ಬಹಳ ಶಾಂತ ಹಾಗೂ ಏಕಾಂತ ಸ್ವಭಾವದ ವ್ಯಕ್ತಿತ್ವವನ್ನು ಹೊಂದಿರುವ ಕಾರ್ತಿಕ್ ಶರ್ಮಾ ಹೆಸರಿನ ಈ ಉದ್ಯಮಿ ಕೇವಲ 48 ವರ್ಷ ವಯಸ್ಸಿನವರು. ಅತ್ಯಂತ ಸರಳ ಬದುಕನ್ನು ಮುನ್ನಡೆಸುವ ಅವರು ಒಬ್ಬ ಯುವ ಸ್ವಯಂ ನಿರ್ಮಿತ ಬಿಲಿಯನೇರ್ ಆಗಿ ಬೆಳೆದಿದ್ದಾರೆ. ಹೌದು, ತನ್ನ ಸ್ವ ಪ್ರಯತ್ನದಿಂದ ಬಿಲಿಯನೇರ್ ಆದ, ಒಂದು ಸ್ಟಾಕ್‌ನಿಂದ ಕೋಟ್ಯಾಂತರ ರೂಪಾಯಿ ಆದಾಯ ಗಳಿಸಿದ ಕಾರ್ತಿಕ ಶರ್ಮಾ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ.
ಕಾರ್ತಿಕ್ ಶರ್ಮಾ ಅವರ ನಿವ್ವಳ ಆಸ್ತಿ ಮೌಲ್ಯ 23,000 ಕೋಟಿ ರೂಪಾಯಿ (2.9 ಬಿಲಿಯನ್ ಡಾಲರ್). ಒಂದೂವರೆ ದಶಕದ ಹಿಂದೆ ಸ್ವಂತ ಕಂಪೆನಿಯನ್ನು ಪ್ರಾರಂಭಿಸಿದ್ದ ಕಾರ್ತಿಕ್ ಶರ್ಮಾ ಅವರು 2021ರಲ್ಲಿ ನಡೆದ ಒಂದು ದೊಡ್ಡ ವ್ಯವಹಾರದಿಂದಾಗಿ 2 ಬಿಲಿಯನ್ ಡಾಲರ್ ಹಣವನ್ನು ಗಳಿಸಿದರು.

ಕಾರ್ತಿಕ್ ಶರ್ಮಾ ಯಾರು?: ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೇ ವಿದ್ಯಾರ್ಥಿಯಾದ ಕಾರ್ತಿಕ್ ಶರ್ಮಾ ಅವರು ಇಂದು ವಿಶ್ವದ ಉನ್ನತ ಹೆಡ್ಜ್ ಫಂಡ್ ಮ್ಯಾನೇಜರ್‌ಗಳ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅವರ ಕಂಪೆನಿಯಾದ ಎಸ್‌ಆರ್‌ಎಸ್ ಹೂಡಿಕೆಯು ಇಂದು ಸುಮಾರು 10 ಶತಕೋಟಿ ಡಾಲರ್ (81,000 ಕೋಟಿಗಿಂತ ಹೆಚ್ಚು) ಮೌಲ್ಯದ ಪೋರ್ಟ್‌ಪೋಲಿಯೊವನ್ನು ನಿಭಾಯಿಸುತ್ತಿದೆ.
ಭಾರತದಲ್ಲಿ ಹುಟ್ಟಿ ಬೆಳೆದ ಕಾರ್ತಿಕ್ ಶರ್ಮಾ ಅವರು ಐಐಟಿಯಿಂದ ಎಂಜಿನಿಯರಿಂಗ್ ಮುಗಿಸಿ ಸ್ನಾತಕೋತ್ತರ ಪದವಿಗಾಗಿ ಅಮೆರಿಕಾ ದೇಶಕ್ಕೆ ತೆರಳಿದ್ದರು. ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಗಳಿಸಿದ ನಂತರ ಕಾರ್ತಿಕ್ ಶರ್ಮಾ ಅವರು 1998ರಲ್ಲಿ ಪ್ರಮುಖ ಸಲಹಾ ಸಂಸ್ಥೆಯಾದ ಮೆಕಿನ್ಸ್ ಅಂಡ್ ಕಂಪೆನಿಗೆ ಸೇರಿದ್ದರು.
ನ್ಯೂಯಾರ್ಕ್‌ನಲ್ಲಿ ಮೂರು ವರ್ಷಗಳ ಕಾಲ ಸಲಹೆಗಾರರಾಗಿ ಕೆಲಸ ಮಾಡಿದ ನಂತರ ಅವರು ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ಗೆ ಸೇರಿದರು. ನಂತರ ಅಲ್ಲಿ ಅವರು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದರು. ಕಾರ್ತಿಕ್ ಶರ್ಮಾ ಅವರು ಕಂಪೆನಿಗೆ ಸೇರಿದಾಗ ಕಾರ್ತಿಕ್ ಅವರನ್ನು ಅತ್ಯಂತ ಪ್ರತಿಭಾವಂತ ಪಾಲುದಾರ ಎಂದು ಕರೆಯಲಾಯಿತು. ಅವರು ತಮ್ಮ ದೀರ್ಘಕಾಲದ ಉದ್ಯಮದಲ್ಲಿ ಟೀಕಾಕಾರರಿಗೆ ಉತ್ತರಿಸಿದ್ದೇ ಹೆಚ್ಚು ಎಂದರೆ ತಪ್ಪಾಗಲಾರದ್ದು.
ಕಾರ್ತಿಕ್ ಅವರು 2006ರಲ್ಲಿ ಎಸ್‌ಆರ್‌ಎಸ್ ಅನ್ನು ತಮ್ಮ ತಂದೆಯ ಹೆಸರಿನ ಮೊದಲಾಕ್ಷದೊಂದಿಗೆ ಪ್ರಾರಂಭಿಸಿದ್ದರು. ಎಸ್‌ಆರ್‌ಎಸ್ ಕಾಮನ್ ಸ್ಟಾಕ್ ಅಂಡ್ ಇಕ್ವಿಟಿ ಸ್ವ್ಯಾಪ್ಸ್ ಮೂಲಕ ಅವಿಸ್‌ನಲ್ಲಿ ಶೇ.43ರಷ್ಟು ಷೇರು ಹೊಂದಿದೆ. ಅಲ್ಲದೆ ಶರ್ಮಾ ಅವರು 2020ರಿಂದ ಕಾರ್ ರೆಂಟಲ್ ಕಂಪೆನಿಯ ಆಡಳಿತ ಮಂಡಳಿಯಲ್ಲಿ ಇದ್ದಾರೆ. ವರ್ಷಗಳ ಸತತ ಪ್ರಯತ್ನದ ಬಳಿಕ 2010ರಲ್ಲಿ ಅವರು ಕಾರು ಬಾಡಿಗೆ ಕಂಪೆನಿಯ ಸ್ಟಾಕ್‌ನಲ್ಲಿ ಹೂಡಿಕೆಯನ್ನು ಮಾಡಿದ್ದರು.
11 ವರ್ಷಗಳ ಬಳಿಕ ಆ ಹೂಡಿಕೆ ಅವಿಸ್ ಸ್ಟಾಕ್ ಶೇಕಡ 456ರಷ್ಟು ಬೆಳೆದು ಬ್ಲಾಕ್‌ಬಾಸ್ಟರ್ ರೀತಿಯಲ್ಲಿ ಆದಾಯ ಬರುವುದಕ್ಕೂ ಕಾರಣವಾಯಿತು. ಅಷ್ಟೇಅಲ್ಲ ಎಸ್‌ಆರ್‌ಎಸ್ ಅವಿಸ್‌ನ ಶೇಕಡ 50ರಷ್ಟು ಷೇರು ಮಾಲೀಕತ್ವವನ್ನು ಹೊಂದುವುದರೊಂದಿಗೆ ಷೇರಿನ ಬೆಲೆಯು ಕೂಡ ಕಾರ್ತಿಕ್ ಅವರ ಸಂಪತ್ತನ್ನು ಮತ್ತಷ್ಟು ಏರಿಸುವಂತೆ ಮಾಡಿದೆ. ಜತೆಗೆ ಉನ್ನತ ಹೆಡ್ಜ್ ಫಂಡ್ ಮ್ಯಾನೇಜರ್ ಎಂಬ ಖ್ಯಾತಿಯನ್ನು ತಂದುಕೊಟ್ಟಿದೆ.
2022ರಲ್ಲಿ ನ್ಯೂಯಾರ್ಕ್ ಮೂಲದ ಈ ಅನಿವಾಸಿ ಭಾರತೀಯ ಬಿಲಿಯನೇರ್ಸ್ ಕ್ಲಬ್ ಅನ್ನು ಕೂಡ ಪ್ರವೇಶಿಸುವ ಮೂಲಕ ವಿಶ್ವದ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಪ್ರಸ್ತುತ ಕಾರ್ತಿಕ್ ಶರ್ಮಾ ಅವರು ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದಾರೆ. ಕಾರ್ತಿಕ್ ಶರ್ಮಾ ಅವರ ನಿವ್ವಳ ಆಸ್ತಿ ಮೌಲ್ಯ 23,000 ಕೋಟಿ ರೂಪಾಯಿ (2.9 ಬಿಲಿಯನ್ ಡಾಲರ್).
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications