ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರಾಣ ಪ್ರತಿಷ್ಠೆ ಮಾಡುವ ಮೂಲಕ ಮಂದಿರದ ಉದ್ಘಾಟನೆಯನ್ನು ಪ್ರಧಾನಿ ಮೋದಿ ಅವರು ಈಗಾಗಲೇ ನೆರವೇರಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಇಡೀ ವಿಶ್ವವೇ ಸಂಭ್ರಮಾಚರಣೆಯಲ್ಲಿದೆ. ಇಡೀ ದೇಶದಲ್ಲೇ ಬಹಳ ವಿಭಿನ್ನವಾಗಿರುವ ರಾಮ ಮಂದಿರದ ನಿರ್ಮಾಣ ಶೈಲಿ ಹಾಗೂ ವಾಸ್ತುಶಿಲ್ಪ ರಚನೆಯು ಅನೇಕರನ್ನು ಮಂತ್ರಮುಗ್ಧರನ್ನಾಗಿಸಿದೆ.
ಇಷ್ಟೊಂದು ಭವ್ಯವಾದ ರಾಮ ಮಂದಿರ ನಿರ್ಮಾಣದ ಹಿಂದೆ ಹಲವು ಪ್ರಮುಖರ ಪರಿಶ್ರಮ ಅಡಗಿದೆ. ಅದರಂತೆ ಈ ರೀತಿಯ ನಿರ್ಮಾಣದಲ್ಲಿ ಹೆಸರು ಪಡೆದ ಕಂಪನಿ ಲಾರ್ಸೆನ್ & ಟೂಬಬ್ರೊ (ಎಲ್&ಟಿ). ಅಯೋಧ್ಯೆಯಲ್ಲಿ ಈ ಭವ್ಯವಾದ ರಾಮ ಮಂದಿರದ ಕಟ್ಟಡವನ್ನು ನಿರ್ಮಿಸುವಲ್ಲಿ ಇಂಜಿನಿಯರಿಂಗ್ ಹಾಗೂ ನಿರ್ಮಾಣ ಕಾರ್ಯವನ್ನು ಮಾಡಿರುವುದು ಎಲ್&ಟಿ ಸಂಸ್ಥೆ. ಈ ಸಂಸ್ಥೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಸಂಸ್ಥೆಯನ್ನು ಮುನ್ನಡೆಸುತ್ತಿರುವವರು...
491000 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಈ ಕಂಪನಿಯನ್ನು ಎಸ್‌ಎನ್ ಸುಬ್ರಹ್ಮಣ್ಯನ್ ಮುನ್ನಡೆಸುತ್ತಿದ್ದಾರೆ. ಸಿವಿಲ್ ಎಂಜಿನಿಯರ್ ಹಾಗೂ ಎಂಬಿಎ ಪದವಿ ಪಡೆದುಕೊಂಡಿರುವ ಸುಬ್ರಹ್ಮಣ್ಯನ್ ಅವರನ್ನು 1984ರಲ್ಲಿ ಎಲ್&ಟಿ ಕಂಪನಿಯು ನೇಮಿಸಿಕೊಂಡಿದೆ. ಅಂದಿನಿಂದ ಅವರು ಸಂಸ್ಥೆಯೊಂದಿಗೆ ಇದ್ದಾರೆ.
