ತಂತ್ರಜ್ಞಾನದ ಯುಗದಲ್ಲಿ ಇಂದಿನ ಮಕ್ಕಳು ಮೊಬೈಲ್, ಇಂಟರ್ನೆಟ್ ಮತ್ತು ಕಂಪ್ಯೂಟರ್‌ಗಳಿಂದ ಹೆಚ್ಚು ಆಕರ್ಷಣೆಗೊಳಗಾಗುವುದು ಸಾಮಾನ್ಯ. ಗ್ಯಾಜೆಟ್ ಪ್ರಭಾವಗಳ ಬಗ್ಗೆ ಮಕ್ಕಳ ಪೋಷಕರು ಹೆಚ್ಚು ಚಿಂತೆ ಮಾಡುತ್ತಾರೆ. ಆದರೆ ಬಾಲಕನೋರ್ವ ಇಂಟರ್ನೆಟ್ ಮತ್ತು ಕಂಪ್ಯೂಟರ್ ಅನ್ನು ಸದುಪಯೋಗಪಡಿಸಿಕೊಂಡು ಅದೇ ದಾರಿಯಲ್ಲಿ ಸಾಗಿ ಕಂಪನಿಯೊಂದನ್ನು ಕಟ್ಟಿದ ದೃಢವಿಶ್ವಾಸದ ಕಥೆ ಇದು.
ಮಧ್ಯಪ್ರದೇಶದ ಇಂದೋರ್‌ನ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕನ್ಹಯ್ಯಾ ಶರ್ಮಾ 23 ನೇ ವಯಸ್ಸಿನಲ್ಲಿ 251 ರೂಪಾಯಿ ಬಂಡವಾಳದೊಂದಿಗೆ ಐಟಿ ಮತ್ತು ಕಾನೂನು ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಕಂಪನಿಯೊಂದನ್ನು ಸ್ಥಾಪಿಸಿದ್ದು ಇಂದು ಕನ್ಹಯ್ಯಾ ಶರ್ಮಾ ಅವರ ವಹಿವಾಟು ಕೋಟಿ ರೂಪಾಯಿ ತಲುಪಿದೆ.

ಮಾತ್ರವಲ್ಲದೆ ಇಡೀ ದೇಶ ಮತ್ತು ವಿಶ್ವದಲ್ಲೇ ಇವರು ಎಥಿಕಲ್ ಹ್ಯಾಕಿಂಗ್‌ನಲ್ಲಿ ಹೆಸರು ಮಾಡಿದ್ದಾರೆ. ಇವರು ತಮ್ಮ 14ನೇ ವಯಸ್ಸಿನಲ್ಲಿಯೇ ಸಾಫ್ಟ್ ವೇರ್ ತಯಾರಿಸಿ 50,000 ರೂ.ಗೆ ಅದನ್ನು ಕನ್ಸ್ಟ್ರಕ್ಷನ್ ಕಂಪನಿಗೆ ಮಾರಾಟ ಮಾಡಿದ್ದರು. ಕನ್ಹಯ್ಯಾ ಶರ್ನಾ ಅವರ ತಂದೆ ಇಂದೋರ್ ನಲ್ಲಿ ಭೋಧಕರಾಗಿದ್ದು, ಇದರಲ್ಲಿ ಸಿಗುವ ವೇತನದಲ್ಲೇ ತಮ್ಮ ಮನೆಯನ್ನು ನಿರ್ವಹಿಸುತ್ತಾರೆ.
ಆದರೆ ಅವರ ಮಗ ಕೇವಲ 23 ನೇ ವಯಸ್ಸಿನಲ್ಲಿ 251 ರೂಪಾಯಿ ಬಂಡವಾಳದೊಂದಿಗೆ ಐಟಿ ಮತ್ತು ಕಾನೂನು ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಕಂಪನಿಗಳನ್ನು ಸ್ಥಾಪಿಸಿ ಹೆಸರುವಾಸಿಯಾದರು. ಇಂದು ಕನ್ಹಯ್ಯಾ ಶರ್ಮಾ ಅವರ ವಹಿವಾಟು ಕೋಟ್ಯಂತರ ರೂಪಾಯಿ ತಲುಪಿದೆ. ಕನ್ಹಯ್ಯಾ ಶರ್ಮಾ ದೇಶದ ಪ್ರಮುಖ ನೈತಿಕ (ಎಥಿಕಲ್ ) ಹ್ಯಾಕರ್‌ಗಳಲ್ಲಿ ಒಬ್ಬರಾಗಿದ್ದಾರೆ.
ಕನ್ಹಯ್ಯಾ ಶರ್ಮಾ ಇಂದೋರ್‌ನ ಸರಾಫಾ ವಿದ್ಯಾ ನಿಕೇತನದಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪಡೆಯಲು ಓಡಾಡುತ್ತಿರುವ ಕಾರ್ಮಿಕರನ್ನು ಕಂಡು ಬೇಸರಗೊಂಡು ಇದಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್ ಅನ್ನು ಏಕೆ ತಯಾರಿಸಬಾರದು ಎಂಬ ಆಲೋಚನೆ ಅವರಿಗೆ ಬಂತು.
ಸಾಫ್ಟ್‌ವೇರ್ ನಿಂದ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಗುತ್ತಿಗೆದಾರರಿಂದ ಹಿಡಿದು ಕಾರ್ಮಿಕರವರೆಗೆ ಅವರು ಎಲ್ಲಿ ಮತ್ತು ಯಾವ ಪ್ರಮಾಣದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಇಡುತ್ತಾರೆ ಎಂಬುದು ಅವರಿಗೆ ತಿಳಿದು ಇದರಿಂದ ಉಪಯೋಗವಾಗುತ್ತದೆ ಎಂದು ಯೋಚಿಸಿ ಕೇವಲ 30 ದಿನಗಳಲ್ಲಿ ಕನ್ಹಯ್ಯಾ ಶರ್ಮಾ ಸಾಫ್ಟ್ ವೇರ್ ಮೊಬೈಲ್ ಆಪ್ ತಯಾರಿಸಿ ಕನ್ಸ್ಟ್ರಕ್ಷನ್ ಸಂಸ್ಥೆಗೆ ಕೇವಲ 50 ಸಾವಿರ ರೂಪಾಯಿಗೆ ಮಾರಾಟ ಮಾಡಿದರು.
ಆ ಕಂಪನಿ ಈಗಲೂ ಕನ್ಹಯ್ಯಾ ಶರ್ಮಾ ತಯಾರಿಸಿದ ಸಾಫ್ಟ್‌ವೇರ್ ಮೂಲಕ ತನ್ನ ನಿರ್ಮಾಣ ಕಾರ್ಯವನ್ನು ನಿರ್ವಹಿಸುತ್ತಿದೆ ಎಂಬುವುದು ವಿಶೇಷ. ಕನ್ಹಯ್ಯಾ ಶರ್ಮಾ ಅವರು 6 ಅಥವಾ 7 ನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ಕಂಪ್ಯೂಟರ್ ಮತ್ತು ಇಂಟರ್ನೆಟ್ ಮೂಲಕ ಹೊರ ಜಗತ್ತಿನ ಸಂಪರ್ಕ ಪಡೆದುಕೊಂಡರು. ಏಳನೇ ತರಗತಿಯಲ್ಲಿ, ಆನ್ಲೈನ್ ಸರ್ಟಿಫಿಕೇಷನ್, ಪರೀಕ್ಷೆಯನ್ನು ಬರೆದು ಅದರಲ್ಲಿ ವಿಫಲರಾದರು.
"ನನ್ನ ಮನಸ್ಸು ಬೇಸರದಿಂದ ಕುಗ್ಗಿಹೋಗಿತ್ತು. ನನ್ನ ತಂದೆ ದುಃಖವನ್ನು ನನ್ನ ನೋಡಿ ನನಗೆ 251 ರೂ. ನೀಡಿ ಎಂದಿಗೂ ಧೈರ್ಯ ಕಳೆದುಕೊಳ್ಳಬೇಡ ಎಂದು ಹೇಳಿದರು. ಅದೇ 251 ರೂ.ಗಳಿಂದ ನಾನು ನನ್ನ ಕೆಲಸವನ್ನು ಆರಂಭಿಸಿ ಕಾನೂನು ಸೇವೆಗಳಿಗೆ ಐಟಿ ಸಾಫ್ಟ್‌ವೇರ್ ಅಭಿವೃದ್ಧಿಯನ್ನು ಒದಗಿಸುವ ಕಂಪನಿಗಳನ್ನು ಪ್ರಾರಂಭಿಸಿದೆ. ಇಂದು ಆ ಕಂಪನಿಗಳ ವಹಿವಾಟು ಕೋಟಿ ರೂಪಾಯಿಗಳಲ್ಲಿದೆ" ಎನ್ನುತ್ತಾರೆ ಕನ್ಹಯ್ಯಾ ಶರ್ಮಾ.
ತಾವು ಓದುತ್ತಿದ್ದ ಸಂದರ್ಭ ಮನೆಯಲ್ಲಿ ಸೈಕಲ್ ಮಾತ್ರ ಇರುತ್ತಿತ್ತು, ಆದರೆ ಅಂದು ತಂದೆ ನೀಡಿದ 251 ರೂಪಾಯಿಯಿಂದ ಮನೆಯಲ್ಲಿ 5-6 ಐಷಾರಾಮಿ ಕಾರುಗಳಿರುವ ಪವಾಡವನ್ನು ಸಾಧಿಸಿ ತೋರಿಸಿದರು ಕನ್ಹಯ್ಯಾ ಶರ್ಮ. ಇವರು ದೇಶದ ಸರ್ಕಾರಿ ಇನ್ಸ್ಟಿಟ್ಯೂಷನ್ಸ್ ಜೊತೆಯೂ ಸಂಪರ್ಕ ಹೊಂದಿದ್ದು ಅವರು ಸರ್ಕಾರಿ ಅಧಿಕಾರಿ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ.
ಇಷ್ಟು ಮಾತ್ರವಲ್ಲದೇ ಕನ್ಹಯ್ಯಾ ಶರ್ಮಾ ದೇಶದ ಅನೇಕ ದೊಡ್ಡ ದೊಡ್ಡ ಸರ್ಕಾರಿ ಸಂಸ್ಥೆಗಳ, ಇಲಾಖೆಗಳ ಉನ್ನತ ಹುದ್ದೆಯ ಅಧಿಕಾರಿಗಳಿಗೆ ತರಬೇತಿ ನೀಡುತ್ತಾರೆ. ಕನ್ಹಯ್ಯಾ ಶರ್ಮಾ ಅವರ ಹ್ಯಾಕಿಂಗ್ ಕೌಶಲ್ಯವನ್ನು ನೋಡಿ, ದೇಶಾದ್ಯಂತ ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ತಮ್ಮೊಂದಿಗೆ ಕೈ ಜೋಡಿಸಲು ಆಹ್ವಾನ ನೀಡಿವೆ.
2.5 ಕೋಟಿಯ ವಾರ್ಷಿಕ ಪ್ಯಾಕೇಜ್ ಅನ್ನು ತಿರಸ್ಕರಿಸುವ ಮೂಲಕ, ಕನ್ಹಯ್ಯಾ ಶರ್ಮಾ ತಮ್ಮದೇ ಆಗಿರುವ ಐಟಿ ಮತ್ತು ಲೀಗಲ್ ವರ್ಕ್ ಗಳನ್ನೇ ಮುಂದುವರಿಸಿದ್ದಾರೆ. ಕನ್ಹಯ್ಯಾ ಶರ್ಮಾ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ ಪ್ರಸ್ತುತ Wappgo ಮತ್ತು Legal251 ನ ಸ್ಥಾಪಕರು ಮತ್ತು ಸಿಇಒ ಆಗಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications