ಹಲವಾರು ಮಂದಿ ತಮ್ಮ ಜೀವನದಲ್ಲಿ ಮುನ್ನಡೆಯುವುದರ ಹಿಂದೆ ಒಂದು ಸ್ಪೂರ್ತಿ ಇದ್ದೆ ಇರುತ್ತದೆ. ರಾಕೇಶ್ ಜುಂಜುನ್‌ವಾಲಾರ ಸ್ಟಾಕ್ ಮಾರುಕಟ್ಟೆ ಗಳಿಕೆಯನ್ನು ನೋಡಿಕೊಂಡು, ತಾನು ಕೂಡಾ ಷೇರು ಪೇಟೆ ಹೂಡಿಕೆಯಿಂದ ಗಳಿಕೆಯನ್ನು ಪಡೆದ ವ್ಯಕ್ತಿಯ ಬಗ್ಗೆ ನಾವು ತಿಳಿದಿರಬಹುದು. ಇದೇ ರೀತಿ ಹಲವಾರು ಮಂದಿ ಇದ್ದಾರೆ, ಇನ್ನೋರ್ವ ವ್ಯಕ್ತಿಯ ಬೆಳವಣಿಗೆಯಿಂದ ಸ್ಪೂರ್ತಿ ಪಡೆದು ತಾವು ಕೂಡಾ ಆರ್ಥಿಕವಾಗಿ ಬೆಳವಣಿಗೆ ಕಂಡಿದ್ದಾರೆ.
ಇಂತಹ ವ್ಯಕ್ತಿಗಳಲ್ಲಿ ಕಿಶೋರ್ ಇಂದುಕುರಿ ಕೂಡಾ ಒಬ್ಬರಾಗಿದ್ದಾರೆ. ಕಿಶೋರ್ ಇಂದುಕುರಿ ಜೀವನ ಕಥೆ ಸ್ಫೂರ್ತಿದಾಯಕವಾಗಿದೆ. ಕಿಶೋರ್ ಇಂದುಕುರಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇಂಟೆಲ್ ಉದ್ಯೋಗಿಯಾಗಿದ್ದರು. ಹಾಗೆಯೇ ಅತೀ ಅಧಿಕ ವೇತನ ಪ್ಯಾಕೇಜ್ ಅನ್ನು ಹೊಂದಿದ್ದರು. ಅಮೇರಿಕಾದಲ್ಲಿದ್ದ ತಮ್ಮ ನೆಮ್ಮದಿಯ ಜೀವನವನ್ನು ತೊರೆದ ಕಿಶೋರ್ ಇಂದುಕುರಿ, ಗ್ರಾಮೀಣ ಜೀವನಕ್ಕೆ ಮರಳಿದ್ದಾರೆ. ಹಾಲು ಮಾರಾಟ ಮಾಡುವ ಮೂಲಕ ದಿನಕ್ಕೆ 17 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಕಿಶೋರ್ ಇಂದುಕುರಿ ಬಗ್ಗೆ ಇಲ್ಲಿದೆ ವಿವರ
ಅಮೇರಿಕಾದಲ್ಲಿ ತಮ್ಮ ಅಧಿಕ ವೇತನದ ಉದ್ಯೋಗವನ್ನು ತೊರೆದ ಕಿಶೋರ್ ಇಂದುಕುರಿ ಗ್ರಾಮೀಣ ಜೀವನವನ್ನು ನಡೆಸುತ್ತಿದ್ದಾರೆ. ಅದು ಕೂಡಾ ಕಿಶೋರ್ ಇಂದುಕುರಿ ಬೃಹತ್ ಡೈರಿ ಉದ್ಯಮವನ್ನು ಆರಂಭ ಮಾಡಿದ್ದಾರೆ. ಹೈದರಾಬಾದ್‌ನಲ್ಲಿರುವ ಸಿಡ್ ಡೈರಿ ಫಾರ್ಮ್ ನಗರದ ಅತ್ಯುತ್ತಮ ಡೈರಿ ಎಂದೆಣಿಸಿಕೊಂಡಿದೆ.
