ಭಾರತದ ಅಂಬಾನಿ ಕುಟುಂಬ ಬಗ್ಗೆ ಗಮನಿಸುವಾಗ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ ಮತ್ತು ತಮ್ಮ ಸಮರ್ಪಣೆಯ ಮೂಲಕ ರಿಲಯನ್ಸ್‌ಗೆ ಅಡಿಪಾಯ ಹಾಕಿದ ದಾರ್ಶನಿಕ ಧೀರೂಭಾಯಿ ಅಂಬಾನಿಯವರ ನಮಗೆ ಥಟ್ಟನೆ ನೆನಪಾಗುತ್ತದೆ.
ಮುಕೇಶ್ ಮತ್ತು ಅನಿಲ್ ಅಂಬಾನಿ ಅವರಿಗೆ ಇಬ್ಬರು ಸಹೋದರಿಯರಿದ್ದು, ಇವರೇ ದೀಪ್ತಿ ಸಲಗಾಂವ್ಕರ್ ಮತ್ತು ನೀನಾ ಕೊಠಾರಿ. ಅಂಬಾನಿ ಸಹೋದರರಿಗೆ ಹೋಲಿಸಿದರೆ ಇವರು ಕಡಿಮೆ ಪ್ರಸಿದ್ದರಾಗಿದ್ದಾರೆ. ಇವತ್ತು ದೀಪ್ತಿ ಮತ್ತು ದತ್ತರಾಜ್ ಸಲಗಾಂವ್ಕರ್ ಅವರ ಪುತ್ರ ವಿಕ್ರಮ್ ಸಲಗಾಂವ್ಕರ್ ಅವರ ಬಗ್ಗೆ ತಿಳಿದುಕೊಳ್ಳೋಣ...

ವಿಕ್ರಮ್ ಸಲಗಾಂವ್ಕರ್ ಮಾಹಿತಿ
ವಿಕ್ರಮ್ ಅವರು ಇಶಾ, ಅನಂತ್ ಮತ್ತು ಆಕಾಶ್ ಅಂಬಾನಿಯವರ ಹಿರಿಯ ಕಸಿನ್ ಆಗಿದ್ದು ಧೀರೂಭಾಯಿ ಅಂಬಾನಿಯವರ ಮೊಮ್ಮಗನಾಗಿದ್ದಾರೆ. ಪ್ರಮುಖವಾಗಿ ಕಬ್ಬಿಣದ ಅದಿರು, ಕಲ್ಲಿದ್ದಲು ಮತ್ತು ವಾಯುಶಕ್ತಿಯಲ್ಲಿ ತೊಡಗಿಸಿಕೊಂಡಿರುವ ವಿ.ಎಂ ಸಲಗಾಂವ್ಕರ್ ಗ್ರೂಪ್ ಆಫ್ ಕಂಪನಿ ಮುನ್ನಡೆಸುತ್ತಿರುವ ಕುಟುಂಬದ ಸದಸ್ಯರಾಗಿದ್ದಾರೆ.
ವಿಕ್ರಮ್ ಅವರು ಪ್ರಸ್ತುತ ವಿಎಂ ಸಲಗಾಂವ್ಕರ್ ಹೊಟೇಲ್ ಮತ್ತು ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಕ್ರಮ್ ಅವರು 2007 ರಲ್ಲಿ ವೃತ್ತಿಪರ ಪ್ರಯಾಣವನ್ನು McKinsey & Company ಮೂಲಕ ಆರಂಭಿಸಿದರು. ಇದಾದ ಬಳಿಕ ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ಗೆ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು. ವಿಕ್ರಮ್ ಸಲಗಾಂವ್ಕರ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಿಂದ ಬಿಬಿಎ ಮಾಡಿದ್ದಾರೆ.
ಸಲಗಾಂವ್ಕರ್ ಕುಟುಂಬಉದ್ಯಮದಲ್ಲಿರುವದತ್ತರಾಜ್ ಸಲಗಾಂವ್ಕರ್ ಅವರ ಪತ್ನಿ ದೀಪ್ತಿ ಅವರು ಗೋವಾದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ 'ಸುನಪರಂತ'ವನ್ನು ಸ್ಥಾಪಿಸಿ ಈ ಸಾಂಸ್ಕೃತಿಕ ಸಂಸ್ಥೆಯ ಉಪಾಧ್ಯಕ್ಷೆ ಮತ್ತು ಸಲಹಾ ಮಂಡಳಿಯ ಸದಸ್ಯೆಯಾಗಿದ್ದಾರೆ.


Click it and Unblock the Notifications