"ಮುಫ್ತಿ" (Mufti Brand) ಇದು ಭಾರತದಲ್ಲಿಇಂದು ಪ್ರಸಿದ್ಧವಾದ ಫ್ಯಾಷನ್ ಬ್ರಾಂಡ್ ಆಗಿ ಬೆಳೆದು ನಿಂತಿದೆ. ಈ ಬ್ರ್ಯಾಂಡ್ ಮಿಡ್ ಪ್ರೀಮಿಯಂ ಮತ್ತು ಪ್ರೀಮಿಯಂ ಬಟ್ಟೆಗಳನ್ನು ಒಳಗೊಂಡಿದ್ದು, ಇದು ಪುರುಷರ ಉಡುಗೆ ತೊಡುಗೆಯ ಮಾರುಕಟ್ಟೆಯಲ್ಲಿ (men's wear market) ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.
2022-23 ರ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯ ಸುಮಾರು 500 ಕೋಟಿ ರೂಪಾಯಿ ದಾಖಲಿಸಿದೆ. ಇಷ್ಟೊಂದು ದೊಡ್ಡದಾಗಿ ಬೆಳೆದ ಕಂಪನಿಯ ಸಂಸ್ಥಾಪಕರು ಈ ಕಂಪನಿಯನ್ನು ಸಾಲ ಪಡೆದ ಹಣದಿಂದ ಸ್ಥಾಪಿಸಿದ್ದರು!

ಹೌದು ಆಶ್ಚರ್ಯವಾದರೂ ಸತ್ಯ, ಮುಫ್ತಿಯ ಓನರ್ ಅಂದು ತಮ್ಮ ಸಂಬಂಧಿಕರೊಬ್ಬರಿಂದ 10,000 ರೂಪಾಯಿ ಸಾಲ ಪಡೆದು ಕಂಪನಿಯನ್ನು ಪ್ರಾರಂಭಿಸಿದ್ದು ಇಂದು ಇದು ಬೃಹತ್ ಸಂಸ್ಥೆಯಾಗಿ ಬೆಳೆದುನಿಂತಿದೆ.
ಮುಫ್ತಿ ಸಂಸ್ಥಾಪಕ ಕಮಲ್ ಖುಷ್ಲಾನಿ ಇಂದು ಯಶಸ್ವಿ ಉದ್ಯಮಿಯಾಗಿದ್ದಾರೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಕಮಲ್ 19 ವರ್ಷದವರಾಗಿದ್ದಾಗ ತಂದೆಯನ್ನು ಕಳೆದುಕೊಂಡರು. ತಮ್ಮ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲೆಂದು ಕ್ಯಾಸೆಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.
ಆದರೆ ಫ್ಯಾಶನ್ ಬ್ರ್ಯಾಂಡ್ ನಿರ್ಮಿಸುವುದು ಅವರ ಕನಸಾಗಿತ್ತು. ಕೊನೆಗೂ ಅವರು ಪಟ್ಟ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ ತಮ್ಮ ಕನಸನ್ನು ನನಸಾಗಿಸಿದರು. ಮುಫ್ತಿ ಈಗ ದೇಶಾದ್ಯಂತ 379 ಎಕ್ಸ್ ಕ್ಲೂಸಿವ್ ಬ್ರ್ಯಾಂಡ್ ಸ್ಟೋರ್‌ಗಳು, 89 ಬೃಹತ್ ಸ್ಟೋರ್‌ಗಳು ಮತ್ತು 1305 ಮಲ್ಟಿ-ಬ್ರಾಂಡ್ ಔಟ್‌ಲೆಟ್‌ಗಳನ್ನು ಹೊಂದಿದೆ.
ಮುಫ್ತಿ ಬ್ರ್ಯಾಂಡ್, ಶರ್ಟ್, ಜೀನ್ಸ್, ಪ್ಯಾಂಟ್, ಟೀ ಶರ್ಟ್, ಶಾರ್ಟ್ಸ್, ಬ್ಲೇಜರ್‌ಗಳು ಮತ್ತು ವಿಂಟರ್ ವೇರ್/ ಔಟರ್‌ವೇರ್ ಹಾಗೂ ಪಾದರಕ್ಷೆ ಸಹಿತ ಹಲವು ಉತ್ಪನ್ನಗಳಿವೆ. 2022-23ನೇ ಹಣಕಾಸು ವರ್ಷದಲ್ಲಿ ಮುಫ್ತಿ ಕಂಪನಿಯ ಆದಾಯ 498.18 ಕೋಟಿ ರೂಪಾಯಿ ಆಗಿದ್ದು ಹಿಂದಿನ ಹಣಕಾಸು ವರ್ಷದಲ್ಲಿ 341.17 ಕೋಟಿ ರೂಪಾಯಿ ಆಗಿತ್ತು.
10,000 ರೂಪಾಯಿ ಸಾಲ ಪಡೆದಿದ್ದ ಕಮಲ್
ಕಮಲ್ ಖುಷ್ಲಾನಿ ಅವರು 1992ರಲ್ಲಿ ಪುರುಷರ ಶರ್ಟ್‌ಗಳನ್ನು ತಯಾರಿಸಲೆಂದು Mr & Mr ಹೆಸರಿನ ಮ್ಯಾನುಫ್ಯಾಕ್ಚರಿಂಗ್ ಕಂಪನಿಯನ್ನು ತೆರೆದರು. ಕನಸಿನ ಕಂಪನಿಯನ್ನು ಸ್ಥಾಪಿಸಲು ಕಮಲ್ ಅವರು ತಮ್ಮ ಚಿಕ್ಕಮ್ಮನಿಂದ 10,000 ರೂಪಾಯಿ ಸಾಲ ಪಡೆದಿದ್ದರು.
ಅವರು ವರ್ಕ್‌ಶಾಪ್‌ನಲ್ಲಿ ಮಾಡಿದ ಶರ್ಟ್‌ಗಳನ್ನು ಪಡೆಯುತ್ತಿದ್ದರು. ಜೊತೆಗೆ ಕಚೇರಿಗಾಗಿ ಬಾಡಿಗೆ ಕಟ್ಟಲು ಕಮಲ್ ಬಳಿ ಹಣವಿಲ್ಲದ ಕಾರಣ ತನ್ನ ಮನೆಯನ್ನೇ ಕಚೇರಿ ಹಾಗೂ ಗೋದಾಮಿನನ್ನಾಗಿ ಮಾಡಿಕೊಂಡಿದ್ದರು.
1998 ರಲ್ಲಿ ಕಮಲ್ ಖುಷ್ಲಾನಿ ಮುಫ್ತಿ ಎಂಬ ಫ್ಯಾಶನ್ ಬ್ರಾಂಡ್ ಪ್ರಾರಂಭಿಸಿದರು. ಈ ಸಮಯದಲ್ಲಿ ಕಮಲ್ ಅವರ ಬಳಿ ಒಂದು ಬೈಕು ಇತ್ತು, ಅದರಲ್ಲೇ ಅವರು ಹಲವಾರು ಕೆ.ಜಿ ಬಟ್ಟೆಗಳನ್ನು ತುಂಬಿಕೊಂಡು ವರ್ಕ್‌ಶಾಪ್‌ಗೆ ತೆಗೆದುಕೊಂಡು ಹೋಗುತ್ತಿದ್ದರು.
ತಯಾರಾದ ಉಡುಪುಗಳನ್ನು ಅದೇ ಬೈಕ್ ನಲ್ಲಿ ತುಂಬಿಕೊಂಡು ಮಾರಾಟ ಮಾಡಲು ಹೋಗುತ್ತಿದ್ದರು. 2000ರ ವೇಳೆಗೆ ಮುಫ್ತಿ ಜೀನ್ಸ್ ಇಷ್ಟಪಡಲಾರಂಭಿಸಿದರು. ಮುಫ್ತಿ ಭಾರತದಲ್ಲಿ ಸ್ಟ್ರೆಚ್ಡ್ ಜೀನ್ಸ್ ತಯಾರಿಸಲು ಪ್ರಾರಂಭಿಸಿದ ಮೊದಲ ಬ್ರಾಂಡ್ ಆಗಿದ್ದ, ಇದು ಸ್ಟ್ರೆಚ್ಡ್ ಜೀನ್ಸ್ ನಿಂದಲೇ ಭಾರತದಲ್ಲಿ ಜನಪ್ರಿಯವಾಯಿತು.
ಮುಫ್ತಿ ಈಗ ಮುಕೇಶ್ ಅಂಬಾನಿಯವರ ರಿಲಯನ್ಸ್ ರೀಟೇಲ್ ಮತ್ತು ರತನ್ ಟಾಟಾರ ವೆಸ್ಟ್‌ಸೈಡ್ ಸೇರಿದಂತೆ ಹಲವಾರು ಬ್ರಾಂಡ್‌ಗಳೊಂದಿಗೆ ಸ್ಪರ್ಧೆಗೆ ನಿಂತಿದೆ. ಇದು ಇತರ ವಸ್ತುಗಳ ಜೊತೆಗೆ ಬಟ್ಟೆ ಮತ್ತು ಫೂಟ್ ವೇರ್‌ಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿದೆ.


Click it and Unblock the Notifications