Kresha Gupta: 24 ವರ್ಷದಲ್ಲೇ 100 ಕೋಟಿ ರೂ. ಫಂಡ್‌ ಸ್ಥಾಪಿಸಿದ ಕ್ರಿಶಾ ಗುಪ್ತಾ ಯಶಸ್ವಿ ಉದ್ಯಮದ ಹಿಂದಿನ ರಹಸ್ಯ

ಬಿಸಿನೆಸ್‌ ಪರಿಣತರು ಹೇಳುವ ಪ್ರಕಾರ, ವ್ಯಾಪಾರ-ಉದ್ಯಮ ಕ್ಷೇತ್ರವು ಆರ್ಥಿಕ ಫಂಡಿಂಗ್‌ ಪಡೆಯುವುದಕ್ಕೆ ಜಗತ್ತು ಹೆಣಗಾಡುತ್ತಿರಬೇಕಾದರೆ ಭಾರತದ ಯುವ ಚಾರ್ಟೆರ್ಡ್‌ ಅಕೌಂಟೆಂಟ್‌ ಎಂಎಸ್‌ಎಂಇ ವಲಯದಲ್ಲಿ ಭಾರೀ ಮೊತ್ತದ ಫಂಡ್‌ನ್ನು ಪ್ರಾರಂಭಿಸಿದ್ದಾರೆ. ಇದರ ಸ್ಥಾಪಕರ ಹೆಸರು ಕ್ರಿಶಾ ಗುಪ್ತಾ. 24 ವರ್ಷದ ಕ್ರಿಶಾ ಗುಪ್ತಾ ಅವರು ಕಳೆದ ಐದು ವರ್ಷಗಳಿಂದ ಮಾರುಕಟ್ಟೆಯ ಟ್ರೆಂಡ್‌ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಭಾರತದ ಅತ್ಯಂತ ಕಿರಿಯ ಫಂಡ್‌ ಮ್ಯಾನೇಜರ್‌ಗಳಲ್ಲಿ ಒಬ್ಬರಾಗಿರುವ ಕ್ರಿಶಾ ಗುಪ್ತಾ ಅವರು ಯಾರು?

ಕ್ರಿಶಾ ಗುಪ್ತಾ ಯಾರು?: ಕ್ರಿಶಾ ಗುಪ್ತಾ ಅಹಮದಾಬಾದ್‌ನ ನಿವಾಸಿಯಾಗಿದ್ದಾರೆ. ಅವರು 100 ಕೋಟಿ ರೂಪಾಯಿಗಳ ಫಂಡ್‌ನ್ನು ಪ್ರಾರಂಭಿಸಿದ್ದು, ಅದು ಯಾವುದೇ ನಿಗದಿತ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಆದರೂ ಇವರು ಹೆಚ್ಚಿನ ಗಮನವನ್ನು MSME (ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ವಲಯ) ಹಾಗೂ ಸ್ಟಾರ್ಟ್‌ಅಪ್‌ ಗಳ ಮೇಲೆ ಇಟ್ಟಿದ್ದಾರೆ.

 24 ವರ್ಷದಲ್ಲೇ 100 ಕೋಟಿ ರೂ. ಫಂಡ್‌ ಸ್ಥಾಪಿಸಿದ ಕ್ರಿಶಾ ಗುಪ್ತಾ!

ಹೀಗಾಗಿ ಕ್ರಿಶಾ ಅವರು ಸ್ಟಾರ್ಟ್‌ಅಪ್‌ಗಳ ಮೇಲೆ ಕೇಂದ್ರೀಕರಿಸಿದ ಅತ್ಯಂತ ಕಿರಿಯ ಮಹಿಳಾ ಹೂಡಿಕೆದಾರರಾಗಿದ್ದಾರೆ. ಇವರು ಪ್ರಾರಂಭಿಸಿದ ಕಂಪನಿಯ ಹೆಸರು ಚಾಣಕ್ಯ ಆಪರ್ಚುನಿಟೀಸ್ ಫಂಡ್ 1.
ಈ ಕಂಪೆನಿಯು ಸೆಬಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಈ ಫಂಡ್‌ನಡಿ 100 ಕೋಟಿ ರೂ.ವನ್ನು ಸ್ಟಾರ್ಟಪ್‌ ಹಾಗೂ ಎಂಎಸ್‌ಎಂಇಗಳಲ್ಲಿ ಹೂಡಿಕೆ ಮಾಡಲಾಗುತ್ತದೆ, ಅಗತ್ಯವಿದ್ದರೆ ಕಂಪೆನಿಯು ಇನ್ನೂ 100 ಕೋಟಿ ರೂ. ಫಂಡ್‌ ಅನ್ನು ಕಂಪೆನಿ ಪಡೆಯಲಿದೆ.

ಹೊಸದಾಗಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುವವರಿಗೆ ಧನ ಸಹಾಯ ಅಥವಾ ಬೇರೆ ಬೇರೆ ಹಣಕಾಸು ಯೋಜನೆಗಳಿಗೆ ಸಂಬಂಧಿಸಿದಂತೆ ಕಂಪನಿ ಕೆಲಸ ಮಾಡುತ್ತದೆ. ಕ್ರಿಶಾ ಅವರು ಅಹಮದಾಬಾದ್ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವಿ ಶಿಕ್ಷಣವನ್ನು ಮಾಡಿದ್ದಾರೆ. ಕ್ರಿಶಾ, ದೂರಶಿಕ್ಷಣದ ಮೂಲಕ ಸಿಂಬಯೋಸಿಸ್ ಸೆಂಟರ್‌ನಿಂದ ಬ್ಯಾಂಕಿಂಗ್ ಮತ್ತು ಹಣಕಾಸು ಬೆಂಬಲ ಸೇವೆಗಳಿಗಾಗಿ ಡಿಪ್ಲೊಮಾ ಪದವಿ ಕೂಡ ಅಧ್ಯಯನ ಮಾಡಿದ್ದಾರೆ.

ಅವರು 2019 ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆದರು. ಕ್ರಿಶಾ ಗುಪ್ತಾ ಪ್ರಮಾಣೀಕೃತ ಸಂಶೋಧನಾ ವಿಶ್ಲೇಷಕರಾಗಿದ್ದಾರೆ. ಕ್ರಿಶಾ ಅವರು ಓದಿನಲ್ಲಿ ಯಾವಾಗಲೂ ಮುಂದಿದ್ದು ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದಾರೆ. ವಿದ್ಯಾಭ್ಯಾಸದ ಬಳಿಕ ತಮ್ಮ ವೃತ್ತಿ ಜೀವನವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್‌ನೊಂದಿಗೆ ಪ್ರಾರಂಭಿಸಿದ್ದರು.

ಅವರು ಸ್ಥಾಪಿಸಿದ ಈ ಫಂಡ್‌ನ್ನು ಲಾಭದಾಯಕ ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಹೂಡಿಕೆ ಮಾಡಲಿದ್ದು, ಆ ಮೂಲಕ ಸುಮಾರು 25 ಕಂಪನಿಗಳಲ್ಲಿ ಹೂಡಿಕೆ ಮಾಡಲು ಯೋಜಿಸಿದ್ದಾರೆ. ಅಲ್ಲದೆ ಹೆಚ್ಚಿನ ನಿವ್ವಳ ಆಸ್ತಿ ಹೊಂದಿರುವ ವ್ಯಕ್ತಿಗಳಿಂದಲೂ ಹಣವನ್ನು ಸಂಗ್ರಹಿಸಲಾಗುತ್ತದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಕ್ರಿಶಾ ಗುಪ್ತಾ ಅವರು ಕಾರ್ಪೊರೇಟ್‌ ಹಾಗೂ ಸಲಹಾ ಕ್ಷೇತ್ರಗಳಲ್ಲಿ ಫೈನಾನ್ಸ್, ಎಕೌಂಟ್ಸ್, MIS, ತೆರಿಗೆ ಸಲಹೆ ಇತ್ಯಾದಿ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ.

ಅವರು ವೊಡಾಫೋನ್ ಐಡಿಯಾದಲ್ಲಿ ಹೂಡಿಕೆದಾರರ ಸಂಬಂಧಗಳು ಮತ್ತು ಟ್ರೆಸರಿ ತಂಡದ ಭಾಗವಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 5 ವರ್ಷಗಳಿಂದ ಈಕ್ವಿಟಿ ಮಾರುಕಟ್ಟೆಗಳನ್ನು ಟ್ರ್ಯಾಕ್ ಮಾಡುತ್ತಿದ್ದು, ಇದರಲ್ಲಿ ಪರಿಣಿತಿ ಹೊಂದಿ ಈಗ ಹೂಡಿಕೆ ಅವಕಾಶಗಳನ್ನು ಗುರುತಿಸುವಲ್ಲಿ ಮತ್ತು ಮಾರ್ಕೆಟ್‌ ರಿಸ್ಕ್‌ ತಗ್ಗಿಸುವಲ್ಲಿ ನುರಿತ ತಜ್ಞರೆನಿಸಿಕೊಂಡಿದ್ದಾರೆ.

ಇವರ ಲಿಂಕ್ಡ್‌ಇನ್ ಪ್ರೊಫೈಲ್ ನಲ್ಲಿ ಇವರನ್ನು, ಗ್ರೇಟ್ ಲರ್ನರ್, ಪ್ಲ್ಯಾನರ್ ಮತ್ತು ಎಕ್ಸಿಕ್ಯೂಟರ್‌ ಆಗಿ ಉಲ್ಲೇಖಿಸಿದೆ. 100 ಕೋಟಿ ರೂ.ಗಳ ಫಂಡ್‌ ಅನ್ನು ಸ್ಥಾಪಿಸಿರುವುದು ಬಹಳ ವಾಸ್ತವಿಕ ಅನುಭವ ನೀಡಿದೆ ಎಂಬುದಾಗಿ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಅವರು ಹೆಚ್ಚು ಅನುಭವ ಹೊಂದಿರುವ ವ್ಯಕ್ತಿಗಳೊಂದಿಗೆ ವ್ಯವಹರಿಸುತ್ತಿದ್ದಾರೆ. ಆದರೆ ವರ್ಷಗಳ ಅನುಭವ ಕೂಡ ಯಾವಾಗಲೂ ಯಶಸ್ಸನ್ನು ನೀಡುವುದಿಲ್ಲ ಎನ್ನುವುದು ಅವರ ನಂಬಿಕೆಯಾಗಿದೆ.

ಹೊಸ ಐಡಿಯಾಗಳಿಗೆ ತೆರೆದುಕೊಳ್ಳುವುದು ಹಾಗೂ ಹೊಸತನ್ನು ಕಲಿಯುವತ್ತ ಆಸಕ್ತಿ ವಹಿಸುವುದು ಮತ್ತು ಅವಕಾಶಗಳನ್ನು ಹುಡುಕುವುದು ಯಶಸ್ವಿನತ್ತ ದಾರಿ ತೋರಿಸುತ್ತದೆ ಎನ್ನುವುದು ಅವರ ತತ್ತ್ವವಾಗಿದೆ. ಈ ರೀತಿಯ ಆದರ್ಶಗಳಿಗೆ ಬದ್ಧವಾಗಿರುವುದೇ ಚಿಕ್ಕ ವಯಸ್ಸಿನಲ್ಲಿಯೃ ತ್ರೇಶಾ ಅವರ ಯಶಸ್ಸಿನ ಹಿಂದಿನ ರಹಸ್ಯವಾಗಿದೆ.

ಪ್ರತಿ ಟ್ರೆಂಡ್‌ಲೈಲ್‌ಗೆ, 2023 ಮಾರ್ಚ್ 31ರಂತೆ, ಅವರು 3 ಷೇರುಗಳನ್ನು ಹೊಂದಿದ್ದು, ಅದರ ನಿವ್ವಳ ಮೌಲ್ಯ ರೂ 6.9 ಕೋಟಿಯಾಗಿದೆ. ಕ್ರಿಶಾ ಗುಪ್ತಾ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ 100 ಕೋಟಿ ನಿಧಿಯನ್ನು ಪ್ರಾರಂಭಿಸುವುದು ನನಗೆ ಹೊಸ ಅನುಭವ ಎಂದು ಬರೆದುಕೊಂಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+