ಸ್ಫೂರ್ತಿದಾಯಕ ಯುವ ಉದ್ಯಮಿ ಮಹಿಮಾ ದತ್ಲಾ ಅವರು ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಮಹಿಮಾ ದತ್ಲಾ ಹಾಗೂ ಅವರ ಕುಟುಂಬದ ನಿವ್ವಳ ಆಸ್ತಿ ಮೌಲ್ಯವು 8,700 ಕೋಟಿ ರೂಪಾಯಿ ಆಗಿದೆ.
ಮಹಿಮಾ ದತ್ಲಾ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಶ್ರೀಮಂತರ ಪೈಕಿ 10ನೇ ಸ್ಥಾನದಲ್ಲಿದ್ದಾರೆ. 2021ರ ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ದತ್ಲಾ ಅವರು 7,700 ಕೋಟಿ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಆ ಮೂಲಕ ಅದರ ಹಿಂದಿನ ವರ್ಷಕ್ಕಿಂತ 1,000 ಕೋಟಿ ರೂ. ಹೆಚ್ಚು ಆಸ್ತಿಯನ್ನು ಗಳಿಸಿದ್ದಾರೆ.

45 ವರ್ಷ ವಯಸ್ಸಿನ ಮಹಿಮಾ ದತ್ಲಾ ಅವರು 75 ವರ್ಷ ಹಳೆಯ ಹೈದರಾಬಾದ್ ಮೂಲದ ದೈತ್ಯ ಫಾರ್ಮಾ ಕಂಪನಿ ಬಯೋಲಾಜಿಕಲ್ ಇ ಲಿಮಿಟೆಡ್‌ನ ಪ್ರವರ್ತಕರು ಹಾಗೂ ನಿರ್ದೇಶಕಿಯಾಗಿದ್ದಾರೆ. ಮೂರನೇ ತಲೆಮಾರಿನ ಬಿಸಿನೆಸ್ ಲೀಡರ್ ಆಗಿರುವ ಮಹಿಮಾ ಅವರು ವಾಕ್ಸಿನ್ ವ್ಯವಹಾರದಲ್ಲಿ ದೊಡ್ಡ ಜಿಗಿತವನ್ನು ಸಾಧಿಸಿದ್ದಾರೆ.
Corbevax Covid-19 ಲಸಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿ ಡೆಲ್ಟಾದ ಬಯೋಲಜಿಕಲ್ ಇ ಕಂಪನಿಯು ಸಾಕಷ್ಟು ಗಮನಸೆಳೆದಿತ್ತು. ಭಾರತಕ್ಕೆ ಹೆಪರಿನ್ ಔಷಧವನ್ನು ತರುವ ಉದ್ದೇಶದಿಂದ ಫಾರ್ಮಾ ಪ್ರವರ್ತಕರಲ್ಲಿ ಒಬ್ಬರಾಗಿ 1948ರಲ್ಲಿ ಸ್ಥಾಪನೆಯಾದ ಡೆಲ್ಟಾ ಯಾವತ್ತಿಗೂ ಅದನ್ನು ಫ್ಯಾಮಿಲಿ ಬಿಸಿನೆಸ್ ಆಗಿ ಬೆಳೆಸುವ ನಿರೀಕ್ಷೆ ಹೊಂದಿರಲಿಲ್ಲ.
ಲಂಡನ್‌ನ ವೆಬ್‌ಸ್ಟರ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವೀಧರರಾದ ಮಹಿಮಾ ಅವರು 2021ರಲ್ಲಿ ಕಂಪನಿಯನ್ನು ಸೇರಿದ್ದರು. ಮಹಿಮಾ ಅವರು ಎಂದಿಗೂ ಬಯೋಲಾಜಿಕಲ್ ಇ ಕಂಪನಿಯಲ್ಲಿ ಕೆಲಸ ಮಾಡಲು ಯೋಚಿಸಿರಲಿಲ್ಲ. ಜತೆಗೆ ಕುಟುಂಬ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಸುಳಿವು ಕೂಡ ಹೊಂದಿರಲಿಲ್ಲ.
ಆದಾಗ್ಯೂ ಪದವಿಯ ನಂತರ ತಮ್ಮ ರೆಸ್ಯೂಮ್‌ನಲ್ಲಿಯೂ ಅದು ಉತ್ತಮವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ತಮ್ಮ ಕುಟುಂಬ ವ್ಯವಹಾರದಲ್ಲಿ ಸೇರದೆ ದೂರ ಉಳಿದಿದ್ದರು ಎಂಬುದಾಗಿ ಇತ್ತೀಚೆಗೆ ಒಂದು ಕಡೆ ಅವರು ಹೇಳಿಕೊಂಡಿದ್ದರು. ಆದರೆ, 2013ರಲ್ಲಿ ತಮ್ಮ ತಂದೆ ವಿಜಯ್ ಕುಮಾರ್ ದತ್ಲಾ ಅವರು ನಿಧನರಾದಾಗ ಕಂಪನಿಯ ಆಡಳಿತವನ್ನು ವಹಿಸಿಕೊಂಡರು.
ಮಹಿಮಾ ದತ್ಲಾ ಅವರ ನೇತೃತ್ವದಲ್ಲಿ ಬಯೋಲಾಜಿಕಲ್ ಇ ಕಂಪನಿಯು 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಯನ್ನು ಪೂರೈಸುತ್ತಿದೆ. ಆ ಮೂಲಕ ಒಂದು ದಶಕದಲ್ಲಿ 200 ಕೋಟಿ ಡೋಸೇಜ್ ಅನ್ನು ನೀಡಿದೆ. ಕಂಪನಿಯು ದಡಾರ, ಟೆಟನಸ್, ರುಬೆಲ್ಲಾದಂಥಹ ಕಾಯಿಲೆಗಳು ಸೇರಿದಂತೆ ಏಳು ವಿಶ್ವ ಆರೋಗ್ಯ ಸಂಸ್ಥೆಯ ಪ್ರೀ-ಕ್ವಾಲಿಫೈಡ್ ಲಸಿಕೆಯನ್ನು ತಯಾರಿಸುತ್ತಿವೆ.
ಅಷ್ಟೇಅಲ್ಲ, ಇದು ಟೆಟನಸ್ ಲಸಿಕೆ ತಯಾರಿಕೆಯಲ್ಲಿ ಜಾಗತಿಕವಾಗಿ ಅತಿದೊಡ್ಡ ನಿರ್ಮಾಣ ಕಂಪನಿಯಾಗಿದೆ. ದೇಶದ ಆರೋಗ್ಯ ಕ್ಷೇತ್ರದಲ್ಲಿ ಡೆಲ್ಟಾ ಕಂಪನಿಯು ಪ್ರಮುಖ ಧ್ವನಿಯಾಗಿ ಸರ್ಕಾರದ ಜತೆಗೆ ಸಾರ್ವಜನಿಕ ನೀತಿಯಡಿ ಗುರುತಿಸಿಕೊಂಡಿದೆ.
ದೇಶದ ಶ್ರೀಮಂತ ಮಹಿಳೆ
ಫೋರ್ಬ್ಸ್ ಪ್ರಕಾರ, 2023ರಲ್ಲಿ ಭಾರತದಲ್ಲಿ ಬಿಲಿಯನೇರ್ ಆದ ಮೂವರು ಮಹಿಳೆಯರಲ್ಲಿ ರೋಹಿಕಾ ಮಿಸ್ತ್ರಿ ಕೂಡ ಒಬ್ಬರು. ಆಕೆಯ ನಿವ್ವಳ ಆಸ್ತಿ ಮೌಲ್ಯ 7 ಶತಕೋಟಿ ಡಾಲರ್ ಆಗಿದ್ದು, ಅದು 56000 ಕೋಟಿ ರೂ. ಆಗಿದೆ. ಅಷ್ಟೇಅಲ್ಲ ಅವರು ಭಾರತದ 2ನೇ ಅತಿದೊಡ್ಡ ಮಹಿಳೆಯಾಗಿದ್ದಾರೆ.
17 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಸಾವಿತ್ರಿ ಜಿಂದಾಲ್ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ದೇಶದ ಪ್ರಸಿದ್ಧ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜುಂಜುನ್‌ವಾಲಾ ಹಾಗೂ ಸರೋಜ್ ರಾಣಿ ಗುಪ್ತ ಅವರು ಬಿಲಿಯನೇರ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications