ಒಂದು ವರ್ಷದ ಆರಂಭದಲ್ಲೇ ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಒಂದು ಅದ್ಭುತ ಬೆಳವಣಿಗೆ ಕಂಡಿದ್ದು, ಓಲಾ ಗ್ರೂಪ್ ಅಡಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸಂಸ್ಥೆಯಾದ ಕೃತ್ರಿಮ್ (Krutrim) ಹೊಸ ವರ್ಷದ ಮೊದಲ ಯೂನಿಕಾರ್ನ್ ಸ್ಟಾರ್ಟ್ ಅಪ್‌ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ತನ್ನ ಮೊದಲ ನಿಧಿಯ ಸುತ್ತಿನಲ್ಲಿ $50 ಮಿಲಿಯನ್ (ಅಂದಾಜು 415 ಕೋಟಿ ರೂಪಾಯಿ) ಸಂಗ್ರಹಿಸುವ ಮೂಲಕ $1 ಬಿಲಿಯನ್ ಮೌಲ್ಯವನ್ನು ತಲುಪಿದೆ. ಮ್ಯಾಟ್ರಿಕ್ಸ್ ಪಾರ್ಟ್‌ನರ್ಸ್ ಇಂಡಿಯಾ ಮತ್ತು ಇತರ ಪ್ರಮುಖ ಹೂಡಿಕೆದಾರರಿಂದ ನೇತೃತ್ವದ ನಿಧಿಯು ಕೃತ್ರಿಮ್‌ಗೆ ಮೊದಲ ಭಾರತೀಯ ಕೃತಕ ಬುದ್ಧಿಮತ್ತೆ ಯುನಿಕಾರ್ನ್‌ಗೆ ಒಂದು ಮೈಲಿಗಲ್ಲು ಸೂಚಿಸುತ್ತದೆ.

ಸಂಪೂರ್ಣ ಎಐ ಕಂಪ್ಯೂಟಿಂಗ್ ಸ್ಟಾಕ್ ಅನ್ನು ನಿರ್ಮಿಸಲು ಮೀಸಲಾಗಿರುವ ಕೃತ್ರಿಮ್, ಇತ್ತೀಚೆಗೆ ತನ್ನ ಹಣಕಾಸಿನ ಸುತ್ತಿನ ಯಶಸ್ಸನ್ನು ಘೋಷಿಸಿದ್ದು, ಇದೇ ವೇಳೆ ಭವಿಷ್ಯಕ್ಕಾಗಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ವಿವರಿಸಿದೆ. ಕೃತ್ರಿಮ್ ಗೆ ಸಿಕ್ಕ ಈ ಗಣನೀಯ ಹೂಡಿಕೆಯಿಂದ ಅದರ ಎಐ ಲ್ಯಾಂಡ್‌ಸ್ಕೇಪ್ ಅನ್ನು ಮರುರೂಪಿಸಲು, ಮತ್ತಷ್ಟು ನಾವೀನ್ಯತೆ ಉತ್ತೇಜಿಸಲು ಮತ್ತು ಅದರ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸಲು ಈ ಹೂಡಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈ ಸಾಧನೆಯ ಬಗ್ಗೆ ಪಿಟಿಐ ಜೊತೆ ಮಾತನಾಡಿದ, ಕೃತ್ರಿಮ್‌ನ ಸ್ಥಾಪಕರಾದ ಭವಿಶ್ ಅಗರ್ವಾಲ್, "ಭಾರತವು ತನ್ನದೇ ಆದ ಎಐ ಅನ್ನು ನಿರ್ಮಿಸಬೇಕಾಗಿದ್ದು, ನಾವು ಕೃತ್ರಿಮ್ ಮೂಲಕ ದೇಶದ ಮೊದಲ ಸಂಪೂರ್ಣ ಎಐ ಕಂಪ್ಯೂಟಿಂಗ್ ಸ್ಟಾಕ್ ಅನ್ನು ನಿರ್ಮಿಸಲು ಸಂಪೂರ್ಣವಾಗಿ ಬದ್ಧರಾಗಿದ್ದೇವೆ," ಎಂದಿದ್ದಾರೆ.
"ನಾವು ಮೊದಲ ಸುತ್ತಿನಲ್ಲಿ ಸಂಗ್ರಹಿಸಿದ ಈ ನಿಧಿಯು, ಇದು ಕೃತಕ ಪರಿಹಾರಗಳ ಸಾಮರ್ಥ್ಯವನ್ನು ಬಲಪಡಿಸುವುದಲ್ಲದೆ, ಅರ್ಥಪೂರ್ಣ ಬದಲಾವಣೆಯನ್ನು ತರುವ ನಮ್ಮ ಸಾಮರ್ಥ್ಯದ ಬಗ್ಗೆ ಹೂಡಿಕೆದಾರರಿಗೆ ವಿಶ್ವಾಸವಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು, ಹೂಡಿಕೆದಾರರ ವಿಶ್ವಾಸವನ್ನು ಇದು ಎತ್ತಿ ತೋರಿಸುತ್ತದೆ," ಎಂದು ಹೇಳಿದ್ದಾರೆ.
ಕೃತ್ರಿಮ್ ಇತ್ತೀಚೆಗೆ ತನ್ನ ಬೇಸ್ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್‌ಎಲ್‌ಐ) ಅನ್ನು ಅನಾವರಣಗೊಳಿಸಿದೆ. ಎಲ್ಲಾ ಭಾರತೀಯ ಭಾಷೆಗಳಾದ್ಯಂತ ಎಐ ಅಪ್ಲಿಕೇಶನ್‌ಗಳನ್ನು ಉತ್ಪಾದಿಸಲು ಈ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಪ್ರಮುಖ ಕಂಪ್ಯೂಟರ್ ವಿಜ್ಞಾನಿಗಳ ತಂಡವು ಅಭಿವೃದ್ಧಿಪಡಿಸಿದ ಈ ಮಾದರಿಯು ಕೃತ್ರಿಮ್‌ನ ಸಂವಾದಾತ್ಮಕ ಎಐ ಸಹಾಯಕರನ್ನು ಬಹು ಭಾರತೀಯ ಭಾಷೆಗಳಲ್ಲಿ ಪ್ರವೀಣರನ್ನಾಗಿಸುತ್ತದೆ.
"ಕೃತ್ರಿಮ್" ಎಂದರೆ ಸಂಸ್ಕೃತದಲ್ಲಿ ಕೃತಕ ಅಥವಾ ಆರ್ಟಿಫಿಷಿಯಲ್ ಎಂಬರ್ಥವಿದೆ. ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನೇಕ ಭಾರತೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ ಅವುಗಳಲ್ಲಿ ಸುಲಭವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿದೆ.
ಕೃತ್ರಿಮ್ ಫ್ಯಾಮಿಲಿಯೂ "ಕೃತ್ರಿಮ್ ಬೇಸ್" ಮತ್ತು "ಕೃತ್ರಿಮ್ ಪ್ರೊ" ಅನ್ನು ಒಳಗೊಂಡಿದೆ, ಎರಡನೆಯದು ಬಹುಮಾದರಿಯ ಸಾಮರ್ಥ್ಯಗಳು, ವಿಸ್ತೃತ ಜ್ಞಾನ ಮತ್ತು ಹಲವು ಟೆಕ್ನಿಕಲ್ ಅಡ್ವಾನ್ಸಮೆಂಟ್ಸ್ ಗಳನ್ನು ಒಳಗೊಂಡಿದೆ. ಕಾರ್ಯತಂತ್ರದ ಕ್ರಮದಲ್ಲಿ, ಕೃತ್ರಿಮ್ 2024 ಜನವರಿಯವರೆಗೆ ಆರಂಭಿಕ ಪ್ರವೇಶ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಫೆಬ್ರವರಿ 2024 ರೊಳಗೆ ಎಲ್ಲಾ ಡೆವಲಪರ್‌ಗಳಿಗಾಗಿ ತನ್ನ ಎಪಿಐಗಳನ್ನು ತೆರೆಯಲು ಯೋಜಿಸಿದೆ.
ಒಟ್ತಾರೆಯಾಗಿ ಹೇಳುವುದಾದರೆ, ಕೃತ್ರಿಮ್‌ಗೆ ದೊರಕಿದ ಮೊದಲ ಸುತ್ತಿನ ಈ ಫಂಡಿಗ್'ನಿಂದ ಭಾರತದ ಎಐ ಲ್ಯಾಂಡ್ ಸ್ಕೇಪ್‌ನಲ್ಲಿ ಕೃತ್ರಿಮ್ ಅನ್ನು ಮುಂಚೂಣಿಯಲ್ಲಿ ಇರಿಸುತ್ತದೆ. ಜೊತೆಗೆ ಇದು ದೇಶದ ತಂತ್ರಜ್ಞಾನದ ವಿಕಾಸದಲ್ಲಿ ಪ್ರಮುಖ ಕ್ಷಣವನ್ನು ಗುರುತಿಸುತ್ತದೆ ಮತ್ತು ಜಾಗತಿಕ ಎಐ ಆವಿಷ್ಕಾರಕರಾಗಿ ಅದರ ಸ್ಥಾನಮಾನವನ್ನು ಭದ್ರಗೊಳಿಸುತ್ತದೆ.


Click it and Unblock the Notifications