ರಿಲಯನ್ಸ್ ಸಮೂಹದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಕೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಬಾನಿ ಸಂಸ್ಥೆ 15.35 ಟ್ರಿಲಿಯನ್ ಮಾರುಕಟ್ಟೆ ಬಂಡವಾಳ ಹೊಂದಿದ್ದು, ಭಾರತದ ಅತ್ಯಂತ ಬಲಿಷ್ಠ ಹಾಗೂ ದೊಡ್ಡ ಉದ್ಯಮ ಸಂಸ್ಥೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್, ರಿಲಯನ್ಸ್ ರಿಟೇಲ್ಸ್, ರಿಲಯನ್ಸ್ ಜಿಯೋ ಸೇರಿದಂತೆ ಹಲವಾರು ಸಹ ಕಂಪನಿಗಳು ಇದರಡಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ನಡುವೆ, ರಿಲಯನ್ಸ್ ಕಂಪನಿ ಆಡಳಿತ ಮಂಡಳಿಯಲ್ಲಿಯೂ ದೇಶದ ದೊಡ್ಡ ದೊಡ್ಡ ವ್ಯಕ್ತಿಗಳು ಇದ್ದಾರೆ.

ಹಾಗೆಯೇ ರಿಲಯನ್ಸ್ ಇಂಡಸ್ಟ್ರೀಸ್‌ನ ಆಡಳಿತ ಮಂಡಳಿಯಲ್ಲಿ ಕೆವಿ ಕಾಮತ್ ಕೂಡ ಇದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆವಿ ಕಾಮತ್ ಅವರ ಹೆಸರು ಹೆಚ್ಚು ಚಿರಪರಿಚಿತವಾಗಿದೆ. ಕುಂದಾಪುರ ವಾಮನ್ ಕಾಮತ್ ಅವರು ಹಲವು ಬ್ಯಾಂಕ್‌ಗಳಲ್ಲಿಯೂ ಉನ್ನತ ಹುದ್ದೆಯಲ್ಲಿದ್ದು ಛಾಪು ಮೂಡಿಸಿದವರು.
ಕೆವಿ ಕಾಮತ್ ಯಾರು?
ಕೆವಿ ಕಾಮತ್ ಅವರು ಮ್ಯೆಕಾನಿಕಲ್ ಎಂಜಿನಿಯರ್ ಆಗಿದ್ದು, ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಕಾಮತ್ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಕೆವಿ ಕಾಮತ್ ಅವರನ್ನು 2022ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಐದು ವರ್ಷಗಳ ಅವಧಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ. ಮುಕೇಶ್ ಅಂಬಾನಿ ಅವರು ಜಿಯೋ ಫೈನಾನ್ಶಿಯಲ್ ಸರ್ವೀಸಸ್‌ನಲ್ಲಿ ಅಧ್ಯಕ್ಷರ ಹುದ್ದೆಗಾಗಿ ವಿಶ್ವಾಸವನ್ನು ಇರಿಸಿಕೊಂಡಿದ್ದಾರೆ. ಕೆವಿ ಕಾಮತ್ ಅವರು 1971ರಲ್ಲಿ ಐಸಿಐಸಿಐ ಬ್ಯಾಂಕ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.
1988ರಲ್ಲಿ ಅವರು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗೆ ಸೇರಿಕೊಂಡಿದ್ದು, ಹಲವು ವರ್ಷಗಳ ಕಾಲ ಆಗ್ನೇಯ ಏಷ್ಯಾ ಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಅವರು 1996ರಲ್ಲಿ ವಾಪಾಸ್ ಐಸಿಐಸಿಐ ಬ್ಯಾಂಕ್‌ಗೆ ಎಂಡಿ ಹಾಗೂ ಸಿಇಒ ಆಗಿ ನೇಮಕಗೊಂಡಿದ್ದರು. ಏಕೆಂದರೆ, ಆಗ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಐಸಿಐಸಿಐ ಜತೆ ವಿಲೀನಗೊಂಡಿತ್ತು.
2009ರಲ್ಲಿ ಕಾಮತ್ ಅವರು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ ಹುದ್ದೆಯಿಂದ ನಿವೃತ್ತರಾಗಿದ್ದು, ಬಳಿಕ 2015ರವರೆಗೆ ಐಸಿಐಸಿಐ ಬ್ಯಾಂಕ್‌ಗೆ ಅಧ್ಯಕ್ಷರಾಗಿದ್ದರು. ಬಳಿಕ ಅವರು ಇನ್ಫೋಸಿಸ್ ಕಂಪನಿಯಲ್ಲಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ಅವರು ಬ್ರಿಕ್ಸ್ ದೇಶಗಳು ಸ್ಥಾಪಿಸಿದ್ದ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ ಮೊದಲ ಅಧ್ಯಕ್ಷರಾಗಿದ್ದರು.
2020ರಲ್ಲಿ ಅವರು ಆ ಹುದ್ದೆಯಿಂದಲೂ ನಿವೃತ್ತರಾದರು. ಪ್ರಸ್ತುತ ಕಾಮತ್ ಅವರು ಫೈನಾನ್ಶಿಯಲ್ ಇನ್‌ಫ್ರಾಸ್ಟ್ರಕ್ಚರ್ ಅಂಡ್ ಡೆವಲ್‌ಮೆಂಟ್ ಎಂಬ ನ್ಯಾಷನಲ್ ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾರೆ. ಕೆವಿ ಕಾಮತ್ ಅವರಿಗೆ 2008ರಲ್ಲಿ ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.


Click it and Unblock the Notifications