ಎಸ್.ಎನ್. ಸುಬ್ರಹ್ಮಣ್ಯನ್ ಅವರು ಎಲ್&ಟಿನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರು 2017ರ ಜುಲೈನಿಂದ ಸಿಇಒ ಹಾಗೂ ಎಂಡಿ ಆಗಿ ನಿರ್ಮಾಣ ಕ್ಷೇತ್ರದ ದೈತ್ಯ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಅಧ್ಯಕ್ಷ ಎಎಂ ನಾಯಕ್ ತಮ್ಮ ಸ್ಥಾನದಿಂದ ಕೆಳಗಿಳಿದ ನಂತರ ಅವರು ಇತ್ತೀಚೆಗೆ ಎಲ್&ಟಿ ಗ್ರೂಪ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸುಬ್ರಹ್ಮಣ್ಯನ್ ಅವರು ಈ ಬಹುಕೋಟಿ ಡಾಲರ್ ಸಮೂಹದ ನಿರ್ದೇಶಕರ ಮಂಡಳಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದು ಎಂಜಿನಿಯರಿಂಗ್, ನಿರ್ಮಾಣ, ಉತ್ಪಾದನೆ, ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಗ್ರೂಪ್ ಆಗಿದೆ. ಸುಬ್ರಹ್ಮಣ್ಯನ್ ಚೆನ್ನೈ ಮೂಲದವರು.
ಅವರು ಪ್ರಾಜೆಕ್ಟ್ ಪ್ಲ್ಯಾನಿಂಗ್ ಎಂಜಿನಿಯರ್ ಆಗಿ 1984ರಲ್ಲಿ ಎಲ್ ಅಂಡ್ ಟಿ ಕಂಪನಿಯೊಂದಿಗೆ ತಮ್ಮ ವೃತ್ತಿ ಬದುಕು ಪ್ರಾರಂಭಿಸಿದ್ದರು. ಅವರು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಎಂಬಿಎನಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ಅಲ್ಲದೆ ಸುಬ್ರಹ್ಮಣ್ಯನ್ ಅವರು ಲಂಡನ್ ಬಿಸಿನೆಸ್ ಸ್ಕೂಲ್‌ನಲ್ಲಿ ಕಾರ್ಯನಿರ್ವಾಹಕ ನಿರ್ವಹಣಾ ಪ್ರೋಗ್ರಾಂ ಕೂಡ ಮಾಡಿದ್ದಾರೆ. ಇವರು ಮೀನಾ ಸುಬ್ರಹ್ಮಣ್ಯನ್ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ.
ಅವರು ಎಲ್‌ಟಿಐಮೈಂಡ್‌ಟ್ರೀ ಹಾಗೂ ಎಲ್ ಅಂಡ್ ಟಿ ಟೆಕ್ನಾಲಜಿ ಸರ್ವೀಸಸ್‌ನ ಬೋರ್ಡ್‌ನಲ್ಲಿ ಉಪಾಧ್ಯಕ್ಷರು ಕೂಡ ಆಗಿದ್ದಾರೆ. ಅಲ್ಲದೆ ಎಲ್ ಅಂಡ್ ಟಿ ಮೆಟ್ರೋ ರೈಲು (ಹೈದರಾಬಾದ್) ಲಿಮಿಟೆಡ್‌ನಲ್ಲಿ ಅಧ್ಯಕ್ಷರು ಹಾಗೂ ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನಲ್ಲಿ ನಿರ್ದೇಶಕರು ಮತ್ತು ಅಧ್ಯಕ್ಷರೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2022ರ ಹಣಕಾಸು ವರ್ಷದಲ್ಲಿ ಸುಬ್ರಹ್ಮಣ್ಯಯನ್ ಅವರು 61.27 ಕೋಟಿ ರೂಪಾಯಿ ವೇತನದ ಪ್ಯಾಕೇಜ್ ಪಡೆದುಕೊಂಡಿದ್ದಾರೆ. ಅಂದರೆ ಪ್ರತಿದಿನ ಅವರ ಸಂಬಳ 16,70,000 ರೂಪಾಯಿ ಆಗಿದೆ. ಇದು ಅವರ ಹಿಂದಿನ ವೇತನಕ್ಕೆ ಹೋಲಿಸಿದರೆ ಶೇಕಡ 115ರಷ್ಟು ಹೆಚ್ಚಳವನ್ನು ಪಡೆದುಕೊಂಡಿದ್ದಾರೆ. ಹಿಂದಿನ ವರ್ಷ ಅವರ ವೇತನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಿತ ಆಗಿತ್ತು.


Click it and Unblock the Notifications