ಇಂಜಿನಿಯರ್ ಮತ್ತು ನಿರ್ಮಾಣ ಉದ್ಯಮಿಯಾಗಿರುವ ಪಿ.ಪಿ ರೆಡ್ಡಿ, ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಫೋರ್ಬ್ಸ್ ಪ್ರಕಾರ, ಅವರ ನಿವ್ವಳ ಮೌಲ್ಯ 16,591 ಕೋಟಿ ರೂಪಾಯಿ ಆಗಿದೆ. 360 ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ರ ಪ್ರಕಾರ, ಎಂಜಿನಿಯರಿಂಗ್ ಮತ್ತು ನಿರ್ಮಾಣ ಉದ್ಯಮ ಕ್ಷೇತ್ರದಲ್ಲಿ ರೆಡ್ಡಿಯವರು ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಪಿಪಿ ರೆಡ್ಡಿ ಅವರು ತಮ್ಮ ವ್ಯವಹಾರವನ್ನು ಅನುವಂಶಿಕವಾಗಿ ಪಡೆದಿಲ್ಲ. ಇದು ಅವರೇ ಪಟ್ಟ ಶ್ರಮದ ಫಲವಾಗಿದೆ. ರೆಡ್ಡಿ ಅವರು ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದದ್ದು, ಪೋಷಕರಿಗೆ ಅವರು ಐದನೇ ಮಗುವಾಗಿದ್ದರು. ರೆಡ್ಡಿ ಅವರ ಕುಟುಂಬ ಯಾವುದೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿರಲಿಲ್ಲ. ಆದರೆ ರೆಡ್ಡಿಯವರು ವಿಭಿನ್ನ ಹಾದಿಯಲ್ಲಿ ಸಾಗಲು ನಿರ್ಧರಿಸಿ, ಅವರು 1989 ರಲ್ಲಿ, ಇಬ್ಬರು ಉದ್ಯೋಗಿಗಳೊಂದಿಗೆ ಮೇಘಾ ಇಂಜಿನಿಯರಿಂಗ್ ಎಂಟರ್‌ಪ್ರೈಸಸ್‌ನ ಅಡಿಪಾಯವನ್ನು ಹಾಕಿದರು.

ಕಳೆದ 34 ವರ್ಷಗಳಲ್ಲಿ, ರೆಡ್ಡೀಸ್ ಕಂಪನಿಯು ಬೃಹತ್ ಆಗಿ ಬೆಳೆದಿದ್ದು, ಅವರು ಭಾರತದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2024ರ ಫೆಬ್ರವರಿಯಲ್ಲಿ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ (ಎಂಇಐಎಲ್) ಮಾರುಕಟ್ಟೆ ಮೌಲ್ಯ 67,500 ಕೋಟಿ ರೂಪಾಯಿ ಆಗಿದೆ. 2023 ರಲ್ಲಿ, ಎಂಇಐಎಲ್‌ನ ಬೆಳವಣಿಗೆಯು ಶೇಕಡಾ 22.1 ರಷ್ಟಿತ್ತು.
ಮೇಘಾ ಇಂಜಿನಿಯರಿಂಗ್ ಆರಂಭದಲ್ಲಿ ಸಣ್ಣ ಪೈಪ್‌ಗಳಿಂದ ಪ್ರಾರಂಭಿಸಿ, ಕಂಪನಿಯು ಭಾರತದ ಅತಿದೊಡ್ಡಏತ ನೀರಾವರಿ ಯೋಜನೆಯನ್ನು ನಿರ್ಮಿಸಲು ಮುಂದಾಯಿತು. ಮೂಲತಃ ಸಣ್ಣ ಪೈಪ್‌ಗಳನ್ನು ತಯಾರಿಸಿದ ಕಂಪನಿಯು ನಿಧಾನವಾಗಿ ರಸ್ತೆ, ಅಣೆಕಟ್ಟುಗಳು ಮತ್ತು ನೈಸರ್ಗಿಕ ಅನಿಲ ವಿತರಣಾ ಜಾಲಗಳನ್ನು ಮತ್ತು ಲಿಫ್ಟ್ ನೀರಾವರಿ ಯೋಜನೆಗಳನ್ನು ನಿರ್ಮಿಸಲು ಮುಂದಾಯಿತು.
ಈಗ ಇವರ ಕಂಪನಿಯೂ ದೊಡ್ಡ- ದೊಡ್ಡ ಮೂಲಸೌಕರ್ಯ ಯೋಜನೆಗಳ ನಿರ್ಮಾಣದಲ್ಲಿ ಪ್ರಮುಖ ಪ್ಲೇಯರ್ ಆಗಿ ಗುರುತಿಸಿಕೊಂಡಿದೆ. ಅವರ ಕಂಪನಿಯು ದೇಶದ ಅತಿದೊಡ್ಡ ಕಾಳೇಶ್ವರಂ ಏತ ನೀರಾವರಿ ಯೋಜನೆಯನ್ನು ನಿರ್ಮಿಸಿದ್ದು, ಇದು ಗೋದಾವರಿ ನದಿಯಿಂದ ತೆಲಂಗಾಣದ ಬರಡು ಪ್ರದೇಶಗಳಿಗೆ 5.7 ಕೋಟಿ ಕ್ಯೂಬಿಕ್ ಮೀಟರ್ ನೀರು ಪೂರೈಕೆ ಮಾಡುತ್ತಿದೆ.
ಈ ಯೋಜನೆಯು 14 ಬಿಲಿಯನ್ ಡಾಲರ್ ವೆಚ್ಚದ್ದಾಗಿದೆ. ಪಿಪಿ ರೆಡ್ಡಿ ಕಲ್ಲೇಶ್ವರಂ ಯೋಜನೆಯನ್ನು 'ನದಿಯ ವಿಸ್ತರಣೆ' ಎಂದೇ ಕರೆಯುತ್ತಾರೆ. ರೆಡ್ಡಿ ಹೈದರಾಬಾದ್‌ನ ಐಷಾರಾಮಿ ಭವನದಲ್ಲಿ ವಾಸಿಸುತ್ತಿದ್ದಾರೆ. ಇದನ್ನು ಡೈಮಂಡ್ ಹೌಸ್ ಎಂದು ಕರೆಯಲಾಗುತ್ತದೆ . ಗಾಜಿನಿಂದ ವಿನ್ಯಾಸಗೊಳಿಸಲಾದ ಈ ಮನೆ ವಜ್ರದಂತೆ ಹೊಳೆಯುತ್ತದೆ. ರೆಡ್ಡಿ ಖಾಸಗಿ ಗಾಲ್ಫ್ ಕೋರ್ಸ್ ಅನ್ನು ಸಹ ಹೊಂದಿದ್ದಾರೆ.


Click it and Unblock the Notifications