ಬಹುದೊಡ್ಡ ಕನಸುಗಳನ್ನು ಹೊತ್ತು, ಒಂದು ಕಾಲದಲ್ಲಿ ಹೊಟೇಲ್‌ನಲ್ಲಿ ಮಾಣಿ (ವೈಟರ್) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ವಿಶ್ವದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾರೆ. ಆರಂಭ ಸಣ್ಣದಾಗಿದ್ದರೂ, ಇಂದು ಜೀವನದಲ್ಲಿ ಅಗಾಧವಾದದ್ದನ್ನು ಸಾಧಿಸಿದ್ದಾರೆ.
ಅಮೇರಿಕನ್ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಎನ್‌ವೀಡಿಯಾ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿರುವ ಜೆನ್ಸನ್ ಹುವಾಂಗ್ ಮಲ್ಟಿಬಿಲಿಯನೇರ್ ಆಗಿದ್ದು ಪ್ರಸ್ತುತ $64.2 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 23 ನೇ ಸ್ಥಾನದಲ್ಲಿದ್ದಾರೆ.

ಅವರ ಕಂಪನಿಯೂ ಮಾರುಕಟ್ಟೆ ಬಂಡವಾಳೀಕರಣವು ಇತ್ತೀಚೆಗೆ $ 1.83 ಟ್ರಿಲಿಯನ್ ಅಥವಾ 1,51,00,000 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ತಲುಪಿದೆ. 1963 ರಲ್ಲಿ ತೈವಾನ್‌ನ ತೈನಾನ್‌ನಲ್ಲಿ ಜೆನ್-ಹ್ಸುನ್ ಹುವಾಂಗ್ ಜನಿಸಿದ್ದು, ಅವರಿಗೆ ಐದು ವರ್ಷವಿದ್ದಾಗ ಅವರ ಕುಟುಂಬವು ಥೈಲ್ಯಾಂಡ್‌ಗೆ ಸ್ಥಳಾಂತರಗೊಂಡಿತು.
ಇದಾದ ಬಳಿಕ ಅವರಿಗೆ ಸುಮಾರು ಒಂಬತ್ತು ವರ್ಷದವನಾಗಿದ್ದಾಗ, ಅವರು ಮತ್ತು ಅವರ ಸಹೋದರನನ್ನು ಚಿಕ್ಕಪ್ಪನೊಂದಿಗೆ ವಾಸಿಸಲು ವಾಷಿಂಗ್ಟನ್‌ನ ಟಕೋಮಾಕ್ಕೆ ಕಳುಹಿಸಲಾಯಿತು. ಇದೇ ವೇಳೆ ಅವರು ಒನಿಡಾ, ಕೆಂಟುಕಿಯಲ್ಲಿರುವ ಒನಿಡಾ ಎಲಿಮೆಂಟರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು ನಂತರ ಅವರು ಪೋರ್ಟ್‌ಲ್ಯಾಂಡ್‌ನ ಹೊರಗಡೆ ಇರುವ ಅಲೋಹಾ ಹೈಸ್ಕೂಲ್‌ನಿಂದ ಪದವಿ ಪಡೆದರು.
ಹುವಾಂಗ್ ಅವರು ಒಮ್ಮೆ ಡೆನ್ನಿಯ ರೆಸ್ಟೋರೆಂಟ್‌ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದರು. ಜೆನ್ಸನ್ ಹುವಾಂಗ್ 1984 ರಲ್ಲಿ ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದು, ಬಳಿಕ 1992 ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕ್ರಿಸ್ ಮಲಾಚೌಸ್ಕಿ ಮತ್ತು ಕರ್ಟಿಸ್ ಪ್ರೀಮ್ ಇವರಿಬ್ಬರ ಜೊತೆ ಸೇರಿ 1993 ರಲ್ಲಿ ಎನ್ವಿಡಿಯಾವನ್ನು ಸಹ-ಸ್ಥಾಪಿಸಿದರು. 2007 ರಲ್ಲಿ, ಫೋರ್ಬ್ಸ್ ಅವರನ್ನು ಯುಎಸ್ $24.6 ಮಿಲಿಯನ್ ಸಂಬಳದೊಂದಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 61 ನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಎಂದು ಶ್ರೇಣೀಕರಿಸಿತು.
ಇತ್ತೀಚೆಗೆ, ಅಂದರೆ ಫೆಬ್ರವರಿ 14 ರಂದು ಎನ್‌ವೀಡಿಯಾಯೂ, ಗೂಗಲ್ ಪೋಷಕ ಆಲ್ಫಾಬೆಟ್‌ನ ಷೇರು ಮಾರುಕಟ್ಟೆ ಬಂಡವಾಳೀಕರಣವನ್ನು ಸಂಕ್ಷಿಪ್ತವಾಗಿ ಹಿಂದಿಕ್ಕುವ ಮೂಲಕ ಗಮನಾರ್ಹ ಸಾಧನೆಯನ್ನು ಸಾಧಿಸಿದೆ.
ಕೃತಕ ಬುದ್ಧಿಮತ್ತೆ (AI) ನಲ್ಲಿ ನಾಯಕನಾಗಿ ಗುರುತಿಸಲ್ಪಟ್ಟ ಎನ್‌ವೀಡಿಯಾ, ಮೂರನೇ-ಅತಿದೊಡ್ಡ ಅಮೇರಿಕಾದ ಕಂಪನಿಯ ಶೀರ್ಷಿಕೆಯನ್ನು ತಾನು ವಶಪಡಿಸಿಕೊಂಡಿತು. ಎಐ ಕಂಪ್ಯೂಟಿಂಗ್‌ನಲ್ಲಿ ವ್ಯಾಪಕವಾಗಿ ಬಳಸಲಾಗುವ ಎನ್‌ವಿಡಿಯಾದ ಚಿಪ್‌ಗಳಿಗೆ ದೃಢವಾದ ಬೇಡಿಕೆಯಿಂದ ಈ ಮೌಲ್ಯಮಾಪನದ ಹೆಚ್ಚಳದಿಂದ ಈ ಗಮನಾರ್ಹ ಬೆಳವಣಿಗೆಯಾಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications