ಉದ್ಯಮಿ ಹಾಗೂ ಬಿಲಿಯನೇರ್ ಆಗಿರುವ ಲಲಿತ್ ಮೋದಿ ಅವರು ಹಲವು ಉದ್ಯಮವನ್ನು ಕಟ್ಟಿ ಬೆಳೆಸುವಲ್ಲಿ ಮಾತ್ರ ಜನಪ್ರಿಯತೆಯನ್ನು ಪಡೆದುಕೊಂಡಿಲ್ಲ. ಜತೆಗೆ, ದೇಶದೆಲ್ಲೆಡೆ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಸೃಷ್ಟಿಸಿರುವ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಹಿಂದಿನ ಮಾಸ್ಟರ್ ಮೈಂಡ್ ಕೂಡ ಲಲಿತ್ ಮೋದಿ ಆಗಿದ್ದಾರೆ.
ಆದರೆ, ಲಲಿತ್ ಮೋದಿ ಅವರ ಮಗಳು ಅಲಿಯಾ ಮೋದಿ ಅವರು ತಮ್ಮ ತಂದೆಯ ಬಿಸಿನೆಸ್‌ನ್ನು ಮುನ್ನಡೆಸುತ್ತಿದ್ದಾರೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರ ಮಗಳು ಅಲಿಯಾ ಮೋದಿ ಅವರು ಉದ್ಯಮಿಯಾಗಿದ್ದು, ವೃತ್ತಿಯಲ್ಲಿ ಡಿಸೈನರ್ ಆಗಿದ್ದುಕೊಂಡು ಮಿಲಿಯನ್ ಡಾಲರ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಲಲಿತ್ ಮೋದಿ ಹಾಗೂ ದಿ. ಮಿನಲ್ ಮೋದಿಗೆ ಅಲಿಯಾ ಮೋದಿ(30) ಹಾಗೂ ರುಚಿರ್ ಮೋದಿ(29) ಎಂಬ ಇಬ್ಬರು ಮಕ್ಕಳು ಇದ್ದಾರೆ. ಐಪಿಎಲ್ ಸ್ಥಾಪಕ ಲಿಲಿತ್ ಮೋದಿ ಕುಟುಂಬದ ಉತ್ತರಾಧಿಕಾರಿಯಾಗಿ ರುಚಿರ್ ಮೋದಿ ಗುರುತಿಸಿಕೊಂಡಿದ್ದಾರೆ. ಆದರೆ, ಅವರ ಸಹೋದರಿ ಅಲಿಯಾ ಮೋದಿ ಅವರ ವ್ಯಾಪಾರ ಉದ್ಯಮದ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ.
ಅಲಿಯಾ ಮೋದಿ ಅವರು ಬೋಸ್ಟನ್ ಹಾಗೂ ಲಂಡನ್‌ನಲ್ಲಿ ಓದಿದ್ದು, ಲಂಡನ್‌ನಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಮೂಲಕ ಯಶಸ್ವಿ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಅಲಿಯಾ ಅವರು ಲಂಡನ್ ಮೂಲದ ಇಂಟೀರಿಯರ್ ಡಿಸೈನ್ ಕಂಪನಿ ಎಎಂಆರ್‌ಎಂ ಕನ್ಸಲ್ಟೆಂಟ್ಸ್‌ನ ಸ್ಥಾಪಕಿ ಹಾಗೂ ಸಿಇಒ ಆಗಿದ್ದಾರೆ.
ಈ ಕಂಪನಿಯು ಡಿಸೈನ್ ಬಗ್ಗೆ ಸಲಹೆಯನ್ನು ಕೂಡ ನೀಡುತ್ತದೆ. ಈ ಎಎಂಆರ್‌ಎಂ ಕನ್ಸಲ್ಟೆಂಟ್ಸ್ ಕಂಪನಿಯು ಒಂದು ಮಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಮೌಲ್ಯವನ್ನು ಹೊಂದಿದೆ. ಅಂದರೆ 8.3 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಲಿಯಾ ಅವರು ತಮ್ಮ ಕುಟುಂಬದ ಉದ್ಯಮದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಬದಲಿಗೆ ತಮ್ಮದೇ ಸ್ವಂತ ಉದ್ಯಮವನ್ನು ಸ್ಥಾಪಿಸಿ ತಮ್ಮದೇ ವ್ಯಾಪಾರ ಸಾಮ್ರಾಜ್ಯವನ್ನು ಸ್ಥಾಪಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಲಿಯಾ ಮೋದಿ ಅವರು 2022ರಲ್ಲಿ ಇಟಲಿ ಮೂಲದ ಬ್ರೆಟ್ ಕಾರ್ಲಸನ್ ಅವರನ್ನು ಮದುವೆಯಾಗಿದ್ದಾರೆ. ಅಲಿಯಾ ಮೋದಿ ಅವರ ಸಹೋದರ ರುಚಿರ್ ಮೋದಿ ಅವರು ಮೋದಿ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದು, ಗಾಡ್‌ಫ್ರೇ ಫಿಲಿಪ್ಸ್ ಇಂಡಿಯಾ ಲಿ., ಮೋದಿ ಎಂಟರ್‌ಪ್ರೈಸ್, ಕೆಕೆ ಮೋದಿ ಗ್ರೂಪ್ ಗ್ರೂಪ್ ಮೋದಿಕೇರ್ ಮುಂತಾದ ಕಂಪನಿ ಮುನ್ನಡೆಸುತ್ತಿದ್ದಾರೆ.
ಲಲಿತ್ ಮೋದಿ ಅವರ ಸಂಘಟಿತ ಮೋದಿ ಎಂಟರ್‌ಪ್ರೈಸ್ ಮೌಲ್ಯವು 2.8 ಬಿಲಿಯನ್(23,450) ಕೋಟಿ ರೂ. ಆಸ್ತಿ ಮೌಲ್ಯವನ್ನು ಹೊಂದಿದೆ. ಅಲಿಯಾ ಮೋದಿ ಕೂಡ ಈ ಮೋದಿ ಉದ್ಯಮ ಸಾಮ್ರಾಜ್ಯದ ವಾರಸುದಾರರಲ್ಲಿ ಒಬ್ಬರಾಗಿದ್ದು, ಅವರ ತಂದೆಯ ಒಟ್ಟು ನಿವ್ವಳ ಆಸ್ತಿ ಮೌಲ್ಯ 4555 ಕೋಟಿ ರೂಪಾಯಿ ಆಗಿದೆ.
ಇನ್ನೊಂದೆಡೆ, ಅಲಿಯಾ ಮೋದಿ ಅವರ ನಿವ್ವಳ ಆಸ್ತಿ ಮೌಲ್ಯವು 5 ಮಿಲಿಯನ್ ಅಮೆರಿಕನ್ ಡಾಲರ್ (41ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಇವರ ಹೆಚ್ಚಿನ ಆದಾಯವು ಕುಟುಂಬದ ಆಸ್ತಿ ಹಾಗೂ ಸ್ವಂತ ಉದ್ಯಮದಿಂದ ಬರುತ್ತಿದೆ.


Click it and Unblock the Notifications