ಕ್ರಿಕೆಟ್ ಪ್ರೇಮಿಗಳಿಗೆ ಜತಿನ್ ಪರಾಂಜಪೆ ಸ್ಫೂರ್ತಿದಾಯಕ ಜರ್ನಿ ಬಗ್ಗೆ ತಿಳಿದಿರಬಹುದು ಹಾಗೂ ಎಲ್ಲರೂ ತಿಳಿದುಕೊಳ್ಳಬೇಕಾದ ಕಥೆಯಾಗಿದೆ. ಪರಾಂಜಪೆ ಅವರು ಭರವಸೆಯ ಕ್ರಿಕೆಟರ್ ಆಗಿದ್ದರು. ರಣಜಿ ಕ್ರಿಕೆಟ್‌ನಲ್ಲಿ ಉತ್ತಮ ಯಶಸ್ಸು ಸಾಧಿಸಿದ್ದ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತವನ್ನು ಬಹಳ ಕಡಿಮೆ ಅವಧಿಗೆ ಪ್ರತಿನಿಧಿಸಿದ್ದರು.
1986-87ರಲ್ಲಿ ಬಾಂಬೆ ಕ್ರಿಕೆಟ್ ಅಸೋಸಿಯೇಷನ್‌ನ ವರ್ಷದ ಜ್ಯೂನಿಯರ್ ಕ್ರಿಕೆಟರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಜತಿನ್ ಅವರು 14 ವರ್ಷದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದರು. ಆದರೆ, ಪಾದದ ಗಾಯ ಸಮಸ್ಯೆಯಿಂದಾಗಿ ಪರಾಂಜಪೆ ಅವರ ವೃತ್ತಿ ಜೀವನವು ಅರ್ಧಕ್ಕೆ ಮೊಟಕುಗೊಂಡಿತ್ತು. ವರ್ಷಗಳ ಬಳಿಕ ಅವರು ಬಹು ಮಿಲಿಯನ್ ಡಾಲರ್‌ಗಳ ಸ್ಟಾರ್ಟ್‌ಅಪ್ ಅನ್ನು ಕಟ್ಟಿ ಬೆಳೆಸಿದರು.

1972ರಲ್ಲಿ ಹುಟ್ಟಿದ ಪರಾಂಜಪೆ ಅವರು ಆಕರ್ಷಕ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ಸಾಂಪ್ರದಾಯಿಕ ಎಡಗೈ ಸ್ಲೋ ಬೌಲರ್ ಕೂಡ ಆಗಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ಪರಾಂಜಪೆ 1991-92ರಲ್ಲಿ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದ್ದರು. ಸುಮಾರು ಏಳು ವರ್ಷಗಳ ಬಳಿಕ ಅಂದರೆ 1998ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.
ಅವರ ವೃತ್ತಿ ಜೀವನದಲ್ಲಿ ಟೊರೊಂಟೊದಲ್ಲಿ ನಡೆದ ಸಹರಾ ಏಷ್ಯಾ ಕಪ್‌ನಲ್ಲಿ ಅವರ 23ರನ್‌ಗಳ ನಾಟೌಟ್ ಆಟ ಅವಿಸ್ಮರಣೀಯ ಪಂದ್ಯವಾಗಿತ್ತು. ಆ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಗೆಲುವಿಗೆ ಅವರು ಕಾರಣರಾಗಿದ್ದರು. ಎರಡು ಪಂದ್ಯಗಳ ಬಳಿಕ ಅವರು ಪಾದದ ಗಾಯಕ್ಕೆ ಒಳಗಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳಬೇಕಾಯಿತು.
ಆ ಬಳಿಕ ಪರಾಂಜಪೆ ಅವರು ರಣಜಿ ಪಂದ್ಯಗಳನ್ನು ಆಡಿ ಉತ್ತಮ ಪ್ರದರ್ಶನ ನೀಡಿದ್ದರೂ ರಾಷ್ಟ್ರೀಯ ಆಯ್ಕೆದಾರರು ಎಂದಿಗೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಇಲ್ಲಿಗೆ ಇನ್ನೇನು ಪರಾಂಜಪೆ ಕಥೆ ಮುಗಿಯಿತೆಂದು ಅಂದುಕೊಳ್ಳುತ್ತಿರಬೇಕಾದರೆ, ಅದು ಹೊಸ ಅಧ್ಯಾಯವೊಂದಕ್ಕೆ ನಾಂದಿಹಾಡಿತ್ತು. ಪರಾಂಜಪೆ ಅವರನ್ನು ಆಸ್ಟ್ರೇಲಿಯನ್ ಸ್ಪೋರ್ಟಿಂಗ್ ಫ್ರಾಂಟಿಯರ್ಸ್ ಎಂಬ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಸಂಪರ್ಕಿಸಿತ್ತು. ಅದರ ಜತೆ ಸೇರಿಕೊಂಡು ಎರಡು ವರ್ಷಗಳ ಕಾಲ ವ್ಯಾಪಾರದ ಬಗ್ಗೆ ಕಲಿತರು. ಆ ಬಳಿಕ ಅವರು ಸ್ಪೋರ್ಟ್ಸ್‌ಒನ್ ಇಂಡಿಯಾ ಎಂಬ ಸ್ಪೋರ್ಟ್ಸ್ ಈವೆಂಟ್ ಅಂಡ್ ಮಾರ್ಕೆಟಿಂಗ್ ಕಂಪೆನಿಯನ್ನು ಸ್ಥಾಪಿಸಿದರು.
ಅವರ ಜೀವನದ ಮತ್ತೊಂದು ತಿರುವು ಅಂದರೆ ಅದೇ ವೇಳೆಗೆ ನೈಕ್ ಸಂಸ್ಥೆ ಅವರನ್ನು ಗುರುತಿಸಿ ತನ್ನ ಜತೆ ಸೇರಿಸಿಕೊಂಡಿತ್ತು. ಅವರು ನೈಕ್‌ಗಾಗಿ ನೆದರ್‌ಲ್ಯಾಂಡ್‌ನಲ್ಲಿ ನೆಲೆಸಿಕೊಂಡು ಮೂರು ವರ್ಷಗಳ ಕಾಲ ಯೂರೋಪಿಯನ್ ಫುಟ್‌ಬಾಲ್ ಅನ್ನು ನಿರ್ವಹಿಸಿದರು. ಅಲ್ಲಿನ ಕೆಲಸದಲ್ಲಿ ಕಲಿತ ಹಲವಾರು ಅಂಶಗಳನ್ನು ಇಟ್ಟುಕೊಂಡು ವಾಪಾಸ್ ಭಾರತಕ್ಕೆ ಬಂದು ಖೇಲೊಮೋರ್ ಎಂಬ ಸಂಸ್ಥೆಯನ್ನು 2017ರಲ್ಲಿ ಹುಟ್ಟು ಹಾಕಿದರು.
ಪರಾಂಜಪೆಯ ಕಂಪೆನಿಯು ಕ್ರಿಕೆಟ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್‌ನಂಥ ಕ್ರೀಡೆಗಳಲ್ಲಿ ಕೋಚ್‌ಗಳು-ಅಕಾಡೆಮಿಗಳಿಗೆ ಅಕ್ರಿಗೇಟರ್ ಆಗಿ ಕಾರ್ಯನಿರ್ವಹಿಸುತ್ತಿದೆ. ತಮ್ಮ ಮುಂಬೈ ಮೂಲದ ಸ್ಟಾರ್ಟಪ್‌ನ ಹೂಡಿಕೆದಾರರಲ್ಲಿ ಡ್ರೀಮ್11, ಎರುಡಿಟಸ್ ಸಿಇಒ ಅಶ್ವಿನ್ ದಮೇರಾ ಸೇರಿದ್ದಾರೆ. ಜತಿನ್ ಪರಾಂಜಪೆ ಅವರು ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರ ಸಹೋದರಿ ಗಾಂಧಾಲಿ ಪರಾಂಜಪೆ ಅವರನ್ನು ವಿವಾಹವಾಗಿದ್ದಾರೆ.
ಗಾಂಧಾಲಿ ಅವರು ಖೇಲೋಮೋರ್‌ನ ನಿರ್ದೇಶಕರೂ ಹೌದು. ಜತಿನ್ ಅವರ ತಂದೆ ವಾಸು ಪರಾಂಜಪೆ ಅವರು 1960ರ ದಶಕದಲ್ಲಿ ರಣಜಿ ಕ್ರಿಕೆಟರ್ ಆಗಿದ್ದು, ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಹೆಸರಾಂತ ಕೋಚ್ ಆಗಿದ್ದರು. ಅಲ್ಲದೆ ಪರಾಂಜಪೆ ಅವರು ಬಿಸಿಸಿಐನಲ್ಲಿ ರಾಷ್ಟ್ರೀಯ ಆಯ್ಕೆದಾರರೂ ಆಗಿದ್ದರು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications