ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಕುಮಾರ್ ಮಂಗಳಂ ಬಿರ್ಲಾ ನಿವ್ವಳ ಆಸ್ತಿ ಮೌಲ್ಯ 13.2 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಕುಮಾರ್ ಮಂಗಲಂ ಬಿರ್ಲಾ ಅವರು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷರಾಗಿದ್ದು, ಅವರು ವಾಸ್ತವದಲ್ಲಿ ಸಿಎ ಪದವೀಧರರು. ಕೆಎಂ ಬಿರ್ಲಾ ದೇಶದ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಬಿರ್ಲಾ ಕುಟುಂಬದ ಸದಸ್ಯರಾಗಿದ್ದಾರೆ.
2023ರ ಫೋರ್ಬ್ಸ್ ಪಟ್ಟಿ ಪ್ರಕಾರ ಕೆಎಂ ಬಿರ್ಲಾ ಅವರು ಭಾರತದ 9ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಷ್ಟೇ ಅಲ್ಲ, ಅವರು ಅಗ್ರಗಣ್ಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಬಿಐಟಿಎಸ್)ನ ಮುಖ್ಯಸ್ಥರಾಗಿದ್ದಾರೆ.

ಗಾಂಧೀಜಿ ಅವರ ಸ್ವದೇಶಿ ಚಳವಳಿಯ ಪರಿಣಾಮವಾಗಿ ಕೆಎಂ ಬಿರ್ಲಾ ಅವರ ಅಜ್ಜ ಜಿಡಿ ಬಿರ್ಲಾ ಅವರು 1947ರಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್ ಅನ್ನು ಸ್ಥಾಪಿಸಿದ್ದರು. ಈ ಕಂಪೆನಿಯು 50ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುವ ಮೂಲಕ ವಿಶ್ವದಾದ್ಯಂತ ರೇಯಾನ್ ಬಟ್ಟೆಯ ಅತಿದೊಡ್ಡ ರಫ್ತುದಾರ ಕಂಪೆನಿಯಾಗಿ ಅದ್ಭುತ ಬೆಳವಣಿಗೆಯನ್ನು ಸಾಧಿಸಿದೆ. ಈ ನಿಗಮದ ಆದಾಯವು 96,552 ಕೋಟಿ ರೂಪಾಯಿ ಆಗಿದೆ.
ಆದಿತ್ಯ ವಿಕ್ರಮ್ ಹಾಗೂ ರಾಜಶ್ರೀ ಬಿರ್ಲಾ ಅವರ ಮಗನಾಗಿ ಕೆಎಂ ಬಿರ್ಲಾ ಅವರು 1967ರ ಜೂನ್ 14ರಂದು ಹುಟ್ಟಿದ್ದಾರೆ. ಅವರ ತಂದೆಯು 1995ರಲ್ಲಿ ನಿಧನರಾಗಿದ್ದು, ಆ ನಂತರದಲ್ಲಿ ಕೇವಲ 28 ವರ್ಷವಿದ್ದ ಕುಮಾರ ಮಂಗಲಂ ಬಿರ್ಲಾ ಅವರು ಕಂಪೆನಿಯ ವ್ಯವಹಾರದ ಹೊಣೆಯನ್ನು ವಹಿಸಿಕೊಂಡರು. ಕೆಎಂ ಬಿರ್ಲಾ ಅವರು ಕಂಪೆನಿಯ ಜವಾಬ್ದಾರಿಗಳನ್ನು ತೆಗೆದುಕೊಂಡು ಬಳಿಕ ಅದು ಬಹಳ ವೇಗವಾಗಿ ಬೆಳವಣಿಗೆಯನ್ನು ಸಾಧಿಸಿದ್ದು, ಪ್ರಸ್ತುತ ಭಾರತದ ಅತ್ಯುನ್ನತ ಸಂಸ್ಥೆಗಳಲ್ಲಿ ಒಂದಾಗಿದೆ.
ಹಲವು ವರ್ಷಗಳಲ್ಲಿ ಕುಮಾರ್ ಮಂಗಳಂ ಬಿರ್ಲಾ ಅವರು ದೂರ ಸಂಪರ್ಕ, ಸಿಮೆಂಟ್, ಗಣಿಗಾರಿಕೆ, 16ಕ್ಕೂ ಹೆಚ್ಚು ಫ್ಯಾಶನ್ ಕಂಪೆನಿಗಳು ಸೇರಿದಂತೆ ಅನೇಕ ಉದ್ಯಮಗಳನ್ನು ಪ್ರಾರಂಭಿಸಿದ್ದರು. ಕೆಎಂ ಬಿರ್ಲಾ ಅವರ ಅತ್ಯಂತ ಪ್ರಸಿದ್ಧ ಉದ್ಯಮಗಳೆಂದರೆ ಆಲೆನ್ ಸೋಲಿ, ಪೀಟರ್ ಇಂಗ್ಲೆಂಡ್, ಲೂಹಿಸ್ ಫಿಲಿಪ್ ಮತ್ತು ಪ್ಯಾಂಟಲೂನ್ಸ್ ಸೇರಿದಂತೆ ಹಲವಾರು ಬಟ್ಟೆ ಬ್ರಾಂಡ್‌ಗಳಿವೆ.
ಈ ಎಲ್ಲ ದೊಡ್ಡ ಹೆಸರು ಬೇರೆಡೆಯಿಂದ ಬಂದಂತೆ ಕಾಣುತ್ತಿದ್ದರೂ, ಕೆಎಂ ಬಿರ್ಲಾ ಅವರು ಅವುಗಳೆಲ್ಲವನ್ನೂ ಹಂತ-ಹಂತವಾಗಿ ಖರೀದಿಸಿದ್ದಾರೆ ಹಾಗೂ ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರಿಟೇಲ್ ಲಿಮಿಟೆಡ್‌ಗೆ ಮಾಲೀಕರಾಗಿದ್ದಾರೆ. ಕಾರ್ಬನ್ ಬ್ಲ್ಯಾಕ್ ಉತ್ಪಾದನೆ ಹಾಗೂ ವಿತರಣೆಯಲ್ಲಿ ಬಿರ್ಲಾ ಇಡೀ ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದು, ಐದು ಖಂಡಗಳಲ್ಲಿ ಸುಮಾರು 12 ರಾಷ್ಟ್ರಗಳಲ್ಲಿ ಬಿರ್ಲಾ ಕಾರ್ಬನ್ ವ್ಯವಹಾರ ಅಸ್ತಿತ್ವದಲ್ಲಿದೆ. ಭಾರತೀಯ ರೈಲ್ವೆಗೆ ಬೇಕಾದ ಬಹುದೊಡ್ಡ ಪ್ರಮಾಣದ ತಾಮ್ರದ ಬೇಡಿಕೆಯನ್ನು ಬಿರ್ಲಾ ಪೂರೈಸುತ್ತಿದೆ.
47 ಬ್ರಾಂಡ್‌ಗಳು, 27 ಉದ್ಯಮಗಳು, 14 ಕೈಗಾರಿಕೆಗಳನ್ನು ಒಳಗೊಂಡಿರುವ ಆದಿತ್ಯ ಬಿರ್ಲಾ ಗ್ರೂಪ್ ಈಗಲೂ ಕೂಡ ಬಹುದೊಡ್ಡ ಹೊಸ ಮಾದರಿಯ ಉದ್ಯಮ ಸ್ಥಾಪಿಸುವ ಹುಡುಕಾಟದಲ್ಲಿದೆ. ಬಿರ್ಲಾ ಅವರು ಹಿಂಡಾಲ್ಕೊದ ಮಾಲೀಕರು ಕೂಡ ಆಗಿದ್ದಾರೆ. ಇದು ಬಾಕ್ಸೈಟ್ ಗಣಿಗಾರಿಕೆ, ಅಲ್ಯೂಮಿನಾ ಸಂಸ್ಕರಣೆ ಮತ್ತು ಅಲ್ಯೂಮಿನಿಯಂ ಒಳಗೊಂಡ ಇತರೆ ಚಟುವಟಿಕೆಗಳಲ್ಲಿ ತೊಡಗಿವೆ.
ಮಂಗಳಂ ಬಿರ್ಲಾ ಉದ್ಯಮವು ಸುಮಾರು 40,000 ಉದ್ಯೋಗಿಗಳನ್ನು ಹೊಂದಿದ್ದು, 10 ಬೇರೆ ಬೇರೆ ದೇಶಗಳಲ್ಲಿ ತನ್ನ ಉದ್ಯಮ ವ್ಯವಹಾರವನ್ನು ನಡೆಸುತ್ತಿದೆ. 2004ರಲ್ಲಿ ಗ್ರಾಸಿಮಾ ಖರೀದಿಸಿದ ನಂತರ ಅಲ್ಟ್ರಾಟೆಕ್ ಸಿಮೆಂಟ್ ಭಾರತದಲ್ಲಿ ಅತಿದೊಡ್ಡ ಸಿಮೆಂಟ್ ಉತ್ಪಾದನೆಯ ಮತ್ತು ವಿಶ್ವದ ಮೂರನೇ ಅತಿದೊಡ್ಡ ಸಿಮೆಂಟ್ ಬ್ರಾಂಡ್ ಆಗಿ ಬೆಳೆದಿದೆ. ಇದರ ಆದಾಯ 50,000 ಕೋಟಿ ರೂ. ಆಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications