Ajay Piramal: 26 ಸಾವಿರ ಕೋಟಿ ರೂ. ಮೌಲ್ಯದ ಕಂಪನಿ ಮುನ್ನಡೆಸುತ್ತಿರುವ ಇಶಾ ಅಂಬಾನಿ ಮಾವನ ಬಗ್ಗೆ ತಿಳಿಯಿರಿ

ಮುಕೇಶ್‌ ಅಂಬಾನಿ ಅವರು ಭಾರತ ಮಾತ್ರವಲ್ಲ ಇಡೀ ವಿಶ್ವದಲ್ಲೇ ಟಾಪ್‌ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಹಲವಾರು ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಯಶಸ್ಸು ಗಳಿಸುತ್ತಿದ್ದಾರೆ. ಇನ್ನು ಭಾರತದಲ್ಲೇ ಅತ್ಯಂತ ಶ್ರೀಮಂತ ಕುಟುಂಬವಾಗಿರುವುದರಿಂದ ಅಂಬಾನಿ ಅವರು ಇತರೆ ಶ್ರೀಮಂತ ಕುಟುಂಬಗಳೊಂದಿಗೆ ಸಂಬಂಧ ಕೂಡ ಹೊಂದಿದ್ದಾರೆ.

ಅಂಥಹ ಒಂದು ಬಹಳ ಹತ್ತಿರದ ಸಂಬಂಧವನ್ನು ಹೊಂದಿರುವ ಕುಟುಂಬ ಪಿರಮಾಲ್‌ ಕುಟುಂಬ. ಅಜಯ್‌ ಪಿರಮಾಲ್‌ ಅವರ ಮಗ ಆನಂದ್‌ ಪಿರಮಾಲ್‌ ಅವರು ಮುಕೇಶ್‌ ಅಂಬಾನಿ ಅವರ ಮಗಳು ಇಶಾ ಅಂಬಾನಿ ಅವರ ಮಗಳು. ಹೀಗಿರುವಾಗ, ಅಜಯ್‌ ಪಿರಮಾಲ್‌ ಅವರು ಇಶಾ ಅಂಬಾನಿ ಅವರ ಮಾವ.

 ಕೋಟಿ ಮೌಲ್ಯದ ಕಂಪನಿ ಮುನ್ನಡೆಸುತ್ತಿರುವ ಇಶಾ ಅಂಬಾನಿ ಮಾವ ಯಾರು?

ಈ ಕಾರಣದಿಂದಲೇ ಉದ್ಯಮ ರಂಗದ ಇಬ್ಬರು ದಿಗ್ಗಜರಾಗಿರುವ ಆನಂದ್‌ ಪಿರಮಾಲ್‌ ಹಾಗೂ ಮುಕೇಶ್‌ ಅಂಬಾನಿ ಅವರು ಬೀಗರು ಕೂಡ ಆಗಿದ್ದಾರೆ. ಇನ್ನು ಅಜಯ್‌ ಪಿರಮಾಲ್‌ ಅವರು ಕೂಡ ಭಾರತದ ಟಾಪ್‌ ಬಿಸಿನೆಸ್‌ ಐಕಾನ್‌ಗಳ ಪೈಕಿ ಒಬ್ಬರಾಗಿದ್ದಾರೆ.

ಅಜಯ್‌ ಪಿರಮಾಲ್‌ ಯಾರು?

1977ರಲ್ಲಿ ಅಂದರೆ ಅಜಯ್‌ ಪಿರಮಾಲ್‌ ತಮಗೆ 22 ವರ್ಷ ವಯಸ್ಸಿರಬೇಕಾದರೆ, ಅವರು ತಮ್ಮ ಕುಟುಂಬದ ಜವಳಿ ಬಿಸಿನೆಸ್‌ನಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದ್ದರು. ಅವರು ಹಲವರು ಕಂಪನಿಗಳಲ್ಲಿ ನಿಯಂತ್ರಣವನ್ನು ಸಾಧಿಸಿಕೊಳ್ಳುವ ಮೂಲಕ ವಿಶಾಲವಾದ ಔಷಧೀಯ ಸಾಮ್ರಾಜ್ಯವನ್ನು ಕಟ್ಟಿದರು.

ಪಿರಮಾಲ್‌ ಎಂಟರ್‌ಪ್ರೈಸೆಸ್‌ ಅವರ ಪ್ರಮುಖ ಸಂಘಟಿತ ವ್ಯಾಪಾರ ಸಂಸ್ಥೆಯಾಗಿ ಫೈನಾನ್ಸ್‌ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಜವಳಿ ವ್ಯಾಪಾರ ಉದ್ಯಮವನ್ನು ಅಜಯ್‌ ಅವರ ಅಜ್ಜ ಪಿರಮಾಲ್‌ ಚತ್ರಭುಜ್‌ ಅವರು 1934ರಲ್ಲಿ ಪ್ರಾರಂಭಿಸಿದ್ದರು. ಅಜಯ್‌ ಪಿರಮಾಲ್‌ ಅವರು ಕೂಡ ತಮ್ಮ ಬದುಕಿನಲ್ಲಿ ಹಲವು ಅನಿರೀಕ್ಷಿತ ಕಹಿ ಘಟನೆಗಳನ್ನು ಎದುರಿಸಿದ್ದಾರೆ.

ಅಜಯ್‌ ಅವರ ತಂದೆ ಗೋಪಿಕೃಷ್ಣ ಪಿರಮಾಲ್‌ ಅವರು 1979ರಲ್ಲಿ ದಿಢೀರ್‌ ಆಗಿ ನಿಧನ ಹೊಂದಿದ್ದರು. ಅದಾದ ಐದು ವರ್ಷಗಳ ನಂತರ ತಮ್ಮ ಹಿರಿಯ ಸಹೋದರ ಕೂಡ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಹೀಗಾಗಿ, ತಮ್ಮ ಕುಟುಂಬದ ವ್ಯಾಪಾರ ಉದ್ದಿಮೆಗಳ ಜವಾಬ್ದಾರಿಗಳನ್ನು ತೆಗೆದುಕೊಂಡು ಮುನ್ನಡೆಸುವ ಸಂದರ್ಭ ಕೂಡ ಎದುರಾಗಿತ್ತು.

ತಮ್ಮ ಕುಟುಂಬದ ವ್ಯಾಪಾರವನ್ನು ಕೇವಲ ಜವಳಿ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸುವುದು ಅವರಿಗೆ ಇಷ್ಟವಿರಲಿಲ್ಲ. ಈ ಕಾರಣದಿಂದಲೇ ಬೇರೆ-ಬೇರೆ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಳ್ಳಲು ಮುಂದಾಗಿದ್ದು, ಅದರಂತೆ 1987ರಲ್ಲಿ ಅವರು ನಿಕೋಲಸ್‌ ಲ್ಯಾಬೊರೇಟರೀಸ್‌ ಅನ್ನು ಖರೀದಿಸಿದರು.

ಹೀಗೆ ತಮ್ಮ ಪಿರಮಾಲ್‌ ಉದ್ಯಮ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುತ್ತಾ ಹೋದರು. ಅವರು 2010 ರಲ್ಲಿ ಅಬಾಟ್‌ ಲ್ಯಾಬ್ಸ್‌ ಅನ್ನು 3.8 ಶತಕೋಟಿ ಡಾಲರ್‌ಗೆ ಮಾರಾಟ ಮಾಡಿದ್ದರು. ಅವರ ಅತ್ತಿಗೆ ಉರ್ವಿ ಪರಿಮಾಲ್‌ ಅವರು ಪೆನನ್ಸುಲಾ ಲ್ಯಾಂಡ್‌, ರಿಯಲ್‌ ಎಸ್ಟೇಟ್‌ ವ್ಯವಹಾರದ ಮಾಲೀಕರಾಗಿದ್ದಾರೆ. ಅವರು ಅಶೋಕ್‌ ಪಿರಮಾಲ್‌ ಗ್ರೂಪ್‌ನ ಆಶ್ರಯದಲ್ಲಿವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ.

ಈ ಗ್ರೂಪ್‌ನ ಉಪಾಧ್ಯಕ್ಷರಾದ ಅಜಯ್‌ ಪಿರಮಾಲ್‌ ಅವರ ಪತ್ನಿ ಸ್ವಾತಿ ಪಿರಮಾಲ್‌. ನಂದಿನಿ ಹಾಗೂ ಆನಂದ್‌ ಪಿರಮಾಲ್‌ ಅವರು ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಅಜಯ್‌ ಪಿರಮಾಲ್‌ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಪಿರಮಾಲ್‌ ಅವರು ಪ್ರಸ್ತುತ ಹೊಂದಿರುವ ಆಸ್ತಿ ಮೌಲ್ಯ 3.8 ಬಿಲಿಯನ್‌ ಡಾಲರ್‌ ಅಥವಾ 31,000 ಕೋಟಿ ರೂಪಾಯಿ ಆಗಿದೆ.

2018ರಲ್ಲಿ ಆನಂದ್‌ ಪಿರಮಾಲ್‌ ಅವರು ಮುಕೇಶ್‌ ಅಂಬಾನಿ ಅವರ ಮಗಳು ಇಶಾ ಅವರನ್ನು ಮದುವೆಯಾಗಿದ್ದಾರೆ. ಇದು ಭಾರತ ಕಂಡ ಅತ್ಯಂತ ಅದ್ಧೂರಿ ಮದುವೆಗಳಲ್ಲಿ ಒಂದಾಗಿ ಇವತ್ತಿಗೂ ಗುರುತಿಸಿಕೊಂಡಿದೆ. ಈ ಮದುವೆಯಲ್ಲಿ ಇಶಾ ಅಂಬಾನಿ ಹಾಗೂ ಆನಂದ್‌ ಅಂಬಾನಿ ಅವರು 450 ಕೋಟಿ ರೂಪಾಯಿ ಮನೆಯನ್ನು ಗಿಫ್ಟ್‌ ಆಗಿ ಪಡೆದುಕೊಂಡಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+