ಅನಿವಾಸಿ ಭಾರತೀಯ, ಮೂಲತಃ ಕೇರಳದವರಾಗಿರುವ ದುಬೈನ ಶಿಕ್ಷಣ ಉದ್ಯಮಿ ಮತ್ತು ಲೋಕೋಪಕಾರಿಯಾಗಿರುವ 66 ವರ್ಷದ ಸನ್ನಿ ವರ್ಕಿ ಅವರು ಫೋರ್ಬ್ಸ್ ಪ್ರಕಾರ 26,640 ಕೋಟಿ ರೂಪಾಯಿ ರಿಯಲ್ ಟೈಮ್ ನಿವ್ವಳ ಮೌಲ್ಯ ಹೊಂದಿದ್ದಾರೆ. ಸನ್ನಿ ವರ್ಕಿ ಜಾಗತಿಕ ಸಲಹಾ ಮತ್ತು ಶೈಕ್ಷಣಿಕ ನಿರ್ವಹಣಾ ಸಂಸ್ಥೆಯ GEMS ಶಿಕ್ಷಣದ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ.
ಫೋರ್ಬ್ಸ್‌ನ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯ ಪ್ರಕಾರ ಅವರು 923 ನೇ ಸ್ಥಾನದಲ್ಲಿದ್ದು, ಸೇವಾ ವಲಯದಲ್ಲಿ ಭಾರತದ ಎರಡನೇ ಶ್ರೀಮಂತ ಬಿಲಿಯನೇರ್ ಆಗಿದ್ದಾರೆ. ಅವರ GEMS ಎಜುಕೇಶನ್, ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಶಿಕ್ಷಣ ಸಂಸ್ಥೆಯಾಗಿದ್ದು ಇದು ಕಿಂಡರ್ ಗಾರ್ಡನ್ (ಶಿಶುವಿಹಾರ) ನಿಂದ ಹಿಡಿದು ಗ್ರೇಡ್ 12 ರವರೆಗೆ ವಿಶ್ವದ 13 ದೇಶಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ.

ಸನ್ನಿ ವರ್ಕಿ ಅವರ ಪುತ್ರರಾದ ಡಿನೋ ಮತ್ತು ಜೇ ಕ್ರಮವಾಗಿ ಸಿಇಒ ಮತ್ತು ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ GEMS ಅನ್ನು ನಡೆಸುತ್ತಾರೆ. 2019 ರಲ್ಲಿ, GEMS ಖಾಸಗಿ ಶಿಕ್ಷಣ ಸಂಸ್ಥೆಗೆ, CVC ಕ್ಯಾಪಿಟಲ್ ಪಾರ್ಟ್‌ನರ್ಸ್ ಪ್ರಮುಖ ಹೂಡಿಕೆದಾರರಾದರು. ಸನ್ನಿ ವರ್ಕಿ ಅವರು 1959 ರಲ್ಲಿ ಕೇರಳದಿಂದ ದುಬೈಗೆ ವಲಸೆ ಬಂದ ಭಾರತೀಯ ವಲಸಿಗ ಶಿಕ್ಷಕರಾದ ಕೆಎಸ್ ಮತ್ತು ಮರಿಯಮ್ಮ ವರ್ಕಿಯವರ ಪುತ್ರರಾಗಿದ್ದಾರೆ.
ಅವರ ಪೋಷಕರು 1968 ರಲ್ಲಿ ದುಬೈನಲ್ಲಿ ತಮ್ಮದೇ "ಅವರ್ ಓನ್ ಇಂಗ್ಲಿಷ್ ಸ್ಕೂಲ್" ಅನ್ನು ಸ್ಥಾಪಿಸಿದರು. ಸನ್ನಿ ಅವರ ನಾಲ್ಕನೇ ವಯಸ್ಸಿನಲ್ಲಿ ಶಾಲಾ ಶಿಕ್ಷಣಕ್ಕಾಗಿ ಕೇರಳಕ್ಕೆ ಕಳುಹಿಸಿಕೊಡಲಾಯಿತು. ತಮ್ಮ 11 ನೇ ವಯಸ್ಸಿನಲ್ಲಿ ಹೆಚ್ಚುವರಿ ಹಣ ಸಂಪಾದನೆಗಾಗಿ ಅವರು ರಸ್ತೆ ಬದಿಯಲ್ಲಿ ಹಣ್ಣು ಮಾರಾಟ ಮಾಡಿದರು.
ಅವರ 1970ರಲ್ಲಿ ಅಕ್ಕನೊಂದಿಗೆ ದುಬೈಗೆ ಮರಳಿದರು. ವರ್ಕಿ ಅವರು ವ್ಯಾಸಂಗ ಹೈಸ್ಕೂಲ್ ದಾಟಿ ಹೋಗಲಿಲ್ಲ. 1980 ರಲ್ಲಿ ಅಂದರೆ ತಮ್ಮ 23 ನೇ ವಯಸ್ಸಿನಲ್ಲಿ ಪೋಷಕರ ಅವರ್ ಓನ್ ಇಂಗ್ಲಿಷ್ ಸ್ಕೂಲ್ ನ ಜವಾಬ್ದಾರಿ ವಹಿಸಿಕೊಂಡರು.
2000 ರಲ್ಲಿ, ಸನ್ನಿ ವರ್ಕಿ ಗ್ಲೋಬಲ್ ಎಜುಕೇಶನ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್ (GEMS) ಅನ್ನು ಸ್ಥಾಪಿಸಿದರು. ಇದಾದ ನಂತರ 2003 ರಲ್ಲಿ ಇಂಗ್ಲೆಂಡ್‌ನಲ್ಲಿಯೂ ಶಿಕ್ಷಣ ಸಂಸ್ಥೆಯನ್ನು ತೆರೆದರು. ಅಂದಿನಿಂದ ಹಿಂತಿರುಗಿ ನೋಡಲೇ ಇಲ್ಲ. 2004 ರಲ್ಲಿ, ಅವರು ಭಾರತಕ್ಕೂ ತಮ್ಮ ಶಿಕ್ಷಣ ಉದ್ಯಮ ವಿಸ್ತರಿಸಿದರು.
GEMS ಗುಂಪು ಲಿಬಿಯಾ, ಜೋರ್ಡಾನ್, US, ಸ್ವಿಟ್ಜರ್ಲೆಂಡ್, ಕೀನ್ಯಾ, ಉಗಾಂಡಾ, ಈಜಿಪ್ಟ್ ಮತ್ತು ಸಿಂಗಾಪುರದಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಸನ್ನಿ ವರ್ಕಿ ಅವರು ಅಂಬ್ರೆಲಾ ಬಿಸಿನೆಸ್ ಸಂಸ್ಥೆಯಾದ ವರ್ಕಿ ಗ್ರೂಪ್‌ನ ಅಧ್ಯಕ್ಷರೂ ಆಗಿದ್ದಾರೆ. ಜೊತೆಗೆ ಲೋಕೋಪಕಾರಿ ವರ್ಕಿ ಫೌಂಡೇಶನ್‌ನ ಸಂಸ್ಥಾಪಕರು ಮತ್ತು ಟ್ರಸ್ಟಿಯಾಗಿದ್ದಾರೆ.


Click it and Unblock the Notifications