ಅಮೆರಿಕನ್ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪನಿ ಅಡೋಬ್ ಸಿಸ್ಟಮ್ಸ್ ಇನ್‌ಕಾರ್ಪೊರೇಟ್ ಬೆಂಗಳೂರಿನಲ್ಲಿ 400,000 ಚದರ ಅಡಿ ವಿಸ್ತೀರ್ಣದ ಕಚೇರಿ ಸ್ಥಳವನ್ನು ಬರೋಬ್ಬರಿ 505 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಪ್ರೆಸ್ಟೀಜ್ ಟೆಕ್ ಪಾರ್ಕ್ IV ನಲ್ಲಿ ಖರೀದಿಸಿದ್ದು ಇದು 640 ಕಾರ್ ಪಾರ್ಕಿಂಗ್ ಸ್ಲಾಟ್‌ಗಳನ್ನು ಹೊಂದಿದೆ.
ಪ್ರೆಸ್ಟೀಜ್ ಗ್ರೂಪ್ ಪ್ರತಿಷ್ಟಿತ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದ್ದು, ಇದು ಇರ್ಫಾನ್ ರಜಾಕ್ ಅವರ ಒಡೆತನದಲ್ಲಿದೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಇರ್ಫಾನ್ ಅವರು ಪ್ರೆಸ್ಟೀಜ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

1990 ರಲ್ಲಿ, ತಮ್ಮ ಸೆಕೆಂಡ್ ರಿಯಲ್ ಎಸ್ಟೇಟ್ ಯೋಜನೆಯನ್ನು 1 ಕೋಟಿ ರೂಪಾಯಿಗೆ ಮಾರಾಟ ಮಾಡಿದ ಬಳಿಕ ತಮ್ಮ ನಿವೃತ್ತಿ ಬಗ್ಗೆ ಯೋಚನೆ ಮಾಡುತ್ತಿದ್ದರು. ಆದರೂ, ಏನಾದರೂ ಸೃಜನಶೀಲವಾಗಿರುವುದನ್ನು ನಿರ್ಮಿಸಿ ಸಾಧಿಸಬೇಕು ಎನ್ನುವ ಅವರ ಹಂಬಲ ನಿವೃತ್ತಿ ಯೋಚನೆಯನ್ನು ಮೀರಿ ನಿಂತಿತು. ಹೀಗಾಗಿ ಅವರಿಂದ ದೇಶದ ಅತಿದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ.
ಫೋರ್ಬ್ಸ್‌ನಲ್ಲಿನ ಹಳೆಯ ಸಂದರ್ಶನವೊಂದರಲ್ಲಿ, ಅವರು ತಮ್ಮನ್ನು ನಿಖರ ಮತ್ತು ಸ್ಪಷ್ಟ ಚಿಂತಕ ಎಂದು ಕರೆದುಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಹಣದ ಆಕರ್ಷಣೆ ಉಳಿದುಕೊಳ್ಳುವುದಿಲ್ಲ. ಆಮೇಲೆ ಸೃಜನಶೀಲತೆಯೊಂದೇ ವ್ಯಕ್ತಿಯನ್ನು ಮುಂದುವರಿಯುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಬೆಂಗಳೂರು ಇರ್ಫಾನ್ ರಜಾಕ್ ಅವರ ತವರು ನೆಲವಾಗಿದ್ದು, ಅವರ ಕಂಪನಿಯ ಬಹುತೇಕ ಯೋಜನೆಗಳು ಇಲ್ಲಿಯೇ ಕಾರ್ಯಗತಗೊಳ್ಳುತ್ತವೆ.
ಇರ್ಫಾನ್ ರಜಾಕ್ ಅವರು ಪ್ರೆಸ್ಟೀಜ್ ಗ್ರೂಪ್ ಸಂಸ್ಥಾಪಕ ರಜಾಕ್ ಸತ್ತಾರ್ ಅವರ ಹಿರಿಯ ಪುತ್ರರಾಗಿದ್ದು, 1986 ರಲ್ಲಿ ಪ್ರೆಸ್ಟೀಜ್ ಗ್ರೂಪ್ ಸ್ಥಾಪನೆಯಾಯಿತು. ಇಂದು ಬೆಂಗಳೂರನ್ನು ಹೊರತುಪಡಿಸಿ, ಚೆನ್ನೈ, ಕೊಚ್ಚಿ, ಕ್ಯಾಲಿಕಟ್, ಹೈದರಾಬಾದ್, ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಪ್ರಾಪರ್ಟ್ ಗಳನ್ನು ಡೆವಲಪ್ ಮಾಡಿದೆ.
ಇರ್ಫಾನ್ ಅವರು ತಮ್ಮ ತಂದೆಯ ಪುಟ್ಟ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲು ಆರಂಭಿಸಿ ತಂದೆಗೆ ಬೃಹತ್ ಉದ್ಯಮವನ್ನು ಕಟ್ಟಲು ಸಹಾಯ ಮಾಡಿದರು ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ. ಇರ್ಫಾನ್ ತಂದೆ ರಜಾಕ್ ಸತ್ತಾರ್ 1950 ರಲ್ಲಿ ಸಣ್ಣ ಬಟ್ಟೆ ಮತ್ತು ಟೈಲರಿಂಗ್ ಅಂಗಡಿಯನ್ನು ತೆರೆದಿದ್ದರು.
ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದರೂ ಕಂಪನಿಯು ಇನ್ನೂ ಈ ವ್ಯವಹಾರವನ್ನು ನಡೆಸುತ್ತಿದೆ. ಇವರು ಮೊದಲು ಅವರು ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ಬ್ರೋಕಿಂಗ್ ವ್ಯವಹಾರ ಪ್ರಾರಂಭಿಸಿ ನಂತರ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದರು. ವಿಜಯ್ ಮಲ್ಯ ಅವರ ಯುಬಿ ಸಿಟಿಯ ಮುಖ್ಯ ಗುತ್ತಿಗೆದಾರರೂ ಆಗಿದ್ದರು. ಟ್ರೆಂಡ್‌ಲೈನ್ ಪ್ರಕಾರ, ಅವರ ನಿವ್ವಳ ಮೌಲ್ಯ 11,456 ಕೋಟಿ ರೂ. ಆಗಿದೆ.
2023ರ ಆರ್ಥಿಕ ವರ್ಷದಲ್ಲಿ, 12,930 ಕೋಟಿ ರೂಪಾಯಿಗಳ ಆಸ್ತಿ ಮಾರಾಟದ ದಾಖಲೆ ನೋಂದಾಯಿಸಿದೆ. ಫೋರ್ಬ್ಸ್ 2014ರಲ್ಲಿ, ಅವರ ನಿವ್ವಳ ಮೌಲ್ಯವನ್ನು 1.23 ಬಿಲಿಯನ್ ಡಾಲರ್ ಎಂದು ಅಂದಾಜಿಸಿದೆ.
ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್
ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್‌ಗೆ ಬರೋಬ್ಬರಿ 1238 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲಾಗಿದೆ. ಹೌದು ದೇಶದ ಅತೀ ದೊಡ್ಡ ಡೀಲ್ ಇದಾಗಿದೆ. ಈ ವ್ಯಕ್ತಿ 28 ವಸತಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಿದ್ದಾರೆ. ದೇಶದಲ್ಲಿ ಅತೀ ದೊಡ್ಡ ಡೀಲ್ ಇದಾಗಿದೆ. ಅದು ಕೂಡಾ ಸುಮಾರು 1238 ಕೋಟಿ ರೂಪಾಯಿಯ ಡೀಲ್ ಆಗಿದೆ.


Click it and Unblock the Notifications