ಭಾರತದ ಟಾಪ್ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಕೂಡಾ ಒಬ್ಬರಾಗಿದ್ದಾರೆ. ವಿರಾಟ್ ನಮಗೆ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣುತ್ತಿರುವುದು ನಾವು ನೋಡಬಹುದು. ಇದಕ್ಕಾಗಿ ಈ ಕ್ರಿಕೆಟರ್ ಹಲವಾರು ಒಪ್ಪಂದ, ಡೀಲ್‌ಗಳನ್ನು ಇತರೆ ಸಂಸ್ಥೆಗಳೊಂದಿಗೆ ಮಾಡಿಕೊಂಡಿದ್ದಾರೆ. ಈ ಎಲ್ಲ ಒಪ್ಪಂದಗಳ ಹಿಂದೆ ಒಬ್ಬ ವ್ಯಕ್ತಿ ಎಂದಿಗೂ ವಿರಾಟ್ ಕೊಹ್ಲಿ ಜೊತೆ ನಿಲ್ಲುತ್ತಾರೆ.
ಹೌದು ವಿರಾಟ್ ಕೊಹ್ಲಿಯ ಮಟ್ಟಿ ಬಿಲಿಯನ್ ಡೀಲ್‌ಗಳಲ್ಲಿ ಕೊಹ್ಲಿ ಜೊತೆ ನಿಲ್ಲುವುದು ಬಂಟಿ ಸಜ್ದೇಹ್. ಈ ಬಂಟಿ ಸಜ್ದೇಹ್ ಹಲವಾರು ದೊಡ್ಡ ದೊಡ್ಡ ಡೀಲ್‌ಗಳಲ್ಲಿ ವಿರಾಟ್ ಕೊಹ್ಲಿಗೆ ತರುತ್ತಾರೆ. ಸಜ್ದೇಹ್ ಒಬ್ಬ ಭಾರತೀಯ ಉದ್ಯಮಿಯಾಗಿದ್ದು, ಮನರಂಜನೆ ಮತ್ತು ಕ್ರೀಡಾ ಮಾರ್ಕೆಟಿಂಗ್ ಸಂಸ್ಥೆಯನ್ನು ಹೊಂದಿದ್ದಾರೆ. ಆ ಸಂಸ್ಥೆಯು ಮುಂಬೈನಲ್ಲಿದ್ದು ಅದರ ಹೆಸರು ಕಾರ್ನರ್‌ಸ್ಟೋನ್ ಸ್ಪೋರ್ಟ್ ಆಂಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಆಗಿದೆ. ಬಂಟಿ ಸಜ್ದೇಹ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಭಾರತೀಯ ಉದ್ಯಮಿಯಾಗಿರುವ ಬಂಟಿ ಸಜ್ದೇಹ್, ದೆಹಲಿಯಲ್ಲಿರುವ ಅರ್ಜುನ್ ಸಜ್ದೇಹ್ ಮತ್ತು ಕಿರಣ್ ಸಜ್ದೇಹ್‌ರ ಪುತ್ರರಾಗಿದ್ದಾರೆ. ಬಂಟಿ ಅವರ ಸಹೋದರಿ, ಸೀಮಾ ಸಜ್ದೇಹ್‌ರನ್ನು ಬಾಲಿವುಡ್‌ನ ಬಾಯಿಜಾನ್ ಎಂದೇ ಖ್ಯಾತಿ ಪಡೆದಿರುವ ಸಲ್ಮಾನ್ ಖಾನ್ ಸಹೋದರ ಮತ್ತು ನಟ ಸೊಹೈಲ್ ಖಾನ್‌ರನ್ನು ವಿವಾಹವಾಗಿದ್ದಾರೆ.
ಬಂಟಿ ಸಜ್ದೇಹ್ ಶಿಕ್ಷಣ
ಬಂಟಿ ಸಜ್ದೇಹ್ ಕ್ಯಾಂಪಿಯನ್ ಶಾಲೆಗೆ ಹೋಗಿದ್ದಾರೆ. ಹಾಗೆಯೇ ಎಚ್‌ಆರ್ ಕಾಲೇಜ್ ಆಫ್ ಕಾಮರ್ಸ್ ಆಂಡ್ ಇಕಾನಮಿಕ್ಸ್‌ನಲ್ಲಿ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ. ಪದವಿಯ ನಂತರ, ಬಂಟಿ ಸಜ್ದೇಹ್ ವಿವಿಧ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಅದಾದ ಬಳಿಕ 2005 ರಲ್ಲಿ, ಬಂಟಿ ಸಜ್ದೇಹ್‌ರನ್ನು ಮುಂಬೈನ ಗ್ಲೋಬೋಸ್ಪೋರ್ಟ್ ಬ್ರಾಂಡ್‌ಗಳಿಗೆ ಮನರಂಜನೆ ಮತ್ತು ಕ್ರೀಡಾ ಮಾರ್ಕೆಟಿಂಗ್‌ನ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.
ಬಂಟಿ ಸಜ್ದೇಹ್ ಮಾರುಕಟ್ಟೆ ಕಂಪನಿ
ಮೇ 1, 2008 ರಂದು, ಬಂಟಿ ಸಜ್ದೇಹ್ ಮನರಂಜನಾ ಮತ್ತು ಕ್ರೀಡಾ ಮಾರುಕಟ್ಟೆ ಕಂಪನಿ ಕಾರ್ನರ್‌ಸ್ಟೋನ್ ಸ್ಪೋರ್ಟ್ ಆಂಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರಾರಂಭಿಸಿದರು. 2017 ರಲ್ಲಿ, ಬಂಟಿ ಸಜ್ದೇಹ್‌ರ ಸಂಸ್ಥೆಯು ವಿರಾಟ್ ಕೊಹ್ಲಿಗೆ ಲೈಫ್‌ಸ್ಟೈಲ್ ಬ್ರ್ಯಾಂಡ್ ಪೂಮಾದೊಂದಿಗೆ 100 ಕೋಟಿ ರೂಪಾಯಿಯ ಡೀಲ್ ಅನ್ನು ಮಾಡಿಕೊಟ್ಟಿದೆ.
ಮನರಂಜನಾ ಮತ್ತು ಕ್ರೀಡಾ ಮಾರುಕಟ್ಟೆ ಕಂಪನಿಯನ್ನು ನಡೆಸುವುದರ ಜೊತೆಗೆ ಬಂಟಿ ಸಜ್ದೇಹ್ ಟ್ಯಾಲೆಂಟ್ ಏಜೆನ್ಸಿ ಕೂಡಾ ಆರಂಭಿಸಿದ್ದಾರೆ. ಮನರಂಜನಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಕರಣ್ ಜೋಹರ್ ಜೊತೆಯಾಗಿ ಬಂಟಿ ಸಜ್ದೇಹ್ ಧರ್ಮ ಕಾರ್ನರ್‌ಸ್ಟೋನ್ ಏಜೆನ್ಸಿ (ಡಿಸಿಎ) ಅನ್ನು ನಡೆಸುತ್ತಿದ್ದಾರೆ. ಬಂಟಿಯ ಕಂಪನಿಯು ಈಗ ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಅವರಂತಹ ತಾರೆಯರನ್ನು ನಿಭಾಯಿಸುತ್ತಿದೆ.
ಅನುಷ್ಕಾ, ಕೊಹ್ಲಿ ಬಾಡಿಗಾರ್ಡ್ ಸೋನು
ಭಾರತದ ಮಾಜಿ ಮುಖ್ಯಸ್ಥ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ದೇಶದಲ್ಲೇ ಅತೀ ಜನಪ್ರಿಯವಾದ ಜೋಡಿ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಾಡಿಗಾರ್ಡ್ ಹೆಸರು ಸೋನು. ಹಲವಾರು ವರ್ಷಗಳಿಂದ ಅನುಷ್ಕಾ ಶರ್ಮಾರ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಸೋನು ನಿಜವಾದ ಹೆಸರು ಸೋನು ಅಲ್ಲ. ಬೇರೆಯೇ ಇದೆ. ಸೋನು ನಿಜ ಹೆಸರು ಪ್ರಕಾಶ್ ಸಿಂಗ್ ಆಗಿದೆ.
ಪ್ರಕಾಶ್ ಸಿಂಗ್/ ಸೋನು ವೇತನ ವಾರ್ಷಿಕವಾಗಿ 1.2 ಕೋಟಿ ರೂಪಾಯಿ ಆಗಿದೆ. ಇದು ಹಲವಾರು ಸಂಸ್ಥೆಗಳು ಸಿಇಒಗಳ ಸಿಟಿಸಿಗಿಂತ ಅಧಿಕವಾಗಿದೆ. ಲಭ್ಯವಾದ ಮಾಹಿತಿ ಪ್ರಕಾರ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಬಾಡಿಗಾರ್ಡ್ ಅನ್ನು ಬಾಡಿಗಾರ್ಡ್‌ಗಿಂತ ಅಧಿಕವಾಗಿ ಕಾಣುತ್ತಿದ್ದಾರೆ. ಕುಟುಂಬದ ಓರ್ವ ವ್ಯಕ್ತಿಯಾಗಿದ್ದಾರೆ.


Click it and Unblock the Notifications