ಸಿಂಥೆಟಿಕ್ ಫೈಬರ್ ರೋಪ್ ತಯಾರಕ ಟಫ್ರೋಪ್ಸ್ ಸಂಸ್ಥೆ ನಿರ್ದೇಶಕರಾದ ಮಾಧವ್ ಗೋಯೆಲ್ ಅವರು ಸೌತ್ ಮುಂಬೈನಲ್ಲಿ 121 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಸೀ ಫೇಸ್ ಅಪಾರ್ಟ್‌ಮೆಂಟ್ ಅನ್ನು ಖರೀದಿಸಿದ್ದಾರೆ. ಎಕನಾಮಿಕ್ ಟೈಮ್ಸ್ ಪ್ರಕಾರ, ಮಾಧವ್ ಗೋಯೆಲ್ ಖರೀದಿಸಿದ ಅಪಾರ್ಟ್ಮೆಂಟ್ ಲೋಧಾ ಮಲಬಾರ್‌ನಲ್ಲಿದ್ದು ಇದು ಸೌತ್ ಮುಂಬೈನಲ್ಲಿ ಮುಂಬರುವ ಪ್ರೀಮಿಯಂ ವಸತಿ ಯೋಜನೆಗಳಲ್ಲಿ ಒಂದಾಗಿದೆ.
ಟಫ್ರೋಪ್ಸ್ ಕಂಪನಿಯೂ 1992 ರಲ್ಲಿ ಸ್ಥಾಪನೆಯಾಗಿದ್ದು ಇದು ಸಿಂಥೆಟಿಕ್ ಫೈಬರ್ ಹಗ್ಗಗಳು ಮತ್ತು ನೆಟ್ ಗಳನ್ನು ತಯಾರಿಸುತ್ತದೆ. ಮಾಧವ್ ಗೋಯೆಲ್ ಅವರು ಖರೀದಿಸಿದ ಹೊಸ ಅಪಾರ್ಟ್‌ಮೆಂಟ್ ಸೀ ಫೇಸಿಂಗ್ ಆಗಿದ್ದು 9,546 ಚದರ ಅಡಿ ವಿಸ್ತೀರ್ಣ ವಿಶಾಲವಾಗಿದ್ದು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕಟ್ಟಡದ 19 ನೇ ಮಹಡಿಯಲ್ಲಿದೆ. ಇದು ವಾಲ್ಕೇಶ್ವರ ರಸ್ತೆಯಲ್ಲಿದೆ.

ವರದಿಗಳ ಪ್ರಕಾರ ಮಾಧವ್ ಗೋಯೆಲ್ ಅವರು ಪ್ರತಿ ಚದರ ಅಡಿಗೆ 1.26 ಲಕ್ಷ ರೂಪಾಯಿ ನೀಡಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಮಾಧವ್ ಗೋಯೆಲ್ ಸದ್ಯ ಪೆದ್ದಾರ್ ರಸ್ತೆಯಲ್ಲಿರುವ ಸ್ಟರ್ಲಿಂಗ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಹೊಸ ಆಸ್ತಿಯ ವಹಿವಾಟಿಗಾಗಿ ಸುಮಾರು ಗೋಯೆಲ್ 7.26 ಕೋಟಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ.
ಬಜಾಜ್ ಆಟೋದ ಅಧ್ಯಕ್ಷ ನೀರಜ್ ಬಜಾಜ್ ಮತ್ತು ಫ್ಯಾಮಿ ಕೇರ್‌ನ ಸಂಸ್ಥಾಪಕ ಜೆಪಿ ತಪರಿಯಾ ಕೂಡ ಇದೇ ಕಟ್ಟಡದಲ್ಲಿ ತಮ್ಮ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಮಾಧವ್ ಗೋಯೆಲ್ ಅವರು Polysil Drip Irrigation ಮತ್ತು Elixir Industries Private Ltd.ನಲ್ಲಿ ನಿರ್ದೇಶಕರಾಗಿದ್ದು ಇದರ ಜೊತೆಗೆ SMG Designs LLP, Fibretech LLP, ಮತ್ತು Resin Agency LLP ಯಲ್ಲಿ ಪಾಲುದಾರರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನೇಕ ಖ್ಯಾತನಾಮರು ಪ್ರಾಪರ್ಟೀಸ್ ಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ವೆಲ್‌ಸ್ಪನ್ ಗ್ರೂಪ್‌ನ ಅಧ್ಯಕ್ಷ ಬಿಕೆ ಗೋಯೆಂಕಾ, ಕೈಗಾರಿಕೋದ್ಯಮಿ ರಾಧಾಕಿಶನ್ ದಮಾನಿ, ಬಾಲಿವುಡ್ ತಾರೆಯರಾದ ಆಲಿಯಾ ಭಟ್ ಮತ್ತು ಕಾಜೋಲ್ ಕೂಡ ಮುಂಬೈನಲ್ಲಿ ಇತ್ತೀಚೆಗೆ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.
ದೇಶದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್
ಭಾರತದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್ ಬಗ್ಗೆ ನಿಮಗೆ ತಿಳಿದಿದೆಯೇ?. ಗರ್ಭನಿರೋಧಕ ತಯಾರಕ ಸಂಸ್ಥೆಯಾದ ಫ್ಯಾಮಿ ಕೇರ್ ಸಂಸ್ಥಾಪಕ ಜೆ ಪಿ ತಪರಿಯಾ ಭಾರತದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್ ಒಂದನ್ನು ಮಾಡಿಕೊಂಡಿದ್ದಾರೆ. ಜೆ ಪಿ ತಪರಿಯಾ ದಕ್ಷಿಣ ಮುಂಬೈನ ಮಲಬಾರ್ ಬೆಟ್ಟದಲ್ಲಿ (Malabar Hill) ಅಪಾರ್ಟ್‌ಮೆಂಟ್ ಒಂದರಲ್ಲಿ ಮೂರು ಅಂತಸ್ತನ್ನು (triplex) ಖರೀದಿ ಮಾಡಿದ್ದಾರೆ.
ಈ ಐಷಾರಾಮಿ ಅಪಾರ್ಟ್‌ಮೆಂಟ್ ಸಮುದ್ರಮುಖಿಯಾಗಿದ್ದು, ಸುಂದರ ದೃಶ್ಯವನ್ನು ಕಾಣಬಹುದಾಗಿದೆ. ವರದಿ ಪ್ರಕಾರ ಈ ಡೀಲ್ ಲೂದಾ ಗ್ರೂಪ್ ಹಾಗೂ ಫ್ಯಾಮಿ ಕೇರ್ ಸಂಸ್ಥಾಪಕ ಜೆ ಪಿ ತಪರಿಯಾ ನಡುವೆ ಸುಮಾರು 369 ಕೋಟಿ ರೂಪಾಯಿಗೆ ನಡೆದಿದೆ. ವಾಕೇಶ್ವರ ರಸ್ತೆರಲ್ಲಿರುವ ಅತೀ ಹೆಚ್ಚಿನ ಐಷಾರಾಮಿ ವಸತಿ ಅಪಾರ್ಟ್‌ಮೆಂಟ್ ಆದ ಲೂದಾ ಮಲಬಾರ್‌ನ 26, 27 ಹಾಗೂ 28ನೇ ಮಹಡಿಯನ್ನು ಖರೀದಿ ಮಾಡಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
369 ಕೋಟಿ ರೂಪಾಯಿಗೆ ಅಪಾರ್ಟ್‌ಮೆಂಟ್ ಮೂರು ಅಂತಸ್ತಿನ ಖರೀದಿಯು ಈವರೆಗೆ ಅತೀ ದುಬಾರಿ ಡೀಲ್ ಆಗಿದೆ ಎಂದು ಇಕಾನಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಒಟ್ಟು ವಿಸ್ತಾರ 27,160 ಸ್ಕ್ವೇರ್ ಫೀಟ್ ಇದೆ. ಪ್ರತಿ ಸ್ಕ್ವೇರ್‌ಗೆ 1.36 ಲಕ್ಷ ರೂಪಾಯಿ ಆಗಿದ್ದು ಈ ಲೆಕ್ಕಾಚಾರದಲ್ಲಿ ನಡೆದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್ ಇದಾಗಿದೆ ಎಂದು ವರದಿಯಾಗಿದೆ. ಭಾರತದ ಐಷಾರಾಮಿ ಮನೆಯ ಮಾರುಕಟ್ಟೆಯಲ್ಲಿ ನಡೆದ ಇತ್ತೀಚಿನ ಹೊಸ ಡೆವಲಪ್‌ಮೆಂಟ್ ಇದಾಗಿದೆ. ಅತೀ ಬೇಡಿಕೆಯ ನಡುವೆ ಈ ಮನೆಯು ಮಾರಾಟವಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?



Click it and Unblock the Notifications