ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸ್ಥಾಪಕ, ಬಿಲಿಯನೇರ್ ಉದ್ಯಮಿ ನಾರಾಯಣ ಮೂರ್ತಿ ಅವರ ಹೇಳಿಕೆ ದೇಶಾದ್ಯಂತ ಚರ್ಚೆಯಲ್ಲಿದೆ. ಅವರ ಹೇಳಿಕೆಯ ಬಗ್ಗೆ ಒಬ್ಬೊಬ್ಬರು ಭಿನ್ನ- ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.
ನಾರಾಯಣ ಮೂರ್ತಿ ಅವರು ದೇಶದ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಪ್ರಸ್ತುತ 595000 ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಕ್ಯಾಪ್ ಹೊಂದಿ "ಇನ್ಫೋಸಿಸ್ " ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಎನ್ನುವುದು ಗಮನಾರ್ಹ.

ನಾರಾಯಣ ಮೂರ್ತಿ ಅವರು ಇನ್ಫೋಸಿಸ್ ಅನ್ನು ಪ್ರಾರಂಭಿಸಲು ಹೊರಟಾಗ ಕೆಲವು ಅತ್ಯುತ್ತಮ ಮನಸ್ಸುಗಳುಳ್ಳ ವ್ಯಕ್ತಿಗಳು ಬೆಂಬಲವನ್ನು ನೀಡಿದ್ದು, ಅವರಲ್ಲಿ ಶಿಬು ಎಂದು ಕರೆಯಲ್ಪಡುವ ಎಸ್‌ಡಿ ಶಿಬುಲಾಲ್ ಕೂಡಾ ಒಬ್ಬರಾಗಿದ್ದಾರೆ.
ಶಿಬುಲಾಲ್ ಅವರು ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಇವರು 1955 ರಲ್ಲಿ ಕೇರಳದ ಅಲಪ್ಪುಳದಲ್ಲಿ ಜನಿಸಿದ ಇವರ ತಂದೆ ಆಯುರ್ವೇದ ವೈದ್ಯರಾಗಿದ್ದು, ತಾಯಿ ಸರ್ಕಾರಿ ಉದ್ಯೋಗಿಯಾಗಿದ್ದರು. ಶಿಬುಲಾಲ್ ಅವರು ಯುಎಸ್‌ನ ಬೋಸ್ಟನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೇರಳ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಶಿಬುಲಾಲ್ 1979 ರಲ್ಲಿ ಪಟ್ನಿ ಕಂಪ್ಯೂಟರ್ ಸಿಸ್ಟಮ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಇಲ್ಲಿಯೇ ಅವರು ನಾರಾಯಣ ಮೂರ್ತಿ ಮತ್ತು ಇನ್ಫೋಸಿಸ್‌ನ ಸಹ ಸಂಸ್ಥಾಪಕರಾಗಲಿರುವ ಇತರ ಸ್ನೇಹಿತರನ್ನು ಭೇಟಿಯಾದರು.
ಇಂದು ಭಾರತದ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಅನ್ನು ನಿರ್ಮಿಸಲು ಅಲ್ಲಿ ಒಂದು ದಶಕಗಳ ಕಾಲ ಶ್ರಮಿಸಿ ಮುಂದೆ, ಶಿಬುಲಾಲ್ ಅವರು 5 ವರ್ಷಗಳ ವಿಶ್ರಾಂತಿಯನ್ನು ತೆಗೆದುಕೊಂಡು ಬಳಿಕ ಸನ್ ಮೈಕ್ರೋಸಿಸ್ಟಮ್ಸ್‌ಗೆ ಸೇರಿದರು.
1997 ರಲ್ಲಿ ಮತ್ತೆ ಇನ್ಫೋಸಿಸ್‌ಗೆ ಮರಳಿದ ಅವರು 2007 ರಲ್ಲಿ ಸಿಒಒ ಆಗುವ ಮೊದಲು ಕಂಪನಿಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಅವರು 2011 - 2014 ರವರೆಗೆ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಶಿಬುಲಾಲ್ ಅವರ 2012-2013 ರ ಮೂಲ ವೇತನವು ಸುಮಾರು 36 ಲಕ್ಷ ರೂಪಾಯಿಗಳು ಮತ್ತು ಅವರ ವಾರ್ಷಿಕ ಕಂಪೆನ್ಸಷನ್ ಸುಮಾರು 65 ಲಕ್ಷ ರೂ. ಎಂದು ವರದಿಯಾಗಿದೆ. ಶಿಬುಲಾಲ್ ಅವರು 595000 ಕೋಟಿ ರೂಪಾಯಿ ಮೌಲ್ಯದ ಇನ್ಫೋಸಿಸ್‌ನಲ್ಲಿ ಷೇರು ಹೊಂದಿದ್ದು, ಫೋರ್ಬ್ಸ್ ಪ್ರಕಾರ ಅವರು ಪ್ರಸ್ತುತ ರೂ 15,006 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಇನ್ಫೋಸಿಸ್ ಹೊರತಾಗಿ, ಅವರು ಬಿಸಿನೆಸ್ ಇನ್ಕ್ಯುಬೇಟರ್ ಆಕ್ಸಿಲರ್ ವೆಂಚರ್ಸ್ ಅನ್ನು ಸಹ ಸ್ಥಾಪಿಸಿದ್ದು, ಬಯೋಟಿಕ್ ರೆಸಾರ್ಟ್ ಚೈನ್ ದಿ ಟಮಾರಾ ಅಧ್ಯಕ್ಷರಾಗಿದ್ದಾರೆ.


Click it and Unblock the Notifications