ಕೌಶಿಕ್ ಚಟರ್ಜಿ ಅವರು ಸಿಇಒ ಅಲ್ಲ, ಆದರೆ ಟಾಟಾ ಸ್ಟೀಲ್‌ನಲ್ಲಿ ಅಷ್ಟೇ ಪ್ರಮುಖ ವ್ಯಕ್ತಿ. ಅವರು ರತನ್ ಟಾಟಾ ನೇತೃತ್ವದ 1,43,175 ಕೊಟಿ ರೂಪಾಯಿ ಮಾರ್ಕೆಟ್ ಕ್ಯಾಪ್ ಕಂಪನಿಯ ಹಣಕಾಸು ವ್ಯವಹಾರಗಳ ಉಸ್ತುವಾರಿ ವಹಿಸಿಕೊಂಡಿರುವ ಪ್ರಮುಖ ವ್ಯಕ್ತಿಯಾಗಿದ್ದಾರೆ. ಕೌಶಿಕ್ ಅವರು ಟಾಟಾ ಗ್ರೂಪ್‌ನಲ್ಲಿ ಅತಿಹೆಚ್ಚು ವೇತನ ಪಡೆಯುತ್ತಿರುವ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದಾರೆ.
ಈ ವರ್ಷ ಟಾಟಾ ಮೋಟಾರ್ಸ್‌ನ ಪಿಬಿ ಬಜಾಲಿ ಅವರು ಕೌಶಿಕ್ ಅವರನ್ನು ಹಿಂದಿಕ್ಕುವವರೆಗೂ ಗ್ರೂಪ್‌ನ ಅತಿಹೆಚ್ಚು ವೇತನ ಪಡೆಯುತ್ತಿದ್ದ ಸಿಎಫ್‌ಒ ಆಗಿದ್ದರು. ಟಾಟಾ ಸ್ಟೀಲ್ ಕಂಪನಿ ಸಿಎಫ್‌ಒ ಅವರು ಪಡೆಯುತ್ತಿರುವ ವಾರ್ಷಿಕ ಸಂಭಾವನೆಯಲ್ಲಿ ಕಳೆದ ವರ್ಷ ಇಳಿಕೆ ಕಂಡಿದ್ದರೂ ಈಗಲೂ 14.21 ಕೋಟಿ ರೂಪಾಯಿಯನ್ನು ತೆಗೆದುಕೊಳ್ಳುತ್ತಿರುವುದಾಗಿ ಟಾಟಾ ಸ್ಟೀಲ್‌ನ ವಾರ್ಷಿಕ ವರದಿ ಹೇಳುತ್ತಿದೆ. ಅಂದರೆ ಪ್ರತಿ ದಿನ ಅವರ ಸಂಪಾದನೆಯು 3.89 ಲಕ್ಷ ರೂಪಾಯಿ ಆಗಿದೆ.

22ರ ಹಣಕಾಸು ವರ್ಷಕ್ಕೆ ಹೋಲಿಸಿದರೆ, 2023ರಲ್ಲಿ ಅವರು ಪಡೆಯುತ್ತಿರುವ ಸಂಭಾವನೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಅದು 15,17,18,000 ರೂಪಾಯಿ (15.17 ಕೋಟಿ ರೂಪಾಯಿ) ಆಗಿದೆ. ಕೇವಲ ಸಿಇಒ ಟಿವಿ ನರೇಂದ್ರನ್ ಅವರು ಮಾತ್ರ ಟಾಟಾ ಸ್ಟೀಲ್‌ನಲ್ಲಿ 2023ರ ಹಣಕಾಸು ವರ್ಷದಲ್ಲಿ ಚಟರ್ಜಿ ಅವರಿಗಿಂತ ಹೆಚ್ಚಿನ ಅಂದರೆ 18.66 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ.
ಕೌಶಿಕ್ ಚಟರ್ಜಿ ಅವರು ಶಾಂತ ಸ್ವಭಾವದವರು ಆಗಿದ್ದಾರೆ. ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರೂ ಅವರು ಅತ್ಯಂತ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಕೌಶಿಕ್ ಅವರು ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿರುವ ಸೇಂಟ್ ಪ್ಯಾಟ್ರಿಕ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ನಂತರ ಅವರು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗುವ ಮೊದಲು ಕೋಲ್ಕತ್ತಾದಿಂದ ಬಿಕಾಂನಲ್ಲಿ ಪದವಿ ಪಡೆದುಕೊಂಡಿದ್ದರು.
ಟಾಟಾ ಗ್ರೂಪ್‌ಗೆ ಸೇರುವ ಮೊದಲು ಕೌಶಿಕ್ ಅವರು ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಆಡಿಟ್ ಕಂಪನಿಯಾದ ಎಸ್‌ಬಿ ಬಿಲ್ಲಿಮೋರಿಯಾದಲ್ಲಿ ಕೆಲಸ ಮಾಡಿದ್ದಾರೆ. ಕೌಶಿಕ್ ಅವರನ್ನು ಟಾಟಾ ಸನ್ಸ್‌ನ ಮಾಜಿ ಸಿಎಫ್‌ಒ ಇಶಾತ್ ಹುಸೇನ್ ಅವರು ಟಾಟಾ ಸ್ಟೀಲ್‌ಗೆ ಕರೆತಂದಿದ್ದರು. ತಮ್ಮ ಕೇವಲ 36 ನೇ ವಯಸ್ಸಿಗೆ 2006 ರಲ್ಲಿ ಟಾಟಾ ಸ್ಟೀಲ್‌ನಲ್ಲಿ ಹಣಕಾಸು ವಿಪಿ ಆಗಿದ್ದರು. ಬಳಿಕ ಅಂದರೆ 2012 ರಿಂದ ಸಿಎಫ್‌ಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications