ಸಣ್ಣ ಪುಟ್ಟ ಉದ್ಯೋಗವನ್ನು ಮಾಡಿಕೊಂಡಿದ್ದು, ಆದರೆ ಜೀವನದಲ್ಲಿ ತಾವು ಕೈಗೊಂಡ ನಿರ್ಧಾರ, ಕಾರ್ಯಗಳಿಂದಾಗಿ ಈಗ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುವ ಹಲವಾರು ಮಂದಿಯನ್ನು ನಾವು ನೋಡಿದ್ದೇವೆ. ಅವರ ಯಶೋಗಾಥೆಯನ್ನು ಕೇಳಿ ಸ್ಪೂರ್ತಿಯನ್ನು ಪಡೆದುಕೊಂಡವರು ಎಷ್ಟೋ ಮಂದಿ ಇದ್ದಾರೆ. ಇಂತಹ ಸ್ಪೂರ್ತಿದಾಯಕ ವ್ಯಕ್ತಿಗಳ ಪೈಕಿ ಬ್ಲಾಗರ್ ಕರ ಪೆರೆಜ್ ಕೂಡಾ ಒಬ್ಬರಾಗಿದ್ದಾರೆ.
ಹಣಕಾಸು ಸ್ವತಂತ್ರ್ಯವನ್ನು ಪಡೆದುಕೊಂಡ, ಯಶಸ್ವಿಯಾದ, ತನ್ನ ಜೀವನವನ್ನೇ ಬದಲಾಯಿಸಿಕೊಂಡ ಬ್ಲಾಗರ್ ಕರ ಪೆರೆಜ್ ಸ್ಪೂರ್ತಿದಾಯಕ ಜೀವನ ಕಥೆಯನ್ನು ನಾವಿಲ್ಲಿ ನಿಮ್ಮ ಮುಂದಿರಿಸಿದ್ದೇವೆ. ಪೆರೆಜ್ ಯುನೈಟೆಡ್ ಸ್ಟೇಟ್ಸ್‌ನ ಆಸ್ಟಿನ್‌ನಲ್ಲಿ ವೇಟರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳೆ. ಆಸ್ಟಿನ್ ಕರೆನ್ಸಿಯನ್ನು ಭಾರತದ ರೂಪಾಯಿಗೆ ಪರಿವರ್ತನೆ ಮಾಡಿ ನಾವು ಲೆಕ್ಕಾಚಾರ ಮಾಡಿದಾಗ ವಾರ್ಷಿಕವಾಗಿ 15 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದ ಮಹಿಳೆ ಕರ ಪೆರೆಜ್.
ಆದರೆ 24 ಲಕ್ಷ ರೂಪಾಯಿ ಶಿಕ್ಷಣ ಸಾಲವನ್ನೇ ಕರ ಪಾವತಿ ಮಾಡಬೇಕಾಗಿತ್ತು. ಇದರಿಂದಾಗಿ ಜೀವನದ ಎಲ್ಲ ಆಕಾಂಕ್ಷೆಗಳನ್ನು ತಲುಪಲು ಕರ ಪೆರೆಜ್ ಅತೀ ಕಷ್ಟವಾಗಿತ್ತು. ಆದರೆ ಕರ ಪೆರೆಜ್ ಈಗ ವಾರ್ಷಿಕವಾಗಿ 1.5 ಕೋಟಿ ರೂಪಾಯಿ ಸಂಪಾದನೆ ಮಾಡುವ ಮಹಿಳೆಯಾಗಿದ್ದಾರೆ. ಈಗ ಕರ ಪೆರೆಜ್ ಜನಪ್ರಿಯ ಬ್ಲಾಗರ್ ಆಗಿದ್ದಾರೆ. ತನ್ನದೇ ಆದ ಸಂಸ್ಥೆಯನ್ನು ಕೂಡಾ ಸ್ಥಾಪನೆ ಮಾಡಿದ್ದಾರೆ. ಕರ ಪೆರೆಜ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಸ್ತ್ರೀವಾದಿ ಹಣಕಾಸು ಶಿಕ್ಷಣ ಸಂಸ್ಥೆ ಸ್ಥಾಪಕಿ ಕರ ಪೆರೆಜ್
ಕರ ಪೆರೆಜ್ ತನ್ನನ್ನು ಹಣಕಾಸು ಸ್ತ್ರೀವಾದಿ ಎಂದು ಕರೆದುಕೊಳ್ಳುತ್ತಾರೆ. ಮಹಿಳೆಯರ ಹಣಕಾಸು ಸ್ವಾತಂತ್ರ್ಯದ ಬಗ್ಗೆಗಿನ ಮಾಹಿತಿಯನ್ನು ನೀಡುತ್ತದೆ. ಕರ ಪೆರೆಜ್ ಪ್ರಸ್ತುತ ಹಣಕಾಸು ಶಿಕ್ಷಣ ಸಂಸ್ಥೆಯಾದ ಬ್ರೆವೆಲಿ ಗೊ (Bravely Go) ಸಂಸ್ಥಾಪಕಿ ಆಗಿದ್ದಾರೆ. ಇದು ಆರಂಭದಲ್ಲಿ ಬ್ಲಾಗ್ ಅನ್ನು ಆರಂಭಿಸಿದ ಸಂಸ್ಥೆಯಾಗಿದೆ, ಆದರೆ ಬಳಿಕ ಒಂದು ಚಳುವಳಿಯಾಗಿಯೇ ಪರಿವರ್ತನೆಯಾಗಿದೆ. ಎಲ್ಲ ಖರ್ಚುಗಳಿಗೆ ಕಡಿವಾಣ ಹಾಕಿ ತಾನು ಸಂಪಾದನೆ ಮಾಡಿದ ಹಣದಿಂದ ಕರ ತನ್ನ ಶಿಕ್ಷಣ ಸಾಲವನ್ನು ಪಾವತಿಸಿದ್ದಾರೆ. ಬಳಿಕ ಸಂಸ್ಥೆಯನ್ನು ಆರಂಭಿಸಿದ್ದಾರೆ. ತನ್ನ ಲಿಂಕ್‌ಡಿನ್ ಪ್ರೊಫೈಲ್‌ನಲ್ಲಿ ಕರ ಪೆರೆಸ್ ಹಣಕಾಸು ತಜ್ಞೆ, ವಕ್ತಾರೆ ಮತ್ತು ಸ್ತ್ರೀವಾದಿ ಹಣಕಾಸು ಶಿಕ್ಷಣ ಸಂಸ್ಥೆಯ ಸ್ಥಾಪಕಿ ಎಂದು ಪರಿಚಯಿಸಿಕೊಂಡಿದ್ದಾರೆ.
ಮಹಿಳೆಯರಿಗಾಗಿ ಶಿಕ್ಷಣ ಸಂಸ್ಥೆ
ಕರ ಪೆರೆಜ್ 2011ರಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಅದಾದ ಬಳಿಕ ತಾನು ಸಾಲ ಮತ್ತು ಕಡಿಮೆ ಸಂಪಾದನೆಯಿಂದ ಹೊರ ಬರಬೇಕಾಗಿದೆ ಎಂಬ ನಿರ್ಧಾರವನ್ನು ಕರೆ ಪೆರೆಜ್ ಮಾಡಿಕೊಂಡಿದ್ದಾರೆ. ಉಳಿದೆಲ್ಲ ಖರ್ಚುಗಳಿಗೆ ಕಡಿವಾಣ ಹಾಕಿ ತನ್ನ ಸಂಪಾದನೆಯಿಂದ ಶಿಕ್ಷಣ ಸಾಲವನ್ನು ಕರ ಪೆರೆಜ್ ಮರುಪಾವತಿ ಮಾಡಿದ್ದಾರೆ. ಅದಾದ ಬಳಿಕ ಕರ ಪೆರೆಜ್ ತನ್ನದೇ ಆದ ಶೈಕ್ಷಣಿಕ ಪ್ಲಾಟ್‌ಫಾರ್ಮ್ Bravely Go ಅನ್ನು ಆರಂಭಿಸಿದ್ದಾರೆ. ಮಹಿಳೆಯರಿಗೆ ಹಣ ಉಳಿತಾಯ, ಸಂಪಾದನೆಯ ಬಗ್ಗೆ ಮಾಹಿತಿ ನೀಡುವುದು ಈ ಪ್ಲಾಟ್‌ಫಾರ್ಮ್‌ನ ಪ್ರಮುಖ ಉದ್ದೇಶವಾಗಿದೆ. ಶಿಬಿರ, ಕೋರ್ಸ್‌ಗಳ ಮೂಲಕ ಮಾಹಿತಿಯನ್ನು ನೀಡುವುದನ್ನು ಆರಂಭಿಸಲಾಗಿದೆ.
ಪೆರೆಜ್ ಸಂಪಾದನೆ ಎಷ್ಟಿದೆ?
ಕರ ಪೆರೆಜ್ ಪ್ರಸ್ತುತ 34 ವರ್ಷದವರಾಗಿದ್ದು ಮಾರಾಟದ ಮೂಲಕ 100,000 ಡಾಲರ್ ಮತ್ತು ಇತರೆ ಕಾರ್ಯದಿಂದ 27,000 ಡಾಲರ್ ಸಂಪಾದನೆ ಮಾಡುತ್ತಿದ್ದಾರೆ. ಈ ಸಂಸ್ಥೆಯನ್ನು ಹೊರತುಪಡಿಸಿ ಕರ ಬೇರೆ ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ನಿರ್ವಹಣೆ, ಪ್ರೌಢಶಾಲೆ ಮಕ್ಕಳ ಕೋಚ್, ಫ್ರೀಲ್ಯಾನ್ಸ್ ಬರವಣಿಗೆಯನ್ನು ಕರ ಪೆರೆಜ್ ಮಾಡುತ್ತಿದ್ದಾರೆ. ಕರ ಪೆರೆಜ್ ದಿನದ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ಈ ಮೂಲಕ ಸಾಲವನ್ನು ಮರುಪಾವತಿ ಮಾಡಿದ್ದಾರೆ. 2017ರಲ್ಲಿ ಸ್ಪಾನ್ಸರ್‌ಶಿಪ್ ಡೀಲ್ ಮೂಲಕ ಹಣ ಸಂಪಾದನೆ ಆರಂಭಿಸಿದ್ದಾರೆ. ಸಂಸ್ಥೆಯನ್ನು ಆರಂಭ ಮಾಡಿದ ಬಳಿಕವೂ ತನ್ನ ಆಸೆಗಳಿಗೆ ಕಡಿವಾಣ ಹಾಕುತ್ತಾ ಬೆಳೆದರವು ಕರ ಪೆರೆಜ್.
ಪೆರೆಜ್ ಸಂಸ್ಥೆಯ ವಿಸ್ತಾರ
ಕರ ಪೆರೆಜ್ ತನ್ನ ಸಂಸ್ಥೆಯ ಹೆಸರಿಗಾಗಿ 12 ಡಾಲರ್, ವೆಬ್‌ಸೈಟ್ ಆರಂಭಕ್ಕಾಗಿ 50 ಡಾಲರ್ ಮತ್ತು ಟೆಕ್ಸಾಸ್‌ನಲ್ಲಿ ಸಂಸ್ಥೆಯ ಸ್ಥಾಪನೆಗೆ 308 ಡಾಲರ್ ಅನ್ನು ಖರ್ಚು ಮಾಡಿದ್ದಾರೆ. ಹಾಗೆಯೇ ವೆಬ್‌ಸೈಟ್‌ನ ನೀತಿ ನಿಯಮ, ಷರತ್ತುಗಳನ್ನು ಸಿದ್ಧಪಡಿಸಿದ ವಕೀಲರಿಗಾಗಿ 900 ಡಾಲರ್ ಅನ್ನು ಕರ ಪೆರೆಜ್ ಖರ್ಚು ಮಾಡಿದ್ದಾರೆ. ಪ್ಲಾಟ್‌ಫಾರ್ಮ್ ಮೂಲಕ ಜನರಿಗೆ ಹಣಕಾಸು ಶಿಕ್ಷಣ ನೀಡಲು ಕರ ಪೆರೆಜ್ ಮೊದಲು ಆರಂಭಿಸಿದ್ದಾರೆ. ಯಾರಿಗೆ ತನ್ನ ವೈಯಕ್ತಿಕ ಬಜೆಟ್ ಬೇಕೋ ಅಥವಾ ಯಾರು ತಮ್ಮ ಸಂಗಾತಿ, ತನ್ನ ಸಂಪತ್ತನ್ನು ವಿಲೀನಗೊಳಿಸಲು ಬಯಸುತ್ತಾರೋ ಅವರಿಗೆ ಸಹಾಯ ಮಾಡುವುದೇ ಸಂಸ್ಥೆಯ ಪ್ರಮುಖ ಪ್ರೊಡೆಕ್ಟ್ ಎಂದು ಪರಿಗಣಿಸಲಾಗಿದೆ. ವೈಯಕ್ತಿಕ ಬಜೆಟ್ ಬೇಕಾದವರಿಗೆ ಸಂಸ್ಥೆಯು ಬಜೆಟ್ ವರ್ಕ್‌ಬುಕ್ ಸಿದ್ಧಪಡಿಸಿ ನೀಡುತ್ತದೆ. ಪ್ರಸ್ತುತ ಯೂಟ್ಯೂಬ್ ಚಾನೆಲ್‌ನಲ್ಲಿ ಕರ ಪೆರೆಜ್ ಬ್ಲಾಗಿಂಗ್ ಆರಂಭಿಸಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications