ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಭಾರತ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 9,46,991 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ, ದೇಶ ಮಾತ್ರವಲ್ಲದೇ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವರ ಒಡೆಯನದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ 19,97,000 ಕೋಟಿ ರೂಪಾಯಿಗಳ ಮಾರುಕಟ್ಟೆ ಕ್ಯಾಪ್ ಹೊಂದಿರುವ ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ
ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು ಅವರ ಅತಿರಂಜಿತ ಜೀವನಶೈಲಿ, ವ್ಯಾಪಾರ ವ್ಯವಹಾರಗಳು ಮತ್ತು ಪರೋಪಕಾರಕ್ಕೆ ವಿಚಾರವಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ್ಗೆ ಟ್ರೆಂಡಿಂಗ್ ಆಗುತ್ತಿದೆ. ಆದರೆ ಅಂಬಾನಿ ಅವರ ನಂಟು ಹೊಂದಿರುವ ಪ್ರತಿ ಕುಟುಂಬದ ಬಗ್ಗೆ ಅನೇಕರು ಆಸಕ್ತಿ ವಹಿಸಿದ್ದರೂ ಕೂಡಾ, ಮುಕೇಶ್ ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ ಮತ್ತು ಅವರ ಕುಟುಂಬವು ಜನಪ್ರಿಯತೆ ಮತ್ತು ಪಾಪರಾಜಿಗಳಿಂದ ಸಾಧ್ಯವಾದಷ್ಟು ದೂರವಿರಲು ಬಯಸುತ್ತಾರೆ.

ಮುಕೇಶ್ ಅಂಬಾನಿ ಮಕ್ಕಳೆಲ್ಲರೂ ಆಗ್ಗಾಗೆ ಸುದ್ದಿಯಾಗುವಾಗ, ಅವರ ಸೋದರಳಿಯ ಹಾಗೂ ಅನಿಲ್ ಅಂಬಾನಿ ಅವರ ಮಗನ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಅನ್ಮೋಲ್ ಅಂಬಾನಿ ಎಂದೂ ಕರೆಯಲ್ಪಡುವ ಜೈ ಅನ್ಮೋಲ್ ಅಂಬಾನಿ ಅನಿಲ್ ಅಂಬಾನಿಯವರ ಹಿರಿಯ ಮಗನಾಗಿದ್ದು ಅವರು ಒಮ್ಮೆ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಅವರು ಆ ವೇಳೆ 1.83 ಲಕ್ಷ ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದರು.
ಜೈ ಅನ್ಮೋಲ್ ಅಂಬಾನಿ ಅತಿರಂಜಿತ ಜೀವನ ಶೈಲಿಯನ್ನು ಹೊಂದಿದ್ದು, ಲಂಬೋರ್ಗಿನಿ ಗಲ್ಲಾರ್ಡೊ ಮತ್ತು ರೋಲ್ಸ್ ರಾಯ್ಸ್ ಫ್ಯಾಂಟಮ್‌ನಂತಹ ಕೆಲವು ಜನಪ್ರಿಯ ಹಾಗೂ ದುಬಾರಿಯಾದ ಸೂಪರ್ ಕಾರುಗಳನ್ನು ಒಡೆಯರಾಗಿದ್ದಾರೆ. ಮಾತ್ರವಲ್ಲದೆ ಸ್ವಂತ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ಹೊಂದಿದ್ದಾರೆಂದು ವರದಿಯಾಗಿದ್ದು, ಇದನ್ನು ಹೆಚ್ಚಾಗಿ ಅವರು ಬ್ಯುಸಿನೆಸ್ ಟ್ರಿಪ್ ವೇಳೆ ಬಳಸುತ್ತಾರೆ ಎಂದು ವರದಿಯಾಗಿದೆ.
ಅನ್ಮೋಲ್ ಅಂಬಾನಿ ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದ್ದು, ಇವರು ತಮ್ಮ ಎಳೆ ವಯಸ್ಸಿನಲ್ಲೇ ಕುಟುಂಬದ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ತಂದೆ ಸಂಘಟಿತ ಸಂಸ್ಥೆಗಳ ಅನೇಕ ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿದ್ದರೂ, ಅನ್ಮೋಲ್ ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ವಿಶೇಷವಾಗಿ ಸಕ್ರಿಯರಾಗಿದ್ದಾರೆ.
ಅನ್ಮೋಲ್ ಅವರು 2016 ರಲ್ಲಿ ರಿಲಯನ್ಸ್ ಕ್ಯಾಪಿಟಲ್‌ನ ಬೋರ್ಡ್‌ಗೆ ಹೆಚ್ಚುವರಿ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದು, ಆಧುನಿಕ ನಿರ್ವಹಣೆ ಕೌಶಲ್ಯಗಳು ಮತ್ತು ಕುಟುಂಬದ ವ್ಯವಹಾರದಲ್ಲಿನ ತಾಜಾ ದೃಷ್ಟಿಕೋನದ ಕ್ರೆಡಿಟ್ ಇವರಿಗೆ ಸಲ್ಲುತ್ತಾರೆ. ಅನ್ಮೋಲ್ ಅಂಬಾನಿ ಮತ್ತು ಅವರ ಸಹೋದರ ಜೈ ಅನ್ಶುಲ್ ಅಂಬಾನಿ ಅವರನ್ನು ಅಕ್ಟೋಬರ್ 2019 ರಲ್ಲಿ ರಿಲಯನ್ಸ್ ಇನ್ಫ್ರಾ ನಿರ್ದೇಶಕರ ಮಂಡಳಿಗೆ ನೇಮಿಸಲಾಯಿತು. ಆದರೆ ಒಂದು ವರ್ಷದ ನಂತರ ಇವರು ರಾಜೀನಾಮೆ ನೀಡಿದರು.
ಅನ್ಮೋಲ್ ಅಂಬಾನಿ ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಗಳಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದು, ಇದಾದ ನಂತರ ಇವರು ಯುಕೆಯ ಸೆವೆನ್ ಓಕ್ಸ್ ಶಾಲೆಗೆ ಸೇರಿಕೊಂಡರು. ಇದಾದ ಬಳಿಕ ಅನ್ಮೋಲ್ ಉನ್ನತ ಶಿಕ್ಷಣವನ್ನು ಪಡೆಯಲು ನಿರ್ಧರಿಸಿ, ತಮ್ಮ ಬ್ಯಾಚುಲರ್ ಆಫ್ ಸೈನ್ಸ್ (BSc) ನಲ್ಲಿ ವಾರ್ವಿಕ್ ಬಿಸಿನೆಸ್ ಸ್ಕೂಲ್‌ನಲ್ಲಿ ತಮ್ಮ ಪದವಿ ಪಡೆದರು.


Click it and Unblock the Notifications