ಇಂಜಿನ್‌ಗಳನ್ನು ಸರಬರಾಜು ಮಾಡಿಲ್ಲ ಎಂದು ಏರ್‌ಲೈನ್ಸ್ ವಿಮಾನ ಎಂಜಿನ್ ತಯಾರಕರಾದ ಪ್ರಾಟ್ ಮತ್ತು ವಿಟ್ನಿ ವಿರುದ್ಧ ಗೋ ಫಸ್ಟ್ ದೂರು ದಾಖಲು ಮಾಡಿದೆ. ಹಾಗೆಯೇ ಮೇ 3 ಮತ್ತು ಮೇ 4ರಂದು ನಿಗದಿಪಡಿಸಿದ್ದ ಎಲ್ಲ ವಿಮಾನಗಳನ್ನು ರದ್ದು ಮಾಡಲಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಗೋ ಫಸ್ಟ್ ತಿಳಿಸಿದೆ.
ಯುಎಸ್ ಮೂಲದ ಜೆಟ್ ಇಂಜಿನ್ ಉತ್ಪಾದಕರಾದ ಪ್ರಾಟ್ ಮತ್ತು ವಿಟ್ನಿ ಇಂಜಿನ್‌ಗಳನ್ನು ಸರಬರಾಜು ಮಾಡದ ಕಾರಣದಿಂದಾಗಿ ವಿಮಾನಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಗೋ ಫಸ್ಟ್ ವಿಮಾನಯಾನ ಸಂಸ್ಥೆಯು ತಿಳಿಸಿದೆ. ಈಗ ಭಾರೀ ನಷ್ಟವನ್ನು ಹೊಂದಿರುವ ಗೋ ಫಸ್ಟ್ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್‌ಗೆ (ಎನ್‌ಸಿಎಲ್‌ಟಿ) ಅರ್ಜಿ ಸಲ್ಲಿಸಿದೆ.

ಯುಎಸ್ ಮೂಲದ ಜೆಟ್ ಇಂಜಿನ್ ಉತ್ಪಾದಕರಾದ ಪ್ರಾಟ್ ಮತ್ತು ವಿಟ್ನಿ (P&W) ಇಂಜಿನ್‌ಗಳನ್ನು ಸರಬರಾಜು ಮಾಡದ ಕಾರಣ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಇದರಿಂದಾಗಿ 50ಕ್ಕೂ ಅಧಿಕ ವಿಮಾನಗಳನ್ನು ರದ್ದು ಮಾಡಬೇಕಾಗಿದೆ," ಎಂದು ಸುದ್ದಿ ಸಂಸ್ಥೆಗೆ ಗೋ ಫಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಂಸ್ಥೆಯ ವಿರುದ್ಧ ಆಕ್ರೋಶ ಕೇಳಿಬರುತ್ತದೆ. ಸಂಸ್ಥೆಯು ಸಂಪೂರ್ಣ ಮೊತ್ತ ರಿಫಂಡ್ ಮಾಡಲಾಗುವುದು ಎಂದು ಹೇಳಿದೆ. ಸಂಸ್ಥೆಯ ಸಿಇಒ ಆದಾಯ, ಇತರೆ ಮಾಹಿತಿ ತಿಳಿಯೋಣ ಮುಂದೆ ಓದಿ....
ಗೋ ಫಸ್ಟ್ ಸಿಇಒ ಕೌಶಿಕ್ ಖೋನಾ ಯಾರು?
ಕೌಶಿಕ್ ಖೋನಾ ಇತ್ತೀಚೆಗೆ ಗೋ ಫಸ್ಟ್ ಏರ್‌ಲೈನ್ಸ್ ಎಂದು ರಿಬ್ರ್ಯಾಂಡ್ ಆದ ಗೋ ಏರ್‌ಲೈನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದಾರೆ. ಗೋ ಫಸ್ಟ್ ಸಂಸ್ಥೆಯಲ್ಲಿ ಸಾಕಷ್ಟು ನಷ್ಟವಾಗುತ್ತಿದ್ದಂತೆ ಗೋ ಫಸ್ಟ್ ಸಂಸ್ಥೆಯು ಆಗಸ್ಟ್ 2020ರಲ್ಲಿ ಕೌಶಿಕ್ ಖೋನಾರನ್ನು ಗೋ ಫಸ್ಟ್‌ನ ಉನ್ನತ ಸ್ಥಾನವಾದ ಸಿಇಒ ಹುದ್ದೆಗೆ ನೇಮಕ ಮಾಡಿದೆ.
ಕೌಶಿಕ್ ಖೋನಾ ಸಂಸ್ಥೆಯು ದಿವಾಳಿಯಾದಾಗ ಅದನ್ನು ನಿರ್ವಹಣೆ ಮಾಡುವ ವೃತ್ತಿಪರ ಮತ್ತು ನಿರ್ವಹಣಾ ಸಲಹೆಗಾರರಾಗಿದ್ದಾರೆ. ಕೌಶಿಕ್ ಖೋನಾ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಕೌಶಿಕ್ ಖೋನಾ ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್, ತಲಾಟಿ ಮತ್ತು ತಲಾಟಿ ಮತ್ತು ವಿಂಡ್ ವರ್ಲ್ಡ್‌ನಂತಹ ಅನೇಕ ದೊಡ್ಡ ಸಂಸ್ಥೆಗಳಲ್ಲಿ ಸಿಒಒ, ಸಿಎಫ್‌ಇ, ಸಿಎಕ್ಸ್‌ಒ ಆಗಿ ಕೆಲಸ ಮಾಡಿದ್ದಾರೆ.
ಕೌಶಿಕ್ ಖೋನಾ ನಾಯಕತ್ವದಲ್ಲಿ, ಗೋ ಫಸ್ಟ್ ಏರ್‌ಲೈನ್ಸ್ ಕಂಪನಿಯಲ್ಲಿ ತನ್ನ ಅತಿದೊಡ್ಡ ನಷ್ಟವನ್ನು ದಾಖಲಿಸಿದೆ. ಕೇವಲ 4184 ಕೋಟಿ ಆದಾಯವನ್ನು ಕೌಶಿಕ್ ಖೋನಾ ಹೊಂದಿದೆ. ಕಂಪನಿಯು 1808 ಕೋಟಿ ರೂಪಾಯಿಯಷ್ಟು ದೊಡ್ಡ ನಷ್ಟವನ್ನು ಅನುಭವಿಸಿದೆ. 2022 ರ ಹಣಕಾಸು ವರದಿಯಲ್ಲಿ 3222 ಕೋಟಿ ರೂಪಾಯಿ ನೆಗೆಟಿವ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ಹೇಳಿದೆ.
ಇನ್ನು ಈ ಸಂದರ್ಭದಲ್ಲೇ ಗೋ ಫಸ್ಟ್ ವೆಬ್‌ಸೈಟ್‌ನಲ್ಲಿ ಮೇ 3 ರಂದು ದೆಹಲಿ-ಮುಂಬೈ ಮಾರ್ಗದಲ್ಲಿ ಯಾವುದೇ ವಿಮಾನವನ್ನು ತೋರಿಸುತ್ತಿಲ್ಲ. ಹಾಗೆಯೇ ಎಲ್ಲಾ ಮುಂಬೈ-ದೆಹಲಿ ವಿಮಾನಗಳನ್ನು ಮೇ 4 ಕ್ಕೆ "ಸೋಲ್ಡ್ ಔಟ್" ಎಂದು ತೋರಿಸುತ್ತದೆ. ಬುಧವಾರ ಮತ್ತು ಗುರುವಾರಕ್ಕೆ ಯಾವುದೇ ಬುಕ್ಕಿಂಗ್ ಅನ್ನು ವಿಮಾನಯಾನ ಸಂಸ್ಥೆಯು ಸ್ವೀಕಾರ ಮಾಡುತ್ತಿಲ್ಲ. ಈ ಎರಡು ದಿನಗಳ ಅವಧಿಗೆ ಕೆಲವು ವಿಮಾನಯಾನ ಪೋರ್ಟಲ್‌ಗಳಲ್ಲಿ ಗೋ ಫಸ್ಟ್ ಆಯ್ಕೆ ಲಭ್ಯವಾಗುತ್ತಿಲ್ಲ.


Click it and Unblock the Notifications