"ವಾಷಿಂಗ್ ಪೌಡರ್ ನಿರ್ಮಾ" ಈ ಪದಗಳು ಕೇಳಿದ ತಕ್ಷಣ ಕಳೆದ ನಾಲ್ಕು ದಶಕಗಳಿಂದ ಭಾರತೀಯರ ಕಿವಿಯಲ್ಲಿ ನಿರ್ಮಾ ಬ್ರ್ಯಾಂಡ್‌ನ ಜಾಹೀರಾತಿನ ಹಾಡು ಗುಂಯ್ ಗುಡುತ್ತವೆ. ಅಷ್ಟೊಂದು ಹೆಸರುವಾಗಿದೆ "ನಿರ್ಮಾ ಬ್ರ್ಯಾಂಡ್". ಇಷ್ಟು ಮಾತ್ರವಲ್ಲದೇ ನಿರ್ಮಾ ಭಾರತದಲ್ಲಿ, ಬಟ್ಟೆ ಒಗೆಯುವುದು ಮತ್ತು ಶುಚಿತ್ವಕ್ಕೆ ಸಮಾನಾರ್ಥಕ ಪದವಾಗಿಯೇ ಬೆಳೆದುನಿಟ್ಟಿದೆ. ಆದರೆ ಈ ಪ್ರಸಿದ್ಧ ಕಂಪನಿಯ ಸಂಸ್ಥಾಪಕ ಬಗ್ಗೆ ನಿಮಗೆ ತಿಳಿದಿಯೇ?
"ನಿರ್ಮಾ "ಎಂಬ ಪದ ಜನಮಾನಸದಲ್ಲಿ ನೆಲೆನಿಂತಿದೆ ಎಂದರೆ ಅದರ ಸಂಸ್ಥಾಪಕ ಕರ್ಸನ್‌ಭಾಯ್ ಪಟೇಲ್ ಅವರ ಸಮರ್ಪಣೆ, ನಾವೀನ್ಯತೆ ಮತ್ತು ಕಠಿಣ ಪರಿಶ್ರಮದ ಶಕ್ತಿಗೆ ಸಾಕ್ಷಿಯಾಗಿದೆ. ಇದೇ ಡಿಟರ್ಜೆಂಟ್ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ಕಂಪನಿಯಾದ ನಿರ್ಮಾ ಲಿಮಿಟೆಡ್‌ನ ಸಂಸ್ಥಾಪಕ ಕರ್ಸನ್‌ಭಾಯ್ ಪಟೇಲ್ ಅವರ ಯಶಸ್ಸಿನ ಕಥೆಯಾಗಿದೆ.

ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಸವಾಲೊಡ್ಡುವಲ್ಲಿ ಮತ್ತು ಗ್ರಾಹಕರ ಹೃದಯಗಳನ್ನು ಸೆಳೆಯಲು ಮಾರ್ಕೆಟಿಂಗ್ ತಂತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದ ಗಮನಾರ್ಹ ಸಾಧನೆಗಾಗಿ ನಿರ್ಮಾ ಪ್ರಖ್ಯಾತ ಭಾರತೀಯ ಬ್ರ್ಯಾಂಡ್ ಆಗಿ, ಅಕ್ಷರಶಃ ರಾಜಕುಮಾರಿ ಅಂತೆಯೇ ಎದ್ದು ಕಾಣುತ್ತದೆ.
ಸಂಸ್ಥಾಪಕ ಕರ್ಸನ್‌ಭಾಯ್ ಪಟೇಲ್ ಬಗ್ಗೆ ತಿಳಿಯಿರಿ
ಗುಜರಾತ್‌ನ ರುಪ್ಪೂರ್‌ನಲ್ಲಿ ಸಣ್ಣ ರೈತರೋರ್ವ ಮಗನಾಗಿ 1945 ರಲ್ಲಿ ಜನಿಸಿದ ಕರ್ಸನ್‌ಭಾಯ್ ಪಟೇಲ್ ಬೆಳೆಯುತ್ತಿರುವಾಗ ಹಲವಾರು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರು. ರಸಾಯನಶಾಸ್ತ್ರದಲ್ಲಿ ಶಿಕ್ಷಣವನ್ನು ಮುಗಿಸಿದ ನಂತರ, ಪಟೇಲ್ ಸರ್ಕಾರಿ ಪ್ರಯೋಗಾಲಯದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸವನ್ನು ಪ್ರಾರಂಭಿಸಿದರು. ಅಲ್ಲಿ ಸಿಗುತ್ತಿದ್ದ ಅತ್ಯಲ್ಪ ಸಂಬಳದಲ್ಲೇ ಜೀವನ ಸಾಗಿಸಲು ಕರ್ಸನ್‌ಭಾಯ್ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಮತ್ತು ತಮ್ಮ ಜೀವನವನ್ನು ಇನ್ನಷ್ಟು ಉತ್ತಮವಾಗಿ ಸಾಗಿಸಲು ಅವರು ಬಯಸಿದ್ದರು.
ನಿರ್ಮಾದ ಹುಟ್ಟು ಹೀಗೆ
1969 ರಲ್ಲಿ, ಪಟೇಲ್ ಅವರು ಅನೇಕ ಜನರು ದುಬಾರಿ ಡಿಟರ್ಜೆಂಟ್‌ಗಳು, ಸೋಪುಗಳನ್ನು ಖರೀದಿಸಲು ಹರಸಾಹಸ ಪಡುತ್ತಿರುವುದನ್ನು ಗಮನಿಸಿದರು. ಹೀಗಾಗಿ ಡಿಟರ್ಜೆಂಟ್‌ಗಿದ್ದ ಮಾರುಕಟ್ಟೆಯ ಸಾಮರ್ಥ್ಯ ಅರಿತು ಜನಸಾಮಾನ್ಯರಿಗೆ ಕೈಗೆಟಕುವ ವೆಚ್ಚದ ಡಿಟರ್ಜೆಂಟ್ ಪೌಡರ್ ತಯಾರಿಸಿಲು ನಿರ್ಧರಿಸಿದರು.
ಲ್ಯಾಬ್ ಟೆಕ್ನಿಷಿಯನ್ ಆದ ಅವರು ಇದಕ್ಕಾಗಿ ತಮ್ಮ ಹಿತ್ತಲಿನಲ್ಲಿಯೇ ಪ್ರಯೋಗ ಆರಂಭಿಸಿದರು. ಕೇವಲ 15 ಸಾವಿರ ಸಾಲ ಮಾಡಿ ಸೋಡಾ ಬೂದಿ, ಫಾಸ್ಫೇಟ್ ಮತ್ತು ಇತರ ಕೆಲವು ರಾಸಾಯನಿಕಗಳಂತಹ ಮೂಲ ಪದಾರ್ಥಗಳನ್ನು ಬಳಸಿ ಡಿಟರ್ಜೆಂಟ್ ಪೌಡರ್ ತಯಾರಿಸಿದರು. ನಂತರ ತಮ್ಮ ಸೈಕಲ್‌ನಲ್ಲಿ ಕೆಲಸಕ್ಕೆ ಹೋಗುವ ದಾರಿಯಲ್ಲಿ ತಾವೇ ತಯಾರಿಸಿದ ಡಿಟರ್ಜೆಂಟ್ ಪೌಡರ್ ಅನ್ನು ಮನೆ-ಮನೆಗೆ ಮಾರಾಟ ಮಾಡಲು ಪ್ರಾರಂಭಿಸಿದರು.
ಮಾರುಕಟ್ಟೆಯಲ್ಲಿ ಪ್ರಬಲವಾದ ಕಂಪನಿ ಸರ್ಫ್‌ಗಿಂತ ಇದು ಕಡಿಮೆ ವೆಚ್ಚದಾಯಕವಾಗಿತ್ತು. ಹೀಗಾಗಿ ಜನ ಅದನ್ನು ಇಷ್ಟಪಡಲು ಪ್ರಾರಂಭಿಸಿದರು. ಈ ವೇಳೆ ಪಟೇಲ್ ಅದನ್ನು ಹೆಚ್ಚು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಆರಂಭಿಸಿದರು.
ಅವರು ತಮ್ಮ ಮನೆಯಲ್ಲಿ 10 × 10 ಅಡಿ ಕೋಣೆಯಲ್ಲಿ ಪ್ಯಾಕೇಜಿಂಗ್ ಪ್ರಾರಂಭಿಸಿ ಡಿಟರ್ಜೆಂಟ್ ಪೌಡರ್‌ಗೆ ತಮ್ಮ ಮಗಳು ನಿರುಪಮಾ ಅವರ ಅಡ್ಡಹೆಸರಾದ "ನಿರ್ಮಾ" ಹೆಸರನ್ನೇ ಇಟ್ಟರು. ಪ್ಯಾಕೇಜಿಂಗ್‌ನಲ್ಲಿ ಬಿಳಿ ಉಡುಗೆಯಲ್ಲಿರುವ ಹುಡುಗಿಯನ್ನು ನಾವು ಕಾಣಬಹುದಾಗಿದೆ.
ಆ ಸಮಯದಲ್ಲಿ ಅಗ್ಗದ ಡಿಟರ್ಜೆಂಟ್ ಬ್ರ್ಯಾಂಡ್ ಪ್ರತಿ ಕೆಜಿಗೆ 13 ರೂಪಾಯಿ ಇದ್ದು ಪಟೇಲ್ ಅವರು ಉತ್ತಮ ಗುಣಮಟ್ಟದ ಅವರ ಉತ್ಪನ್ನವನ್ನು ಕೇವಲ ಕೆಜಿಗೆ 3 ರೂಪಾಯಿಗೆ ನೀಡುತ್ತಿದ್ದರು. ಹೀಗಾಗಿ ನಿರ್ಮಾ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಯಿತು.
ಜೊತೆಗೆ ಭಾರತೀಯ ಗೃಹಿಣಿಯರ ಬಟ್ಟೆ ತೊಳೆಯುವ ಅಭ್ಯಾಸವನ್ನು ನಿರ್ಮಾದಿಂದಿಗೆ ಯಶಸ್ವಿಯಾಗಿಯೇ ಬದಲಾಯಿಸಿತು. ಮುಂದೆ ಇದನ್ನೇ ಪೂರ್ಣ ಸಮಯದ ಉದ್ಯಮವಾಗಿ ಮುಂದುವರಿಸಲು ಅವರು ತಮ್ಮ ಸರ್ಕಾರಿ ಕೆಲಸವನ್ನು ತೊರೆದರು. ಪಟೇಲ್ ಅವರ ಪ್ರಾಯೋಗಿಕ ವಿಧಾನ, ಸಮರ್ಪಣೆ ಮತ್ತು ಅವರ ಉತ್ಪನ್ನವನ್ನು ಪ್ರಚಾರ ಮಾಡುವಲ್ಲಿನ ನಿರಂತರತೆಯು ಅವರ ಬ್ಯಾಂಡ್ ಅನ್ನು ರಾಷ್ಟ್ರವ್ಯಾಪಿ ಗ್ರಾಹಕರು ಹುಟ್ಟಿಕೊಂಡರು.
ಬೇಡಿಕೆ ಹೆಚ್ಚಾದಂತೆ, ಪಟೇಲ್ ಉತ್ಪಾದನೆಯನ್ನು ಹೆಚ್ಚಿಸಬೇಕಾಯಿತು. ಅವರು ಸಣ್ಣ ಉತ್ಪಾದನಾ ಘಟಕವನ್ನು ಬಾಡಿಗೆಗೆ ಪಡೆದರು . ಜೊತೆಗೆ ಕೆಲವು ಕೆಲಸಗಾರರನ್ನು ನೇಮಿಸಿಕೊಂಡರು. ಮುಂದೆ ಈ ಬ್ರಾಂಡ್ ಭಾರತದಲ್ಲಿ ಮನೆಮಾತಾಯಿತು. ಇಂದು ಈ ಕಂಪನಿಯಲ್ಲಿ ಸುಮಾರು 18,000 ಉದ್ಯೋಗಿಗಳಿದ್ದು, ಡಿಟರ್ಜೆಂಟ್ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಪಡೆದುಕೊಂಡಿದೆ.
ನಿರ್ಮಾ ಯಶಸ್ಸಿನ ನಂತರ, ಪಟೇಲ್ ಅವರು ಸಾಬೂನುಗಳು, ಕಾಸ್ಮೆಟಿಕ್ಸ್ ಮತ್ತು ಪರ್ಸನಲ್ ಕೇರ್‌ನಂತಹ ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಕಂಪನಿಯು ತನ್ನ ಉತ್ಪಾದನಾ ಘಟಕಗಳು ಮತ್ತು ವಿತರಣಾ ಜಾಲವನ್ನು ವಿಸ್ತರಿಸಿ ಭಾರತದಾದ್ಯಂತ ಬಲವಾಗಿ ಬೇರೂರುವಲ್ಲಿ ಯಶಸ್ವಿಯಾಯಿತು.
ನಿರ್ಮಾ ವಾರ್ಷಿಕ 7,000 ಕೋಟಿ ರೂಪಾಯಿ ವಹಿವಾಟು ದಾಖಲಿಸಿದ್ದು, ನಿರ್ಮಾ ಸಮೂಹದ ವಹಿವಾಟು 23,000 ಕೋಟಿ ರೂಪಾಯಿ ಆಗಿದೆ. ಇನ್ನು ಸಂಸ್ಥಾಪಕ ಕರ್ಸನ್‌ಭಾಯ್ ಪಟೇಲ್ ಅವರ ನಿವ್ವಳ ಮೌಲ್ಯ 23000 ಕೋಟಿ ರೂಪಾಯಿ ಆಗಿದೆ.
ಎಲ್ಲರಿಗೂ ಸ್ಫೂರ್ತಿ
ಈ ಅಪ್ರತಿಮ ಯಶಸ್ಸಿನ ಹಿಂದೆ ಪಟೇಲ್ ಅವರ ಉದ್ಯಮಶೀಲ ಮನಸ್ಸು ಮತ್ತು ಗ್ರಾಮೀಣ ಮತ್ತು ಕೆಳ- ಮಧ್ಯಮ- ವರ್ಗದ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಮಾಡಿದ ನವೀನ ಮಾರ್ಕೆಟಿಂಗ್ ತಂತ್ರಗಳು ಪ್ರಮುಖವಾಗಿದೆ. ಬ್ರ್ಯಾಂಡ್ ಜಾಗೃತಿ ಮೂಡಿಸಲು ಆಕರ್ಷಕ ಜಿಂಗಲ್ಸ್, ದೂರದರ್ಶನ ಜಾಹೀರಾತುಗಳು ಮಾರುಕಟ್ಟೆ ನೆಲೆಯೂರಲು ಬಳಸಿಕೊಂಡರು.
ಇವರಿಗೆ 1990 ರಲ್ಲಿ ಉದ್ಯೋಗ ರತ್ನ ಪ್ರಶಸ್ತಿ, 1998 ರಲ್ಲಿ ಗುಜರಾತ್ ಉದ್ಯಮಿ ಪ್ರಶಸ್ತಿ, 2006 ರಲ್ಲಿ ಎರ್ನ್ಸ್ & ಯಂಗ್ ಲೈಫ್‌ಟೈಮ್ ಅಚೀವೆಮೆಂಟ್ ಪ್ರಶಸ್ತಿ, 2009 ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಶ್ವ ಪ್ರತಿಭಾ ಪ್ರಶಸ್ತಿ, 2009 ರಲ್ಲಿ ಬರೋಡಾ ಸನ್ ಲೈಫ್ಟೈಮ್ ಅಚೀವ್ಮೆಂಟ್ ಪ್ರಶಸ್ತಿ, 2010 ರಲ್ಲಿ ಪದ್ಮಶ್ರೀ ಪ್ರಶಸ್ತಿ, ಕೆಮ್‌ಟೆಕ್ ಅವಾರ್ಡ್ ಆಫ್ ಹಾಲ್ ಆಫ್ ಡಿ ಫೇಮ್ ಮುಂತಾದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಪಟೇಲ್ ಅವರ ಸಾಧನೆಗಾಗಿ ಸಂದಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications