ಸಾಧನೆಗೆ ವಯಸ್ಸಿನ ಹಂಗಿಲ್ಲ ಛಲ, ಕಠಿಣ ಪರಿಶ್ರಮ ಮತ್ತು ಗುರಿ ಇರಬೇಕು.ಇದಕ್ಕೆ ಭಾರತದ ಉದ್ಯಮಿ ಲಚ್ಮನ್ ದಾಸ್ ಮಿತ್ತಲ್ ಅವರಿಗಿಂತ ಉತ್ತಮ ನಿದರ್ಶನ ಬೇರೆ ಸಿಗಲಿಕ್ಕಿಲ್ಲ. ತಮ್ಮ ನಿವೃತ್ತಿಯ ವಯಸ್ಸಿನಲ್ಲಿ ಅಂದರೆ 60ನೇ ವಯಸ್ಸಿನಲ್ಲಿ ಉದ್ಯಮ ಪ್ರಾರಂಭಿಸಿ 20,000 ಕೋಟಿ ರೂಪಾಯಿ ಮೌಲ್ಯದ ಕಂಪನಿಯ ಒಡೆಯನಾದ ಲಚ್ಮನ್ ದಾಸ್ ಮಿತ್ತಲ್‌ರ ಯಶೋಗಾಥೆ ಇಲ್ಲಿದೆ.
92 ವರ್ಷದ ಉದ್ಯಮಿ ಲಚ್ಮನ್ ದಾಸ್ ಮಿತ್ತಲ್ ಸೋನಾಲಿಕಾ ಗ್ರೂಪ್‌ನ ಮಾಲೀಕ ಮತ್ತು ಚೇರ್ಮೆನ್ ಆಗಿದ್ದಾರೆ. ಇದು ಭಾರತದ ಮೂರನೇ ಅತಿದೊಡ್ಡ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾಗಿದೆ. ಮಾತ್ರವಲ್ಲದೆ ಲಚ್ಮನ್ ಮಿತ್ತಲ್ ಹಿರಿಯರ ಪೈಕಿ ಭಾರತದ ಎರಡನೇ ಬಿಲಿಯನೇರ್ ಆಗಿದ್ದಾರೆ. ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಮೌಲ್ಯವು 2.5 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಲಚ್ಮನ್ ಮಿತ್ತಲ್ ಭಾರತದ 82ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಲಕ್ಷ್ಮಣ್ ದಾಸ್ ಮಿತ್ತಲ್, ಆಗಸ್ಟ್ 1931 ರಲ್ಲಿ ಹೋಶಿಯಾರ್‌ಪುರದಲ್ಲಿ ಜನಿಸಿದ್ದು ಭಾರತದಲ್ಲಿ ಲಚ್ಮನ್ ದಾಸ್ ಮಿತ್ತಲ್ ಎಂದೇ ಪ್ರಸಿದ್ದರಾಗಿದ್ದಾರೆ. ಕುತೂಹಲಕಾರಿಯೆಂದರೆ ಲಚ್ಮನ್ ದಾಸ್ ಮಿತ್ತಲ್ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಎಜೆಂಟ್ ಆಗಿದ್ದು, ಅಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ 1990ರಲ್ಲಿ ಅಂದರೆ ತಮ್ಮ 60ನೇ ವಯಸ್ಸಿನಲ್ಲಿ ತಮ್ಮ ವ್ಯಾಪಾರದ ವೃತ್ತಿಜೀವನವನ್ನು ಪ್ರಾರಂಭಿಸಿದರು. 1996 ರಲ್ಲಿ ಟ್ರಾಕ್ಟರ್ ತಯಾರಿಕೆ ರಂಗ ಪ್ರವೇಶಿಸಿ ನಂತರ ಸೋನಾಲಿಕಾ ಟ್ರಾಕ್ಟರ್ಸ್ ಅನ್ನು ಸ್ಥಾಪಿಸಿದರು.
ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸೋನಾಲಿಕಾ ಟ್ರಾಕ್ಟರ್ಸ್ ಬೃಹತ್ ಮ್ಯಾನುಫ್ಯಾಕ್ಚರಿಂಗ್ ಘಟಕವನ್ನು ಹೊಂದಿದೆ. ಸೋನಾಲಿಕಾ ಗ್ರೂಪ್ ಐದು ಘಟಕಗಳನ್ನು ಹೊಂದಿದ್ದು, ಇದು ಐದು ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲದೆ ಕಂಪನಿಯು 120 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಟ್ರಾಕ್ಟರ್‌ಗಳನ್ನು ರಫ್ತು ಮಾಡುತ್ತದೆ. ಲಚ್ಮನ್ ದಾಸ್ ಮಿತ್ತಲ್ ಅವರು ಸರ್ಕಾರಿ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿ ನಂತರ ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಪಡೆದುಕೊಂಡಿದ್ದಾರೆ. ಎಂಎ ಇಂಗ್ಲಿಷ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ.
1955ರಲ್ಲಿ, ಲಚ್ಮನ್ ದಾಸ್ ಮಿತ್ತಲ್ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ತಮ್ಮ ಸಂಬಳದಿಂದ ಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತಿದ್ದರು. ಹೀಗೆ ತಮ್ಮ ಉಳಿತಾಯವನ್ನು ಕೃಷಿ ಯಂತ್ರಗಳ ಸೈಡ್ ಬಿಸಿನೆಸ್ ಆರಂಭಿಸಿದರು. ಆದರೆ ವ್ಯಾಪಾರದಲ್ಲಿ ಸಂಪೂರ್ಣ ಕುಸಿತ ಕಂಡು ದಿವಾಳಿಯಾದರು. ಆದರೆ ಛಲ ಬಿಡದೆ ಪರಿಶ್ರಮದ ಮೂಲಕವೇ ಕೆಲವು ವರ್ಷಗಳ ನಂತರ ಅಂತಿಮವಾಗಿ ಯಶಸ್ಸು ಅವರಿಗೆ ಒಲಿದುಬಂತು.
ಪ್ರಸ್ತುತ ಸೋನಾಲಿಕಾ ಗ್ರೂಪ್‌ನ ನಾಯಕತ್ವವನ್ನು ಲಚ್ಮನ್ ದಾಸ್ ಮಿತ್ತಲ್ ತಮ್ಮ ಮಕ್ಕಳಾದ ಅಮೃತ್ ಸಾಗರ್ ಮಿತ್ತಲ್ ಮತ್ತು ದೀಪಕ್ ಮಿತ್ತಲ್‌ಗೆ ಹಸ್ತಾಂತರಿಸಿದ್ದಾರೆ. ಆದರೆ ಇನ್ನೂ ವೃತ್ತಿಪರವಾಗಿ ಹೆಚ್ಚು ಸಕ್ರಿಯರಾಗಿರುವ ದಾಸ್ ಮಿತ್ತಲ್ ಈಗಲೂ ಪ್ರತಿದಿನ ಕಚೇರಿಗೆ ತೆರಳುತ್ತಾರೆ. ಸೋನಾಲಿಕಾ ಗ್ರೂಪ್ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಕಂಪನಿಯಾಗಿದ್ದು ಪ್ರಮುಖವಾಗಿ ಇದು ಆಟೋಮೊಬೈಲ್ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಇದು ಸೋನಾಲಿಕಾ ಟ್ರ್ಯಾಕ್ಟರ್‌ಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಸೋನಾಲಿಕಾ ಕಂಪನಿ ಟ್ರಾಕ್ಟರ್ ಮಾತ್ರವಲ್ಲದೆ, ಕೃಷಿ ಉಪಕರಣಗಳು ಮತ್ತು ಬಿಡಿಭಾಗಗಳ ಉತ್ಪಾದನೆ ಹಾಗೂ ಇದರ ರಫ್ತುವಿನಲ್ಲಿ ತೊಡಗಿಸಿಕೊಂಡಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications