ಭಾರತದಲ್ಲಿ ಅನೇಕ ಆಗರ್ಭ ಶ್ರೀಮಂತರಿದ್ದಾರೆ. ಇವರು ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂತಹ ಅಗರ್ಭ ಶ್ರೀಮಂತರಲ್ಲಿ ಅನೇಕರು ಶತಕೋಟಿ ಡಾಲರ್ ಉದ್ಯಮ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ.
ಇಂತಹ ಪ್ರಮುಖ ಉದ್ಯಮಿಗಳ ಪೈಕಿ ಮುಕೇಶ್ ಅಂಬಾನಿ, ರತನ್ ಟಾಟಾ ಗೌತಮ್ ಅದಾನಿ ಮುಂತಾದವರೂ ಸೇರಿದ್ದಾರೆ. ಇವರೆಲ್ಲರೂ ಲಕ್ಷಾಂತರ ಡಾಲರ್ ದೇಣಿಗೆಯನ್ನು ನೀಡುತ್ತಿದ್ದಾರೆ. ಇಂತಹ ದಾನಶೂರ ವ್ಯಕ್ತಿಗಳ ಪೈಕಿ ಭಾರತದಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ 'ಅಜೀಂ ಪ್ರೇಮ್‌ಜಿ'. ಇವರು ವಿಪ್ರೋ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾಗಿದ್ದಾರೆ.

ಎಡೆಲ್‌ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿ 2023 ರ ಪ್ರಕಾರ, 2022-23 ರ ಆರ್ಥಿಕ ವರ್ಷದಲ್ಲಿ ಪ್ರೇಮ್‌ಜಿ 1,774 ಕೋಟಿ ರೂಪಾಯಿ ದಾನ ನೀಡಿದ್ದಾರೆ. 2,042 ಕೋಟಿ ರೂಪಾಯಿ ದೇಣಿಗೆ 'ಭಾರತದ ಅತ್ಯಂತ ಉದಾರ ವ್ಯಕ್ತಿ' ಎಂಬ ಬಿರುದನ್ನು ಉಳಿಸಿಕೊಂಡಿರುವ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ ನಾಡಾರ್ ನಂತರದ ಸ್ಥಾನದಲ್ಲಿ ಪ್ರೇಮ್‌ಜಿ ಇದ್ದಾರೆ.
ಭಾರತದ ಟೆಕ್ ಮ್ಯಾಗ್ನೇಟ್ ಎಂದೇ ಪ್ರಸಿದ್ದರಾದ 2,49,000 ಕೋಟಿ ರೂಪಾಯಿ ಮಾರುಕಟ್ಟೆ ಕ್ಯಾಪ್ ಹೊಂದಿರುವ ವಿಪ್ರೋ ದೇಶಾದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ. ಪ್ರೇಮ್‌ಜಿ ಅವರು ತಮ್ಮ ಚಾರಿಟಬಲ್ ಫೌಂಡೇಶನ್‌ಗೆ 21 ಬಿಲಿಯನ್ ಯುಎಸ್ ಡಾಲರ್ ಹಣವನ್ನು ನೀಡಿದ ವಿಶ್ವದ ಅತ್ಯಂತ ಉದಾರ ಬಿಲಿಯನೇರ್‌ಗಳಲ್ಲಿ ಕೂಡ ಒಬ್ಬರು.
ಫೋರ್ಬ್ಸ್ ಪ್ರಕಾರ, ಅವರು ಅಜೀಂ ಪ್ರೇಮ್‌ಜಿ 2024 ರ ಜನವರಿ 22ರ ವೇಳೆಗೆ 98070 ಕೋಟಿ ರೂಪಾಯಿಗಳಷ್ಟಿರುವ 11.8 ಬಿಲಿಯನ್ ಯುಎಸ್ ಡಾಲರ್ ರಿಯಲ್ ಟೈಮ್ ಮೌಲ್ಯ ಹೊಂದಿದ್ದಾರೆ. ಪ್ರೇಮ್‌ಜಿ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದಾರೆ.
1966 ರಲ್ಲಿ, ಅವರ ತಂದೆ ನಿಧನರಾದಾಗ ಅವರು ಕುಟುಂಬದ ಅಡುಗೆ ಎಣ್ಣೆ ವ್ಯಾಪಾರದ ಚುಕ್ಕಾಣಿ ಹಿಡಿದು ವ್ಯಾಪಾರ ವಿಸ್ತರಿಸುತ್ತಾ, ಬಳಿಕ ಸಾಫ್ಟ್‌ವೇರ್ ಕ್ಷೇತ್ರಕ್ಕೂ ಕಾಲಿರಿಸಿದರು. 2001ರಲ್ಲಿ ಅಜೀಂ ಪ್ರೇಮ್‌ಜೀ ಫೌಂಡೇಷನ್ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು.
ಇದು ಲಾಭರಹಿತ ಸಂಸ್ಥೆಯಾಗಿದ್ದು, ಭಾರತದಲ್ಲಿ ಶಾಲಾ ಶಿಕ್ಷಣದ ಸುಧಾರಣೆ ಈ ಫೌಂಡೇಷನ್‌ನ ಪ್ರಮುಖ ಧ್ಯೇಯವಾಗಿದೆ. ಪ್ರತಿಷ್ಠಾನಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲವನ್ನು ಸ್ವತಃ ಪ್ರೇಮ್‌ಜೀ ತಮ್ಮ ವೈಯಕ್ತಿಕ ದೇಣಿಗೆಯ ಮೂಲಕ ನೀಡುತ್ತಿದ್ದಾರೆ. ಸರಕಾರಿ ಶಾಲೆಗಳ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವುದು, ಶಿಕ್ಷಕರ ಸಾಮರ್ಥ್ಯವನ್ನು ಬಲಪಡಿಸುವುದಕ್ಕೆ ಅದು ಸಹಕರಿಸುತ್ತದೆ.
2011 ರ ಜನವರಿಯಲ್ಲಿ, ಪ್ರೇಮ್‌ಜಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಲಾಯಿತು. ಜುಲೈ 2019 ರಲ್ಲಿ, ಅವರ ಮಗ ರಿಷಾದ್, ಅವರ ತಂದೆಯ ನಂತರ ವಿಪ್ರೋದ ಕಾರ್ಯಕಾರಿ ಅಧ್ಯಕ್ಷರಾದರು. 2020 ರಲ್ಲಿ, ಅವರ ಅಜೀಂ ಪ್ರೇಮ್‌ಜಿ ಫೌಂಡೇಶನ್ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಪೀಡಿತರಿಗೆ ನೆರವು ನೀಡಲು 150 ಮಿಲಿಯನ್ ಯುಎಸ್ ಡಾಲರ್ ವಾಗ್ದಾನ ಮಾಡಿತ್ತು.


Click it and Unblock the Notifications