ಕಿಶೋರ್ ಇಂದುಕುರಿ ಹೈದಾರಾಬಾದ್‌ನ ಮಧ್ಯಮ ವರ್ಗದ ಪರಿವಾರಕ್ಕೆ ಸೇರಿದವರಾಗಿದ್ದಾರೆ. ಕಿಶೋರ್ ತಂದೆ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದರು. ಕಿಶೋರ್ ಇಂದುಕುರಿ ಕರ್ನಾಟಕ ಮೂಲದವರಾಗಿದ್ದಾರೆ. ಐಐಟಿ ಖರಗ್‌ಪುರದಲ್ಲಿ ಕಿಶೋರ್ ಇಂದುಕುರಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಕಿಶೋರ್ ಇಂದುಕುರಿ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅದೇ ಸಂಸ್ಥೆಯಿಂದ ಪಿಎಚ್‌ಡಿಯನ್ನು ಕೂಡಾ ಪೂರ್ಣಗೊಳಿಸಿದ್ದಾರೆ.
ಅದಾದ ಬಳಿಕ ಕಿಶೋರ್ ಇಂದುಕುರಿ ಅರಿಜೋನಾದಲ್ಲಿನ ಇಂಟೆಲ್ ಕಾರ್ಪೊರೇಷನ್‌ನಲ್ಲಿ ಎಂಜಿನಿಯರ್ ಆಗಿ ಸೇರಿದರು. ಚಾಂಡ್ಲರ್‌ನಲ್ಲಿ ಮನೆ ಖರೀದಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೂ ಕೂಡಾ ತನ್ನ ಜೀವನ ಪರಿಪೂರ್ಣವಾಗಿಲ್ಲ ಎಂದುಕೊಂಡ ಕಿಶೋರ್ ಇಂದುಕುರಿ ಆ ಉದ್ಯೋಗವನ್ನು ತೊರೆದು ಭಾರತಕ್ಕೆ ಆಗಮಿಸಿದ್ದಾರೆ. ಭಾರತದಲ್ಲಿಯೇ ವ್ಯಾಪಾರವನ್ನು ಆರಂಭಿಸುವ ನಿರ್ಧಾರವನ್ನು ಮಾಡಿದ್ದಾರೆ.
ಭಾರತಕ್ಕೆ ಆಗಮಿಸಿದ ಕಿಶೋರ್ ಇಂದುಕುರಿ ಅನೇಕ ವ್ಯವಹಾರಗಳನ್ನು ಪ್ರಾರಂಭಿಸಿದ್ದಾರೆ. ಆದರೆ ವಿಫಲರಾಗಿದ್ದಾರೆ. ಜನರಿಗೆ ಜಿಆರ್‌ಇ ಮತ್ತು ಟಿಒಇಎಫ್‌ಎಲ್ ಟ್ಯೂಚನ್ ಅನ್ನು ಕೂಡಾ ನೀಡಿದ್ದಾರೆ. ಬಳಿಕ ತರಕಾರಿ ಬೆಳೆದು ಮಾರಾಟ ಮಾಡಿದ್ದಾರೆ. ಈ ಎಲ್ಲ ಕಂಪನಿಗಳನ್ನು ತೆರೆದು ನಡೆಸಲು ಕಿಶೋರ್ ಇಂದುಕುರಿ ಒಟ್ಟಾಗಿ ಒಂದು ಕೋಟಿ ರೂಪಾಯಿ ವ್ಯರ್ಥ ಮಾಡಿದ್ದಾರೆ. 2012ರಲ್ಲಿ ಕಿಶೋರ್ ಇಂದುಕುರಿ 20 ದನಗಳನ್ನು ಖರೀದಿ ಮಾಡಿ, ಡೈರಿಯನ್ನು ಆರಂಭ ಮಾಡಿದ್ದಾರೆ.
