ದೇಶದಾದ್ಯಂತ ರಾಷ್ಟ್ರೀಯ, ರಾಜ್ಯ ಅಥವಾ ಪ್ರಮುಖ ಹೆದ್ದಾರಿಯಲ್ಲ ನೀವು ಹಾದು ಹೋಗುವಾಗ, ಟೋಲ್ ಪ್ಲಾಜಾಗಳು ಪ್ರಯಾಣಕ್ಕೆ ತಾತ್ಕಲಿಕ ಬ್ರೇಕ್ ಹಾಕುವ ಚೆಕ್‌ಪೋಸ್ಟ್ ಗಳಂತೆ ಕಾಡಬಹುದು. ಇದು ವಾಹನ ಸವಾರರನ್ನು ತಡೆದು ನಿಲ್ಲಿಸಿ ಟೋಲ್ ಪಾವತಿಸದ ಬಳಿಕವೇ ಸಾಗಲು ಅನುಮತಿಸುತ್ತದೆ. ಹೀಗೆ ಟೋಲ್ ಸಂಗ್ರಹಕಸಂಸ್ಥೆಗಳ ನಡುವೆ ಒಂದು ಕಂಪನಿಯು ಭಾರತದ ಟೋಲ್ ಸಂಗ್ರಹ ಸಂಸ್ಥೆಯಲ್ಲಿಯೇ ಅಗ್ರಸ್ಥಾನದಲ್ಲಿದೆ.
ಆ ಸಂಸ್ಥೆಯೇ ಸಹಕಾರ್ ಗ್ಲೋಬಲ್ ಲಿಮಿಟೆಡ್ (ಎಸ್‌ಜಿಎಲ್). ಸಹಕಾರ್ ಗ್ಲೋಬಲ್ ಲಿಮಿಟೆಡ್ ಅನ್ನು 1994 ರಲ್ಲಿ ಉದ್ಯಮಿ ಕಿಶೋರ್ ಅಗರ್ವಾಲ್ ಸ್ಥಾಪಿಸಿದ್ದು, ಇದು ಇಂದು ಟೋಲ್ ಸಂಗ್ರಹದಲ್ಲಿ ಅಗ್ರಗಣ್ಯನಾಗಿ ಹೊರಹೊಮ್ಮುವ ಮೂಲಕ, ಈ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಎಸ್‌ಜಿಎಲ್ ಗಮನಾರ್ಹವಾಗಿ ರಾಷ್ಟ್ರದಾದ್ಯಂತ 13 ರಾಜ್ಯಗಳಲ್ಲಿ ತನ್ನ ಹಿಡಿತ ಹೊಂದಿದೆ. ತನ್ನ ಸಂಸ್ಥೆ ಅಡಿಯಲ್ಲಿ ದೇಶದಾದ್ಯಂತ ಸುಮಾರು 200 ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಿದ್ದು, ಇದು ದೇಶದಲ್ಲಿರುವ ಅರ್ಧಕ್ಕೂ ಅಧಿಕ ರಾಜ್ಯಗಳಲ್ಲಿ ಹರಡಿಕೊಂಡಿದೆ. ಈ ಮೂಲಕ ಎಸ್‌ಜಿಎಲ್ ಕಂಪನಿಯ ಪ್ರಾಬಲ್ಯವನ್ನು ನಾವು ಗುರುತಿಸಬಹುದಾಗಿದೆ.
ಕಂಪನಿಯ ಯಶಸ್ಸು ಹೇಗಿದೆ ಎಂದು ನೋಡುವುದಾದರೆ ಅದರ ಕ್ಲೈಂಟ್ ಪೋರ್ಟ್‌ಫೋಲಿಯೊದಲ್ಲಿ ಹಲವು ಪ್ರಭಾವಶಾಲಿ ಸಂಸ್ಥೆಗಳಿದ್ದು, ಅವುಗಳು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ), ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್‌ಆರ್‌ಡಿಸಿ), ಮತ್ತು ವಿವಿಧ ರಾಜ್ಯಗಳ ಲೋಕೋಪಯೋಗಿ ಇಲಾಖೆಗಳು (ಪಿಡಬ್ಲ್ಯೂಡಿ) ನಂತಹ ಪ್ರಮುಖ ಸಂಸ್ಥೆಗಳನ್ನು ಒಳಗೊಂಡಿದೆ.
ಈ ಸಂಸ್ಥೆಗಳೊಂದಿಗಿನ ಪಾಲುದಾರಿಕೆಯ ಮೂಲಕ ತಡೆರಹಿತ ಸುಗಮ ರಸ್ತೆ ಮತ್ತು ಪ್ರಮುಖ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಎಸ್‌ಜಿಎಲ್‌ನ ನಿರ್ಣಾಯಕ ಪಾತ್ರ ವಹಿಸುವುದನ್ನು ಒತ್ತಿಹೇಳುತ್ತವೆ. ಕಿಶೋರ್ ಅಗರ್ವಾಲ್ ಅವರ ನಾಯಕತ್ವದಲ್ಲಿ ಸಹಕಾರ ಗ್ಲೋಬಲ್ ಲಿಮಿಟೆಡ್ ಸಂಸ್ಥೆ ಗಮನಾರ್ಹ ಬೆಳವಣಿಗೆಯ ಕಂಡಿದ್ದು, 2011-12 ರ ಆರ್ಥಿಕ ವರ್ಷದಲ್ಲಿ ಈ ಸಂಸ್ಥೆಯ ಆದಾಯವನ್ನು 30 ಕೋಟಿ ರೂಪಾಯಿಗಳಿದ್ದು, 2022-23 ರ ಆರ್ಥಿಕ ವರ್ಷದಲ್ಲಿ 2,700 ಕೋಟಿ ರೂಪಾಯಿಗೂ ಹೆಚ್ಚಾಗಿದೆ.
ಸಂಸ್ಥೆಯ ಈ ಆದಾಯದ ಏರಿಕೆಯನ್ನು ಗಮನಿಸಿದರೆ ಟೋಲ್ ಸಂಗ್ರಹ ವಲಯದಲ್ಲಿ ಕಂಪನಿಯ ಕಾರ್ಯತಂತ್ರದ ದೃಷ್ಟಿ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆ ಎಷ್ಟಿದೆ ಎನ್ನುವುದಕ್ಕೆ ಕನ್ನಡಿಯಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಪ್ರಯಾಣದಲ್ಲಿ ಸಂಸ್ಥೆಯೂ 2010 ರ ಆರ್ಥಿಕ ವರ್ಷದಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿ ನಂತರ ಯುಐಡಿಎಸ್‌ಎಸ್ಎಂಟಿ ಉಪಕ್ರಮದ ಅಡಿಯಲ್ಲಿ ಅಹ್ಮದ್‌ನಗರ ಮುನ್ಸಿಪಲ್ ಕಾರ್ಪೊರೇಶನ್ ಇದನ್ನುಮೊದಲು ಗುರುತಿಸಿ ಅಂಗೀಕರಿಸಿತು.
4,000 ಕ್ಕೂ ಹೆಚ್ಚು ಅತ್ಯುತ್ತಮ ಉದ್ಯೋಗಿಗಳ ಕಾರ್ಯಪಡೆಯೊಂದಿಗೆ, ಸಹಕಾರ ಗ್ಲೋಬಲ್ ಲಿಮಿಟೆಡ್ ಭಾರತದಲ್ಲಿ ಇಂದು ಪ್ರಮುಖ ಟೋಲ್ ಸಂಗ್ರಹಕಾರನಾಗಿ ಬೆಳೆದುನಿಂತಿದೆ.


Click it and Unblock the Notifications