ಜೇತಾ ರಾಮ್ ಚೌಧರಿ ಎಂಬ ಈ ಯುವ ಉದ್ಯಮಿಯ ಕಥೆಯು ಬಹಳ ಸ್ಫೂರ್ತಿದಾಯಕವಾಗಿದೆ. ಬಾಲ್ಯದಲ್ಲಿ ಕಂಪ್ಯೂಟರ್ ಖರೀದಿಸುವುದಕ್ಕೂ ಅವರ ಬಳಿ ಹಣವಿರಲಿಲ್ಲ. ಆದರೆ, ಬದುಕಿನಲ್ಲಿನ ಕಠಿಣ ಪರಿಶ್ರಮ ಹಾಗೂ ಕಲಿಯುವ ಆಸಕ್ತಿಯಿಂದಾಗಿ ಈಗ ಅವರು 215 ಕೋಟಿ ರೂ. ನಿವ್ವಳ ಆಸ್ತಿಯ ಕಂಪೆನಿಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಬಡತನದ ಪರಿಸ್ಥಿತಿ ಎಷ್ಟರಮಟ್ಟಿಗೆ ಇತ್ತು ಅಂದರೆ ಕಂಪ್ಯೂಟರ್ ಬಗ್ಗೆ ಕಲಿಯುವುದಕ್ಕೂ ಅವರ ಬಳಿ ಹಣವಿರಲಿಲ್ಲ.
ಏನೆಲ್ಲ ಕಷ್ಟಗಳು- ಸವಾಲುಗಳು ಎದುರಾಗಿದ್ದರೂ ಜೀವನದಲ್ಲಿ ಭರವಸೆಯನ್ನು ಮಾತ್ರ ಎಂದಿಗೂ ಕಳೆದುಕೊಂಡಿರಲಿಲ್ಲ. ಜೇತಾ ರಾಮ್ ಅವರು ರಾಜಸ್ಥಾನದ ಬಾರ್ಮರ್‌ನವರು. ರಾಮ್ ಬೆಳೆಯುತ್ತಿದ್ದಂತೆ ಅವರ ಕುಟುಂಬದವರ ಯಾರ ಬಳಿಯೂ ಒಂದು ಕಂಪ್ಯೂಟರ್ ಇರಲಿಲ್ಲ.

ಹೀಗಾಗಿ, ಜೇತಾ ರಾಮ್ ಅವರು ಮೊದಲ ಬಾರಿಗೆ ತಮ್ಮ ನೆರೆಹೊರೆಯವರ ಬಳಿ ಕಂಪ್ಯೂಟರ್ ಸಾಧನವನ್ನು ನೋಡಿದ್ದರು. ಹೇಗಾದರೂ ಮಾಡಿ ಜೀವನದಲ್ಲಿ ದೊಡ್ಡ ಉದ್ಯಮಿಗಳ ರೀತಿಯಲ್ಲಿ ಯಶಸ್ಸನ್ನು ಗಳಿಸಬೇಕು ಎಂಬುದು ಅವರ ಛಲವಾಗಿತ್ತು.
2018ರಲ್ಲಿ ಜೇತಾ ಅವರು ಎಎಸ್‌ಬಿ ಡಿಜಿಟಲ್ ಸೊಲ್ಯೂಷನ್ಸ್ ಎಂಬ ಕಂಪೆನಿಯನ್ನು ನೋಂದಣಿ ಮಾಡಿಸಿದ್ದರು. ಆದರೆ, ಕೆಲವೇ ವರ್ಷಗಳಲ್ಲಿ ಅವರ ಕಂಪೆನಿಯು 215 ಕೋಟಿ ರೂ. ಮೌಲ್ಯದ ಕಂಪೆನಿಯಾಗಿ ಬೆಳೆದಿದೆ. ಜೇತಾ ಅವರು ತಮ್ಮ ನೆರೆಹೊರೆಯವರಿಂದ ಕಂಪ್ಯೂಟರ್ ಬಗ್ಗೆ ಕಲಿತುಕೊಂಡಿದ್ದರು. ಬಳಿಕ ಇದು ನಮ್ಮ ಬದುಕಿಗೆ ಭದ್ರ ಭವಿಷ್ಯವನ್ನು ಒದಗಿಸಬಹುದು ಎಂಬುದನ್ನು ಮನಗಂಡರು.