ಉತ್ಪಾದನ ವೆಚ್ಚ 30 ರೂಪಾಯಿ ಆಗಿದ್ದರೆ, ಪ್ರತಿ ಲೀಟರ್‌ಗೆ 15 ರೂಪಾಯಿಯಂತೆ ಹಾಲನ್ನು ಮಾರಾಟ ಮಾಡಿದ್ದಾರೆ. ಕಿಶೋರ್ ಇಂದುಕುರಿ ಹಸುಗಳಿಂದ ಹಾಲು ಪಡೆಯುವುದರಿಂದ ಹಿಡಿದು ಉತ್ಪನ್ನವನ್ನು ತಲುಪಿಸುವವರೆಗೆ ಎಲ್ಲವನ್ನೂ ನಿರ್ವಹಣೆ ಮಾಡುತ್ತಾರೆ. ಕಿಶೋರ್ ಇಂದುಕುರಿ ಹಾಲನ್ನು ನೀರು, ಔಷಧಿಗಳು ಮತ್ತು ಹಾರ್ಮೋನುಗಳಿಲ್ಲದೆ ಮಾರಾಟ ಮಾಡಿದ್ದಾರೆ. ಗ್ರಾಹಕರು ಮೊದಲು ಹಾಲನ್ನು ಉಪಯೋಗಿಸಿ ಬಳಿಕ ಪಾವತಿ ಮಾಡಲು ಹೇಳಿದ್ದಾರೆ. ಈ ತಂತ್ರ ಫಲಿಸಿದೆ.
ಶೀಘ್ರದಲ್ಲೇ, ಇಂದುಕುರಿ ಹೈದರಾಬಾದ್‌ನ ಅತಿದೊಡ್ಡ ಖಾಸಗಿ ಹಾಲು ಸರಬರಾಜುದಾರರಲ್ಲಿ ಒಬ್ಬರಾಗಿದ್ದಾರೆ. ಕಂಪನಿ ನೂರಾರು ರೈತರಿಂದ ಶುದ್ಧ ಹಾಲನ್ನು ಸಂಗ್ರಹ ಮಾಡುತ್ತದೆ. ಹಾಗೆಯೇ ಕಿಶೋರ್ ಇಂದುಕುರಿ ಪ್ರತಿದಿನ ಸಾವಿರಾರು ಗ್ರಾಹಕರನ್ನು ಹೊಂದಿದ್ದಾರೆ. 100ಕ್ಕೂ ಹೆಚ್ಚು ಜಾನುವಾರುಗಳೊಂದಿಗೆ ಫಾರ್ಮ್ ನಡೆಸುತ್ತಿದ್ದಾರೆ. 120 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ.
ಕಿಶೋರ್ ಇಂದುಕುರಿ ತಮ್ಮ ಸಂಪೂರ್ಣ ಉಳಿತಾಯವನ್ನು ವ್ಯಾಪಾರವನ್ನು ತೆರೆಯಲು ಹೂಡಿಕೆ ಮಾಡಿ 1.3 ಕೋಟಿ ರೂಪಾಯಿ ಸಾಲ ಪಡೆದು ಶಹಬಾದ್‌ನಲ್ಲಿ ಬೃಹತ್ ಫಾರ್ಮ್ ಖರೀದಿಸಿದ್ದರು. ಇಂದುಕುರಿ ಈಗ ಚಂದಾದಾರಿಕೆ ಮಾದರಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಕಂಪನಿಯ 2020-21ರ ಆದಾಯವು 44 ಕೋಟಿ ರೂಪಾಯಿ ಆಗಿದೆ. 2021-22ರಲ್ಲಿ 64.5 ಕೋಟಿ ರೂಪಾಯಿಗೆ (ದಿನಕ್ಕೆ ಸುಮಾರು 17 ಲಕ್ಷ ರೂಪಾಯಿ) ಏರಿಕೆಯಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?



Click it and Unblock the Notifications