Jimmy Naval Tata: ಮೊಬೈಲ್‌ ಬಳಸದೆ, 2ಬಿಎಚ್‌ಕೆ ಫ್ಲ್ಯಾಟ್‌ನಲ್ಲಿ ನೆಲೆಸಿರುವ ರತನ್‌ ಟಾಟಾ ಕಿರಿಯ ಸಹೋದರ ಜಿಮ್ಮಿ!

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್‌ ಟಾಟಾ ಅವರು ಮದುವೆಯೇ ಆಗಿಲ್ಲ ಹಾಗೂ ತಮ್ಮ ಸ್ವಂತ ಕುಟುಂಬವನ್ನು ಕೂಡ ಹೊಂದಿಲ್ಲ. ಆದರೆ, ಟಾಟಾ ಅವರು ತಮ್ಮ ಒಡಹುಟ್ಟಿದವರ ಪೈಕಿ ಅದರಲ್ಲಿಯೂ ವಿಶೇಷವಾಗಿ ಕಿರಿಯ ಸಹೋದರ ಜಿಮ್ಮಿ ನೇವಲ್‌ಗೆ ತುಂಬಾ ಹತ್ತಿರವಾಗಿದ್ದಾರೆ. ಜಿಮ್ಮಿ ಮಾತ್ರ ಹಿರಿಯ ಸಹೋದರ, ಉದ್ಯಮಿ ರತನ್‌ ಟಾಟಾ ಅವರಂತೆ ಅಲ್ಲ; ಬದಲಿಗೆ ಸಾರ್ವಜನಿಕ ಬದುಕು ಹಾಗೂ ಮಾಧ್ಯಮದ ಕಣ್ಣಿನಿಂದ ಬಹಳ ದೂರ ಉಳಿದುಕೊಂಡಿದ್ದಾರೆ.

ಈ ವರ್ಷದ ಪ್ರಾರಂಭದಲ್ಲಿ ರತನ್‌ ಟಾಟಾ ಅವರು ತಮ್ಮ ಸಹೋದರ ಜಿಮ್ಮಿ ಟಾಟಾ ಅವರೊಂದಿಗಿನ ಬಾಲ್ಯದ ಬ್ಲ್ಯಾಕ್‌ ಅಂಡ್‌ ವೈಟ್‌ ಫೋಟೊವನ್ನು ಪೋಸ್ಟ್‌ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಷಯ ಕೋರಿದ್ದರು. ಇದು 1945ರಲ್ಲಿ ತೆಗೆದಿದ್ದ ಫೋಟೊ ಆಗಿದ್ದು, "ಇಬ್ಬರು ಸಹೋದರ ನಡುವೆ ಏನೂ ಬಂದಿಲ್ಲ" ಎಂದು ಟಾಟಾ ಬರೆದುಕೊಂಡಿದ್ದರು.

 2ಬಿಎಚ್‌ಕೆ ಫ್ಲ್ಯಾಟ್‌ನಲ್ಲಿ ನೆಲೆಸಿರುವ ರತನ್‌ ಟಾಟಾ ಕಿರಿಯ ಸಹೋದರ!

ಹೀಗಿರುವಾಗ, ಜಿಮ್ಮಿ ಟಾಟಾ ಅವರು ಸಾಮಾಜಿಕ ಮಾಧ್ಯಮದಿಂದ ದೂರವಿದ್ದು, ದೇಶದ ಅತ್ಯಂತ ಪ್ರಭಾವಿ ಉದ್ಯಮಿ ಕುಟುಂಬಕ್ಕೆ ಸೇರಿದವರಾಗಿದ್ದರು ಕೂಡ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾಧ್ಯಮದ ಜತೆಗೆ ಯಾವ ವಿಚಾರವನ್ನು ಹಂಚಿಕೊಂಡಿಲ್ಲ ಎನ್ನುವುದು ಬಹಳ ವಿಶೇಷ ಹಾಗೂ ಆಶ್ಚರ್ಯಕರ ಸಂಗತಿಯಾಗಿದೆ. ಹಾಗಾದರೆ, ರತನ್‌ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ನೇವಲ್‌ ಟಾಟಾ ಅವರ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

ಜಿಮ್ಮಿ ನೇವಲ್‌ ಟಾಟಾ ಅವರು ಯಾರು?

ಜಿಮ್ಮಿ ನೇವಲ್‌ ಟಾಟಾ ಅವರು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್‌ ಟಾಟಾ ಅವರ ಕಿರಿಯ ಸಹೋದರ. ಆದರೆ, ಜಿಮ್ಮಿ ಅವರು ಯಾವುದೇ ಪ್ರಚಾರಗಳನ್ನು ಬಯಸದೆ ಸಮಾಜದ ಮುಖ್ಯವಾಹಿನಿಯಿಂದ ಬಹಳ ದೂರ ಉಳಿದುಕೊಂಡಿದ್ದಾರೆ. ಅಷ್ಟೇಅಲ್ಲ ಬಹಳ ಸರಳವಾದ ಜೀವನ ಶೈಲಿಯನ್ನು ಮೈಗೂಡಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಿಂದಲೂ ಅಂತರ ಕಾಪಾಡಿಕೊಂಡಿದ್ದಾರೆ.

ಹಿರಿಯ ಸಹೋದರ ರತನ್‌ ಟಾಟಾ ಅವರು ಕುಟುಂಬದ ವ್ಯವಹಾರಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದರೆ, ಜಿಮ್ಮಿ ಟಾಟಾ ಅವರು ಒಂದು ಹೆಜ್ಜೆ ಹಿಂದೆ ಸರಿಯಲು ಹಾಗೂ ಅತ್ಯಂತ ಸರಳ ಜೀವನವನ್ನು ನಡೆಸಲು ನಿರ್ಧರಿಸಿದ್ದಾರೆ. ಅವರ ಬಳಿ ಬೃಹತ್‌ ಸಂಪತ್ತು ಇದ್ದರು ಕೂಡ ಮುಂಬೈನ ಕೊಲಾಬಾದಲ್ಲಿ ಸಾರ್ವಜನಿಕರ ದೃಷ್ಟಿಯಿಂದ ಬಹಳ ದೂರವಿರುವ 2BHK ಅಪಾರ್ಟ್‌ಮೆಂಟ್‌ನಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಹರ್ಷ್‌ ಗೋಯೆಂಕಾ ಅವರು ಇತ್ತೀಚೆಗೆ ಹಂಚಿಕೊಂಡಿರುವ ಫೋಟೊವೊಂದು ವೈರಲ್‌ ಆಗಿದ್ದು, ಆ ಪ್ರಕಾರ, ಜಿಮ್ಮಿ ಟಾಟಾ ಅವರು ಸಣ್ಣ ಫ್ಲ್ಯಾಟ್‌ನಲ್ಲಿ ವಾಸವಿರುವುದಾಗಿ ಹೇಳಲಾಗುತ್ತಿದೆ. ಕುಟುಂಬದ ವ್ಯವಹಾರಗಳಲ್ಲಿಯೂ ಅವರು ಹೆಚ್ಚಿನ ಆಸಕ್ತಿ ಹೊಂದಿಲ್ಲ. ಜತೆಗೆ ಅವರು ಉತ್ತಮ ಸ್ಕ್ವಾಷ್‌ ಆಟಗಾರರಾಗಿದ್ದು, ಪ್ರತಿ ಬಾರಿಯೂ ಗೋಯೆಂಕಾ ಅವರನ್ನು ಸೋಲಿಸುತ್ತಿದ್ದರು.

ವರದಿಗಳ ಪ್ರಕಾರ, ಜಿಮ್ಮಿ ಟಾಟಾ ಅವರು ಮೊಬೈಲ್‌ ಫೋನ್‌ ಕೂಡ ಹೊಂದಿಲ್ಲ. ಅವರು ಎಲ್ಲ ದೈನಂದಿನ ಅಪ್‌ಡೇಟ್‌ಗಳನ್ನು ಪತ್ರಿಕೆ ಮೂಲಕವೇ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಅವರು ಇನ್ನೂ ಟಾಟಾ ಸನ್ಸ್‌, ಟಿಸಿಎಸ್‌, ಟಾಟಾ ಮೋಟಾರ್ಸ್‌, ಟಾಟಾ ಸ್ಟೀಲ್‌, ಟಾಟಾ ಪವರ್‌, ಇಂಡಿಯನ್‌ ಹೋಟೆಲ್ಸ್‌ ಮತ್ತು ಟಾಟಾ ಕೆಮಿಕಲ್ಸ್‌ನಲ್ಲಿ ಪ್ರಮುಖ ಷೇರುದಾರಾಗಿದ್ದಾರೆ. ಜತೆಗೆ, ಟಾಟಾ ಉದ್ಯಮದ ಪ್ರತಿಯೊಂದು ವ್ಯವಹಾರಗಳ ದೈನಂದಿನ ಬೆಳವಣಿಗೆಗಳ ಅಪ್‌ಡೇಟ್‌ ಮಾಹಿತಿಯನ್ನು ಹೊಂದಿದ್ದಾರೆ.

ರತನ್ ಟಾಟಾ ಬಗ್ಗೆ ತಿಳಿಯಿರಿ

ರತನ್ ನೇವಲ್ ಟಾಟಾ (ಜನನ 28 ಡಿಸೆಂಬರ್ 1937) ಒಬ್ಬ ಭಾರತೀಯ ಕೈಗಾರಿಕೋದ್ಯಮಿ, ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರಾಗಿದ್ದಾರೆ. ಅವರು 1990 ರಿಂದ 2012 ರವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು ಮತ್ತು ಅಕ್ಟೋಬರ್ 2016 ರಿಂದ ಫೆಬ್ರವರಿ 2017 ರವರೆಗೆ ಹಂಗಾಮಿ ಅಧ್ಯಕ್ಷರಾಗಿದ್ದರು.

ರತನ್ ಟಾಟಾ ಅವರು ಅದರ ಚಾರಿಟಬಲ್ ಟ್ರಸ್ಟ್‌ಗಳ ಮುಖ್ಯಸ್ಥರಾಗಿ ಮುಂದುವರೆದಿದ್ದಾರೆ. 2008 ರಲ್ಲಿ, ಅವರು 2000 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ಪಡೆದ ನಂತರ ಭಾರತದಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣವನ್ನು ಪಡೆದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+