ಭಾರತದ ಹಲವಾರು ಬಿಲಿಯನೇರ್ ಗಳು ಜಗತ್ತಿನಾದ್ಯಂತ ಅನೇಕ ಕಾರ್ಪೊರೇಟ್ ಸಾಮ್ರಾಜ್ಯಗಳ ಉಸ್ತುವಾರಿ ವಹಿಸಿಕೊಂಡಿರುವುದು ಕೇಳಿದ್ದೇವೆ . ಇಂತಹ ಉದ್ಯಮಿಗಳಲ್ಲಿ 1,76,500 ಕೋಟಿ ರೂಪಾಯಿ ಸಂಪತ್ತು ಹೊಂದಿರುವ ಗೋಪಿಚಂದ್ ಪರಮಾನಂದ ಹಿಂದೂಜಾ ಮತ್ತು ಅವರ ಕುಟುಂಬ ಕೂಡಾ ಒಂದು.
ಗೋಪಿಚಂದ್ ಹಿಂದೂಜಾ ಮತ್ತು ಅವರ ಕುಟುಂಬದ ಸಂಪತ್ತು ಶೇಕಡಾ 7 ರಷ್ಟು ಏರಿಕೆ ಕಂಡಿದ್ದು, ಹೀಗಾಗಿ "360 ವನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023" ಪಟ್ಟಿಯಲ್ಲಿ ಎರಡು ಸ್ಥಾನಕ್ಕೆ ಮೇಲಕ್ಕೇರಿ ಐದನೇ ಸ್ಥಾನದಲ್ಲಿದ್ದಾರೆ. ಟಾಟಾ, ಬಿರ್ಲಾ ಮತ್ತು ಅಂಬಾನಿವರಂತೆ ಶ್ರೀಮಂತ ಉದ್ಯಮಿಗಳು ನಡೆಸುತ್ತಿರುವ ಭಾರತದ ಅತ್ಯಂತ ಪ್ರಸಿದ್ಧ ಉದ್ಯಮಗಳ ಸಾಲಿನಲ್ಲಿ ಹಿಂದೂಜಾ ಫ್ಯಾಮಿಲಿಯೂ ನಿಂತಿದೆ.

ಹಿಂದೂಜಾ ಗ್ರೂಪ್ ಮತ್ತು ಹಿಂದೂಜಾ ಆಟೋಮೋಟಿವ್ ಲಿಮಿಟೆಡ್ ಗೆ 1959 ರಲ್ಲಿ ಸಂಸ್ಥೆಗೆ ನೂತನ ಚೇರ್ಮನ್ ರನ್ನು ಸ್ವಾಗತಿಸಿತು. ಸಂಸ್ಥೆಯ ಗ್ರೂಪ್ ಚೇರ್ಮನ್ ಆಗಿದ್ದ ಶ್ರೀಚಂದ್ ಹಿಂದುಜಾ ಮತ್ತು ಕೋ ಚೇರ್ಮೆನ್ ಆಗಿದ್ದ ಅವರ ಸಹೋದರ ಗೋಪಿಚಂದ್ ರಫ್ತು ವ್ಯವಹಾರವನ್ನು ಅಭಿವೃದ್ಧಿಪಡಿಸಲು 1979 ರಲ್ಲಿ ಲಂಡನ್‌ಗೆ ತೆರಳಿದರು.
ಗೋಪಿಚಂದ್ ಅವರ ಪೂರ್ಣ ಹೆಸರು ಗೋಪಿಚಂದ್ ಪರಮಾನಂದ ಹಿಂದೂಜಾ, ಆದರೆ ಬ್ಯುಸಿನೆಸ್ ಕಮ್ಯೂನಿಟಿಯಲ್ಲಿ ಅವರನ್ನು ಪ್ರೀತಿಯಿಂದ "GP" ಎಂದೇ ಕರೆಯಲಾಗುತ್ತದೆ. ಗೋಪಿಚಂದ್ ಅವರು 1959 ರಲ್ಲಿ ಬಾಂಬೆಯ ಜೈ ಹಿಂದ್ ಕಾಲೇಜಿನಿಂದ ಡಿಪ್ಲೋಮಾ ಪಡೆದರು.
ಬಳಿಕ ಕ್ರಮವಾಗಿ ಲಂಡನ್‌ನ ರಿಚ್‌ಮಂಡ್ ಕಾಲೇಜು ಮತ್ತು ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಿಂದ ಕಾನೂನು ಮತ್ತು ಅರ್ಥಶಾಸ್ತ್ರ ಎರಡರಲ್ಲೂ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಗೋಪಿಚಂದ್ ಅವರು ಸುನೀತಾ ಅವರನ್ನು ವಿವಾಹವಾಗಿದ್ದು ಈ ದಂಪತಿಗೆ ರೀಟಾ ಎಂಬ ಹೆಣ್ಣು ಮಗಳು ಹಾಗೂ ಸಂಜಯ್ ಮತ್ತು ಧೀರಜ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಗೋಪಿಚಂದ್ ಅವರಿಗೆ ಪ್ರಕಾಶ್, ಅಶೋಕ್, ಗೋಪಿ ಮತ್ತು ಶ್ರೀಚಂದ್ ಎಂಬ ನಾಲ್ವರು ಸಹೋದರರಿದ್ದಾರೆ. ಮೇ 2023ರಲ್ಲಿ ಅವರ ಹಿರಿಯ ಸಹೋದರ ಶ್ರೀಚಂದ್ ಅವರ ನಿಧನದ ನಂತರ, ಗೋಪಿ ಹಿಂದುಜಾ ಕಂಪನಿಯ ಅಧ್ಯಕ್ಷರಾಗಿದ್ದಾರೆ. ಅವರ ತಂದೆ ಪರಮಾನಂದ್ ದೀಪ್‌ಚಂದ್ ಹಿಂದುಜಾ ಅವರು ಹಿಂದೂಜಾ ಗ್ರೂಪ್ ಅನ್ನು ಸ್ಥಾಪಕರಾಗಿದ್ದಾರೆ.
ಪರಮಾನಂದ್ ಅವರು ಈಗಿನ ಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರದೇಶದಲ್ಲಿ ಸರಕುಗಳನ್ನು ವ್ಯಾಪಾರ ಮಾಡುವ ಮೂಲಕ ಸಂಸ್ಥೆಯನ್ನು ಆರಂಭಿಸಿದರು. 1919 ರಲ್ಲಿ ಇರಾನ್‌ನಲ್ಲಿ ಕಂಪನಿಯ ಮೊದಲ ಅಂತರರಾಷ್ಟ್ರೀಯ ಕಾರ್ಯಾಚರಣೆ ಪ್ರಾರಂಭಿಸಿದರು. ಬಳಿಕ ಅವರ ಪುತ್ರರು 1979 ರಲ್ಲಿ ಲಂಡನ್‌ಗೆ ಸಂಸ್ಥೆಯ ಬೇಸ್ ಅನ್ನು ಸ್ಥಳಾಂತರಿಸಿದರು.
1987 ರಲ್ಲಿ, ಹಿಂದೂಜಾ ಗ್ರೂಪ್ ಅಶೋಕ್ ಲೇಲ್ಯಾಂಡ್ ಖರೀದಿಸಿದ್ದು, ಇದು ಪ್ರಸ್ತುತ ಭಾರತದಲ್ಲಿನ ಅತಿದೊಡ್ಡ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್ ಸಂಸ್ಥೆಯಾಗಿದೆ. ಹಿಂದೂಜಾ ಗ್ರೂಪ್ ಆಟೋಮೋಟಿವ್, ಬ್ಯಾಂಕಿಂಗ್ , ರಿಯಲ್ ಎಸ್ಟೇಟ್ ಸೇರಿದಂತೆ ಹೀಗೆ 11ಹೆಚ್ಚು ಉದ್ಯಮಗಳನ್ನು ನಿಭಾಯಿಸುತ್ತಿದ್ದು, 1980 ರ ದಶಕದಲ್ಲಿ, ಕಂಪನಿಯು ಚೆವ್ರಾನ್‌ನಿಂದ ಗಲ್ಫ್ ಆಯಿಲ್ ಅನ್ನು ಸಹ ಖರೀದಿಸಿತ್ತು. 1990ರ ದಶಕದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಭಾರತದಲ್ಲಿ ಬ್ಯಾಂಕ್ ಗಳನ್ನು ತೆರೆಯಿತು.


Click it and Unblock the Notifications