ರಿಲಯನ್ಸ್ ಇಂಡಸ್ಟ್ರೀಸ್‌ನ ಅತ್ಯಮೂಲ್ಯ ಅಂಗಸಂಸ್ಥೆಗಳಲ್ಲಿ ಒಂದಾಗಿರುವ, ರಿಲಯನ್ಸ್ ರಿಟೇಲ್ 17,54,000 ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಕ್ಯಾಪ್ ಹೊಂದಿದ್ದು ಇದನ್ನು ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮುನ್ನಡೆಸುತ್ತಿದ್ದಾರೆ. ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರೀಟೇಲ್ ಸಾರ್ವಜನಿಕ ಷೇರು ಬಿಡುಗಡೆ (ಐಪಿಒ) ಯ ವದಂತಿ ದಟ್ಟವಾಗಿ ಕೇಳಿಬರುತ್ತಿದೆ.
ಈ ನಡುವೆ ಈ ಕಂಪನಿಯ ಪ್ರಮುಖ ಅಧಿಕಾರಿಯೊಬ್ಬರು ತಮ್ಮ ಸ್ವಂತ edtech (ಶೈಕ್ಷಣಿಕ ತಂತ್ರಜ್ಞಾನ/ಎಡ್‌ಟೆಕ್) ಉದ್ಯಮವನ್ನು ಪ್ರಾರಂಭಿಸಲು ಹುದ್ದೆ ತೊರೆದಿದ್ದಾರೆ. ಇವರೇ ಡಾ ಅನಿಲ್ ಕುಮಾರ್ ಮಿಶ್ರಾ. ಇವರು ರಿಲಯನ್ಸ್ ರಿಟೇಲ್ ನಲ್ಲಿ ಚೀಫ್ ಪೀಪಲ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದರು.

ಕಂಪನಿಯ ಆಡಳಿತವನ್ನು ಇಶಾ ಅಂಬಾನಿಗೆ ಹಸ್ತಾಂತರಿಸುವ ಮೊದಲೇ ಅಂದರೆ 2021 ರಲ್ಲಿ ರಿಲಯನ್ಸ್ ರಿಟೇಲ್‌ಗೆ ಸೇರ್ಪಡೆಗೊಂಡಿದ್ದರು. ಅಂದ ಹಾಗೆ ಆಗಸ್ಟ್ 2022 ಇಶಾ ಅಂಬಾನಿ ಅವರನ್ನು ರಿಲಯನ್ಸ್ ರೀಟೇಲ್‌ನ ಲೀಡರ್ ಎಂದು ಎಂದು ಘೋಷಿಸಿದ್ದರು. ಪ್ರಸ್ತುತ ಇದರ ಮೌಲ್ಯ 820000 ಕೋಟಿ ರೂಪಾಯಿ ಆಗಿದೆ.
ರಿಲಯನ್ಸ್ ರಿಟೇಲ್‌ಗೆ ಸೇರುವ ಮೊದಲು, ಅನಿಲ್ ಕುಮಾರ್ ಮಿಶ್ರಾ ಅವರು ಮ್ಯಾಜಿಕ್‌ಬ್ರಿಕ್ಸ್, ಜಸ್ಟ್‌ಡಯಲ್, ಜಯ್ ಪ್ರಕಾಶ್ ಗ್ರೂಪ್, ಒಬೆರಾಯ್ ಹೋಟೆಲ್ಸ್, ಎನರ್‌ಕಾನ್, ಡೆನ್ಸೊ, ಪ್ಯಾಟ್ನಿ ಕಂಪ್ಯೂಟರ್ಸ್ ಹಾಗೂ ಇತರ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದರು. ಮಾನವ ಸಂಪನ್ಮೂಲ (ಹೆಚ್.ಆರ್) ವಿಭಾಗಕ್ಕೆ ನೀಡಿದ ಕೊಡುಗೆಗಾಗಿ ಅಮೇರಿಕದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ದೊರಕಿದೆ.
ಇವರು ಭಾರತದಲ್ಲಿ ಪ್ರಮುಖ ಹೆಚ್. ಆರ್ ಚಿಂತನೆಯ ನಾಯಕರಾಗಿದ್ದಾರೆ. ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಾರೆ. ರಿಲಯನ್ಸ್ ರಿಟೇಲ್‌ನಲ್ಲಿ ಮಿಶ್ರಾ ಅವರು ದೀರ್ಘಾವಧಿಗೆ ಸೇವೆ ಸಲ್ಲಿಸದಿದ್ದರೂ , ಕಂಪನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ರಿಲಯನ್ಸ್ ರಿಟೇಲ್ ಪ್ರಸ್ತುತ 2.5 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಭೌತಿಕ ಮಳಿಗೆಗಳ ಹೊರತಾಗಿ, ಕಂಪನಿಯು ತನ್ನ ಇ-ಕಾಮರ್ಸ್ ಚಾನೆಲ್‌ಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಜಿಮ್ಮಿ ಚೂ, ಜಾರ್ಜಿಯೊ ಅರ್ಮಾನಿ, ಹ್ಯೂಗೋ ಬಾಸ್, ವರ್ಸೇಸ್, ಮೈಕೆಲ್ ಕಾರ್ಸ್, ಬ್ರೂಕ್ಸ್ ಬ್ರದರ್ಸ್, ಅರ್ಮಾನಿ ಎಕ್ಸ್‌ಚೇಂಜ್, ಬರ್ಬೆರಿ ಮತ್ತು ಇತರ ಅನೇಕ ಜಾಗತಿಕ ಬ್ರ್ಯಾಂಡ್‌ಗಳು ರಿಲಯನ್ಸ್ ರಿಟೇಲ್ ಪಾಲುದಾರ ಬ್ರಾಂಡ್‌ಗಳಾಗಿ ಭಾರತದಲ್ಲಿ ಲಭ್ಯವಿದೆ.
100 ಕೋಟಿಗೂ ಹೆಚ್ಚು ವಹಿವಾಟುಗಳ ಹೊಂದಿರುವ ರಿಲಯನ್ಸ್ ರಿಟೇಲ್ ವಿಶ್ವದ ಅತಿ ಹೆಚ್ಚು ಭೇಟಿ ನೀಡಿದ 10 ರಿಟೇಲರ್ಸ್‌ಗಳಲ್ಲಿ ಒಂದಾಗಿದೆ. ಮತ್ತು ಜಾಗತಿಕ ಟಾಪ್ 100 ಪಟ್ಟಿಯಲ್ಲಿ ಏಕೈಕ ಭಾರತೀಯ ರಿಟೇಲರ್ಸ್ ಆಗಿದೆ. ಕಳೆದ ಕೆಲವು ವರ್ಷಗಳಲ್ಲಿ, ರಿಲಯನ್ಸ್ ರಿಟೇಲ್ ದೊಡ್ಡ ಮತ್ತು ಪ್ರತಿಷ್ಠಿತ ಜಾಗತಿಕ ಹೂಡಿಕೆ ಸಂಸ್ಥೆಗಳು ಮತ್ತು ಸಾರ್ವಭೌಮ ಸಂಪತ್ತು ನಿಧಿಗಳಿಂದ ಹೂಡಿಕೆಗಳನ್ನು ಪಡೆದುಕೊಂಡಿದೆ.


Click it and Unblock the Notifications