ಭಾರತದಲ್ಲಿ ಯಶಸ್ಸಿನ ಕಥೆಗಳಿಗೆ ಕೊರತೆಯಿಲ್ಲ. ಈ ಯಶಸ್ವಿನ ಕಥೆಗಳಲ್ಲಿ ಇಲ್ಲಿ ಕಾರ್ಪೊರೇಟ್ ಜಗತ್ತನ್ನು ಆಳುತ್ತಿರುವ ಐಐಟಿ ಮತ್ತು ಐಐಎಂ ಹಳೆಯ ವಿದ್ಯಾರ್ಥಿಗಳೂ ಇದ್ದಾರೆ. ಇನ್ನೊಂದೆಡೆ ಶಾಲೆ ಮತ್ತು ಕಾಲೇಜು ಅರ್ಧಕ್ಕೆ ನಿಲ್ಲಿಸಿ ಸಾಧನೆಯ ಶಿಖರವೇರಿದವರೂ ಇದ್ದಾರೆ.
ಯಾವುದೇ ಉದ್ಯಮ ಕುಟುಂಬದ ಹಿನ್ನಲೆಯಿಂದ ಬಾರದೇ ಸ್ವಯಂ ನಿರ್ಮಿತ ಉದ್ಯಮಿಗಳೂ ಇಲ್ಲಿದ್ದಾರೆ. ಈ ಪೈಕಿ ನಿಖಿಲ್ ಕಾಮತ್ ಕೂಡಾ ಒಬ್ಬರಾಗಿದ್ದಾರೆ. ಪ್ರೌಢಶಾಲೆಯನ್ನು ಅರ್ಧಕ್ಕೆ ತೊರೆದ ನಿಖಿಲ್ ಕಾಮತ್ ಇಂದು ದೇಶದ ಅತಿದೊಡ್ಡ ಆನ್‌ಲೈನ್ ಸ್ಟಾಕ್ ಬ್ರೋಕರೇಜ್ ಸಂಸ್ಥೆಯಾದ ಜೆರೋಧಾ ಸಂಸ್ಥಾಪಕರಾಗಿದ್ದಾರೆ. ಮಾತ್ರವಲ್ಲದೇ ಅವರು ಭಾರತದ ಕಿರಿಯ ಬಿಲಿಯನೇರ್ ಕೂಡಾ ಆಗಿದ್ದಾರೆ.

ನಿಖಿಲ್ ಕಾಮತ್ ಅವರಿಗೆ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಲಾಗಲಿಲ್ಲ. ಯಾಕೆಂದರೆ ಅವರ ಗ್ರೇಡ್ ಅತ್ಯಂತ ಕಡಿಮೆ ಇದ್ದ ಕಾರಣ 10 ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಅವರಿಗೆ ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಕುಗ್ಗದ ಅವರು ಚಿಕ್ಕ ವಯಸ್ಸಿನಿಂದಲೇ ವ್ಯವಹಾರ ಇಳಿದರು.
ಕೇವಲ 14 ವರ್ಷ ವಯಸ್ಸಿನಲ್ಲಿ ಸೆಲ್ ಫೋನ್ ಮಾರಾಟ ಮಾಡುವ ಮೂಲಕ ವೃತ್ತಿಜೀವನಕ್ಕೆ ಕಾಲಿರಿಸಿದರು. ಇದಾದ ಬಳಿಕ ಮಾಸಿಕವಾಗಿ 8,000 ರೂಪಾಯಿ ಸಿಗುವ ಕಡಿಮೆ ಸಂಬಳಕ್ಕಾಗಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿದರು. ಆದರೆ 2022-23ರ ಆರ್ಥಿಕ ವರ್ಷದಲ್ಲಿ ಅವರು ದಿನಕ್ಕೆ ಸುಮಾರು 20 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.
2010 ರಲ್ಲಿ, ನಿಖಿಲ್ ಕಾಮತ್ ಅವರು ಟ್ರೇಡರ್ಸ್‌ಗಾಗಿ ಹಣಕಾಸು ಸೇವಾ ಸಂಸ್ಥೆ ರಚಿಸುವ ಆಲೋಚನೆ ಬಂತು. ತಮ್ಮ ಸಹೋದರ ನಿತಿನ್ ಕಾಮತ್ ಜೊತೆ ಸೇರಿ ಜೆರೋಧಾ ಸಂಸ್ಥೆಯನ್ನು ಸಹ-ಸ್ಥಾಪಿಸಿದರು. ಅವರ ಕಂಪನಿಯೂ ಕೇವಲ ಮೂರು ವರ್ಷಗಳಲ್ಲಿ, 2,000 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿತು. ಜೆರೋಧಾ ಸಂಸ್ಥೆಯ ಮೌಲ್ಯವು 2023 ರಲ್ಲಿ 3.2 ಬಿಲಿಯನ್ ಡಾಲರ್ ಅಥವಾ 30,000 ಕೋಟಿ ರೂಪಾಯಿ ತಲುಪಿತು.
ಈ ವರ್ಷ ನಿಖಿಲ್ ಕಾಮತ್ ಅವರ ವಾರ್ಷಿಕ ಸಂಭಾವನೆ 72 ಕೋಟಿ ರೂಪಾಯಿ ಆಗಿದ್ದು ಇದು ದಿನಕ್ಕೆ 19.72 ಲಕ್ಷ ರೂಪಾಯಿ ಆಗಿದೆ. ಇವರ ಸಹೋದರ ನಿತಿನ್ ಕಾಮತ್ ಕೂಡಾ ಹೆಚ್ಚುಕಡಿಮೆ ಅದೇ ಸಂಭಾವನೆ ಪಡೆಯುತ್ತಿದ್ದಾರೆ. ಇತರ ಪರಿಹಾರದೊಂದಿಗೆ ಇವರಿಬ್ಬರ ಒಟ್ಟಾರೆ ಸಂಬಳ 195.4 ಕೋಟಿ ರೂಪಾಯಿ ಆಗಿದ್ದು, ಮಾಸಿಕವಾಗಿ 6 ಕೋಟಿ ರೂಪಾಯಿ ವೇತನವನ್ನು ಪಡೆಯುತ್ತಿರುವ ನಿಖಿಲ್ ಕಾಮತ್ ಅವರ ನಿವ್ವಳ ಮೌಲ್ಯವನ್ನು 9,150 ಕೋಟಿ ರೂಪಾಯಿ (1 1.1 ಬಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ.


Click it and Unblock the Notifications