿಸಿದ್ದರು. ಆದರೆ, ಪತಿ 1996 ರಲ್ಲಿ ನಿಧನ ಹೊಂದಿದ ಸಂದರ್ಭದಲ್ಲಿ ಕಂಪನಿಯ ಜವಾಬ್ದಾರಿಯನ್ನು ತೆಗೆದುಕೊಂಡು ಮುನ್ನಡೆಸಿದರು.
ಅಗಾ ಅವರು 2012ರಲ್ಲಿ ರಾಜ್ಯಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಅಗಾ ಅವರು ಮುಂಬೈಯ ಸೇಂಟ್ ಕ್ಸೇವೀಯರ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದುಕೊಂಡಿದ್ದರು. ನಂತರದಲ್ಲಿ ಅವರು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‌ನಿಂದ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದುಕೊಂಡಿದ್ದರು.


Click it and Unblock the Notifications