ಜೇತಾ ಅವರು ಜೈಪುರಕ್ಕೆ ಹೋಗಿ ಅಲ್ಲಿ ಶಿಕ್ಷಣ ಮಾಡಬೇಕೆಂದು ಬಯಸಿದ್ದರು. ಆದರೆ, ಜೇತಾ ಪೋಷಕರು ತಮ್ಮ ಬಳಿ ಹಣವಿಲ್ಲ ಎಂದು ಹೇಳುವ ಮೂಲಕ ಅವರ ಆಸೆಗೆ ತಣ್ಣೀರು ಎರಚಿದ್ದರು. ಆದರೆ ಜೇತಾ ಅವರು ಅಲ್ಲಿ ಕಂಪ್ಯೂಟರ್ ಸೆಂಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೂಲಕ ಅಲ್ಲಿಯೇ ಕಂಪ್ಯೂಟರ್ ಕೂಡ ಕಲಿಯಲಾರಂಭಿಸಿದರು.
ಆಧಾರ್ ಕೆವೈಸಿ, ಹಣ ವರ್ಗಾವಣೆ, ಬಿಲ್ ಪಾವತಿ, ಮಿನಿ ಎಟಿಎಂ, ಟಿಕೆಟ್ ಬುಕ್ಕಿಂಗ್, ದ್ವಿಚಕ್ರ ವಿಮೆ, ಇ-ಮಿತ್ರ ಹಾಗೂ ಇತರೆ ಸೇವೆ ನೀಡುವ ಮೂಲಕ ಶುಲ್ಕ ತೆಗೆದುಕೊಳ್ಳುವುದು ಅವರ ಕಂಪೆನಿಯ ವಿಶೇಷತೆಯಾಗಿದೆ.
ತಮಗೆ ತಾವು ಪ್ರಾಮಾಣಿಕರಾಗಿಲ್ಲದಿದ್ದರೆ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ. ಜನರು ತಮ್ಮ ಜೀವನದಲ್ಲಿ ಯಾವತ್ತೂ ಧನಾತ್ಮಕವಾಗಿರಬೇಕು ಹಾಗೂ ಕಲಿಯುತ್ತಲೇ ಇರಬೇಕು ಎನ್ನುವುದು ಅವರ ಅಭಿಪ್ರಾಯವಾಗಿದೆ.
ಏಕಾಂಗಿಯಾಗಿ ಪ್ರಾರಂಭಿಸಿದ್ದ ಜೇತಾ ಅವರ ಕಂಪೆನಿಯು ಈಗ 4000ಕ್ಕೂ ಹೆಚ್ಚು ಫ್ರಾಂಚೈಸಿಗಳನ್ನು ಹೊಂದಿವೆ. ಜೈಪುರದಲ್ಲಿ ಕಾರ್ಪೊರೇಟ್ ಕಚೇರಿಯನ್ನು ಕೂಡ ಪ್ರಾರಂಭಿಸಿದ್ದಾರೆ. ಆಧಾರ್‌ಗೆ ಲಿಂಕ್ ಮಾಡಲಾಗಿರುವ ಡಿಜಿಟಲ್ ಸೇವೆಗಳ ಬಗ್ಗೆ ಜನರಿಗೆ ಸಹಾಯ ಮಾಡಲು ಭಾರತದ ಪ್ರತಿ ಹಳ್ಳಿಗಳಲ್ಲಿ ಒಂದು ಡಿಜಿಟಲ್ ಕೇಂದ್ರವನ್ನು ತೆರೆಯಬೇಕೆಂಬುದು ಅವರ ಗುರಿಯಾಗಿದೆ.
ಅವರ ಕಂಪೆನಿಯು ಪ್ರಸ್ತುತ ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸ್‌ಗಢ ಹಾಗೂ ಬಿಹಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅವರ ಕಂಪೆಯು 20 ಲಕ್ಷ ಫ್ರಾಂಚೈಸಿ ಔಟ್‌ಲೆಟ್‌ಗಳನ್ನು ಒದಗಿಸಲು ಬಯಸಿದೆ.
ಜೇತಾ ಅವರು ತಮ್ಮ ಸ್ವಂತ ಕಂಪೆನಿಯನ್ನು ಹುಟ್ಟುಹಾಕಿ ಅದನ್ನು ಮುನ್ನಡೆಸುತ್ತಿದ್ದಾರೆ. ಅವರ ತಂದೆಯು ಬಸ್ ಕಂಡಕ್ಟರ್ ಆಗಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications