ಜಾಗತಿಕ ಆರ್ಥಿಕ ಹಿಂಜರಿತದಿಂದ ಉದ್ಯೋಗ ಪಡೆಯುವುದು ಈಗ ಸುಲಭದ ಮಾತಲ್ಲ. ಅದರಲ್ಲೂ ದೈತ್ಯ ಕಂಪನಿಗಳಲ್ಲಿ ನೇಮಕಾತಿ ಆಯ್ಕೆಯಾಗುವ ಮೊದಲು ಹಲವಾರು ಸುತ್ತಿನ ಸಂದರ್ಶನಗಳನ್ನು ಪಾಸ್ ಮಾಡಬೇಕಾಗುತ್ತದೆ. ಹೀಗಾಗಿ ಕೆಲಸ ಸಿಕ್ಕರೂ ಅಂದುಕೊಂಡ ಸ್ಯಾಲರಿ ಪ್ಯಾಕೇಜ್ ಸಿಗುವುದು ಬಲು ಕಷ್ಟ.
ಆದರೆ ಸರ್ಕಾರಿ ಸ್ವಾಮ್ಯದ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) 22 ವರ್ಷದ ವಿದ್ಯಾರ್ಥಿನಿಯೊರ್ವಳು ಈ ಎಲ್ಲಾ ಸವಾಲು ಗೆದ್ದು ಬೀಗಿದ್ದಾಳೆ. ಯಾಕೆಂದರೆ ಆಕೆಯನ್ನು ಕ್ಯಾಲಿಫೋರ್ನಿಯಾ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆಯೊಂದು ದಾಖಲೆಯ ಸ್ಯಾಲರಿ ಪ್ಯಾಕೇಜ್ ನೀಡಿ ಕೆಲಸಕ್ಕೆ ನೇಮಿಸಿಕೊಳ್ಳುವ ಆಫರ್ ನೀಡಿದೆ.

ತುಮಕೂರು ಜಿಲ್ಲೆಯ ಮಧುಗಿರಿ ಮೂಲದ, ಯುವಿಸಿಇ ವಿದ್ಯಾರ್ಥಿನಿ ಕೀರ್ತಿ ಎನ್. ಸಿ. ವಾರ್ಷಿಕ 58.3 ಲಕ್ಷ ರೂ.ಗಳ ಪ್ಯಾಕೇಜ್‌ನೊಂದಿಗೆ ಉದ್ಯೋಗದ ಆಫರ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿಂದೆ ಅಂದರೆ 2019 ರಲ್ಲಿ ಯುವಿಸಿಇ ಕಾಲೇಜಿನಲ್ಲಿ ಆಸ್ಟ್ರೇಲಿಯಾದ ಕಂಪನಿಯೊಂದು ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ 49.75 ಲಕ್ಷ ರೂಪಾಯಿಗಳ ವೇತನ ಪ್ಯಾಕೇಜ್ ನೀಡಿದ್ದು ಸುದ್ದಿಯಾಗಿತ್ತು ಆದರೆ ದಾಖಲೆ ಮುರಿದ ಕೀರ್ತಿಗೆ ಪಾತ್ರರಾಗಿದ್ದಾರೆ ವಿದ್ಯಾರ್ಥಿನಿ "ಕೀರ್ತಿ"!
ಕೀರ್ತಿ ಅವರ ತಂದೆ ನಾಗರಾಜ ಜಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರೆ, ಅವರ ತಾಯಿ ಗೃಹಿಣಿಯಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಓದುತ್ತಿರುವ ಕೀರ್ತಿ ಅವರು ಪ್ರಸ್ತುತ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದು, 2023ರ ಆಗಸ್ಟ್ ನಲ್ಲಿ ಅಂತಿಮ ಪರೀಕ್ಷೆ ಬರೆಯಲಿದ್ದಾರೆ.
"ಇಂಟರ್ವ್ಯೂ ಎದುರಿಸುವಾಗ ಒಳ್ಳೆಯ ಆಫರ್ ಸಿಗುವ ವಿಶ್ವಾಸವಿತ್ತು. ಆದರೆ ಕಂಪನಿ ನೀಡಿದ ಪ್ಯಾಕೇಜ್ ನೋಡಿ ನನಗೆ ಚಕಿತವಾಯಿತು. ಬರವಣಿಗೆ, ಕೋಡಿಂಗ್, ತಾಂತ್ರಿಕ ಮತ್ತು ಮ್ಯಾನೇಜಿಂಗ್ ಹೀಗೆ ಬೇರೆ ಬೇರೆ ವಿಭಾಗದಲ್ಲಿ ಹಲವಾರು ಸುತ್ತಿನ ಸಂದರ್ಶನವನ್ನು ಎದುರಿಸಿದೆ. ನಾನು ಪ್ರತಿ ಸುತ್ತನ್ನು ಆತ್ಮವಿಶ್ವಾಸದಿಂದಲೇ ಎದುರಿಸುತ್ತಾ ಮುಂದುವರೆದೆ" ಎಂದು ಡೆಕ್ಕನ್ ಹೆರಾಲ್ಡ್ ಗೆ ಪ್ರತಿಕ್ರಿಯಿಸಿದ್ದಾರೆ.
ಕೀರ್ತಿ ಅವರನ್ನು ಸಂಸ್ಥೆಯೂ ತನ್ನ ಡೇಟಾ ವಿಷ್ಯೂವಲೈಜೇಶನ್ ವಿಭಾಗಕ್ಕೆ ನೇಮಿಸಿಕೊಂಡಿದೆ. ಕೈಗೆಟುಕುವಂತಿರುವುದು ಮಾತ್ರವಲ್ಲದೇ ಶೈಕ್ಷಣಿಕ ಒತ್ತಡ ಕಡಿಮೆಯಿರುವ ಕಾರಣ ತಾವು ಎಂಜಿನಿಯರಿಂಗ್ ಓದಲು ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಆಯ್ಕೆ ಮಾಡಿದ್ದಾಗಿ ಹೇಳಿದ್ದಾರೆ ಕೀರ್ತಿ.
"ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ನನ್ನ ರ್‍ಯಾಂಕ್ 4,000 ಆಗಿತ್ತು. ನನಗೆ ಕೆಲವು ಉನ್ನತ ಖಾಸಗಿ ಕಾಲೇಜುಗಳಲ್ಲಿ ಸೀಟು ಸಿಕ್ಕರೂ ಶುಲ್ಕ ಕಡಿಮೆ ಮತ್ತು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯವಿದೆ ಎಂಬ ಕಾರಣಕ್ಕೆ ಯುವಿಸಿಇಯಲ್ಲಿ ಸೀಟು ಪಡೆಯಲು ಕೊನೆಯ ಸುತ್ತಿನವರೆಗೂ ವೈಟ್ ಮಾಡಿದ್ದೆ, " ಎಂದು ಕೀರ್ತಿ ಹೇಳುತ್ತಾರೆ.
ರೆಕಾರ್ಡ್ ಬ್ರೇಕಿಂಗ್ ಪ್ಯಾಕೇಜ್‌ನೊಂದಿಗೆ ಆಯ್ಕೆಯಾದ ರಮ್ಯಾ
ಸಿಂಗಾಪುರ ಮೂಲದ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆ ಗಳಿಸುವ ಮೂಲಕ ತಮಿಳುನಾಡಿನ ರೈತನ ಪುತ್ರಿ ಇತಿಹಾಸ ಸೃಷ್ಟಿಸಿದ್ದಾರೆ. ತಮಿಳುನಾಡಿನ ಸೇಲಂ ಮೂಲದ 22ರ ಹರೆಯದ ರಮ್ಯಾ ಆರ್. ಅವರನ್ನು ಐಐಎಂ ಸಂಬಲ್‌ಪುರ್‌ನ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಸಿಂಗಾಪುರ ಮೂಲದ ಸಂಸ್ಥೆ ತೊಲರಾಮ್ ಗ್ರೂಪ್ ಸಂಸ್ಥೆಯು ರೆಕಾರ್ಡ್ ಬ್ರೇಕಿಂಗ್ ಪ್ಯಾಕೇಜ್ ನೀಡಿ ನೇಮಿಸಿಕೊಂಡಿದೆ.
ರಮ್ಯಾ ಅವರಿಗೆ ತೊಲರಾಮ್ ಗ್ರೂಪ್ 64.15 ಲಕ್ಷ ರೂ. ಪ್ಯಾಕೇಜ್ ನೀಡಿದ್ದು, ನೈಜೀರಿಯಾದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ರಮ್ಯಾ ಅವರು ತೊಲರಾಮ್ ಗ್ರೂಪ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸುಮಾರು 5-6 ಸುತ್ತಿನ ಇಂಟರ್ವ್ಯೂ ಎದುರಿಸಿದ್ದಾರೆ ರಮ್ಯಾ ಆರ್ ಅವರ ಅತ್ಯುತ್ತಮ ಮ್ಯಾನೇಜ್ಮೆಂಟ್ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯದಿಂದಾಗಿ ದಾಖಲೆ ಬರೆಯುವ ಪ್ಯಾಕೇಜ್‌ನೊಂದಿಗೆ ನೇಮಕಗೊಂಡಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications