ನಿರ್ಮಾಣ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿರುವ ಉದ್ಯಮಿಗಳ ಪೈಕಿ ಅನಿಲ್ ಮಣಿಭಾಯಿ ನಾಯ್ಕ್ ಅವರು ಕೂಡ ಒಬ್ಬರು. ಅನಿಲ್ ಅವರು ಎಎಂ ನಾಯ್ಕ್ ಎಂದೇ ಜನಪ್ರಿಯತೆ ಖ್ಯಾತರಾಗಿದ್ದು, ನಿರ್ಮಾಣ ಹಾಗೂ ಇಪಿಸಿ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ಎಮಿರೈಟಸ್ ಲರ್ಸೆನ್ ಅಂಡ್ ಟೂಬ್ರೊ ಎಂಬ ಕಂಪನಿಯ ಅಧ್ಯಕ್ಷರಾಗಿದ್ದಾರೆ.
ಲಾರ್ಸೆನ್ ಅಂಡ್ ಟೂಬ್ರೊ ಕಂಪನಿಯು ಪ್ರಸ್ತುತ 419000 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಈ ಕಂಪನಿಯು ಇಷ್ಟೊಂದು ಎತ್ತರಕ್ಕೆ ಬೆಳೆಯುವುದಕ್ಕೆ ಅನಿಲ್ ನಾಯ್ಕ್ ಅವರ ಪರಿಶ್ರಮ ಬಹಳ ಪ್ರಮುಖವಾಗಿದೆ. ಅನಿಲ್ ಅವರು ಸ್ವಾತಂತ್ರ್ಯ ಹೋರಾಟಗಾರ ಮಣಿಭಾಯಿ ನಿಚ್ಚಾಭಾಯಿ ನಾಯ್ಕ್ ಅವರ ಪುತ್ರರಾಗಿದ್ದು, ಅನಿಲ್ ತಮ್ಮ ಮ್ಯಾನೇಜ್‌ಮೆಂಟ್ ಕೌಶಲ್ಯಗಳಿಂದಾಗಿ ಸಾಧನೆಯ ಮೆಟ್ಟಿಲೇರುತ್ತಿದ್ದಾರೆ.

ಭಾರತ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಕೊಡುಗೆ ನೀಡುವ ಉದ್ದೇಶವನ್ನು ನೌಕರಿಯನ್ನು ತಂದೆ ತೊರೆದಿದ್ದರು. ಅದೇರೀತಿ, ಈಗ ಮಗ ಕೂಡ ಉನ್ನತಿಯ ಶಿಖರಕ್ಕೆ ಏರಿದ ನಂತರ ಅಪ್ಪನ ಹಾದಿಯಲ್ಲೇ ಮುಂದುವರಿಯುತ್ತಿದ್ದಾರೆ. 1942 ರಲ್ಲಿ ಗುಜರಾತ್‌ನಲ್ಲಿ ಜನಿಸಿದ್ದ ಎಎಂ ನಾಯ್ಕ್ ಅವರು 1965ರಲ್ಲಿ 670 ರೂಪಾಯಿ ಸಂಬಳಕ್ಕೆ ಸಹಾಯಕ ಎಂಜಿನಿಯರ್ ಆಗಿ ಕಂಪನಿಯೊಂದಕ್ಕೆ ಸೇರಿದ್ದರು.
ಅವರು ಬಿರ್ಲಾ ವಿಶ್ವಕರ್ಮ ಮಹಾವಿದ್ಯಾಲಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಆದರೆ ಐಐಟಿ ಪದವೀಧರರಿಗೆ ಆದ್ಯತೆ ನೀಡುತ್ತಿದ್ದ ಕಾರಣ ಎಲ್ ಅಂಡ್ ಟಿಯಲ್ಲಿ ಕೆಲಸ ಪಡೆಯಲು ಸಾಧ್ಯವಾಗಿರಲಿಲ್ಲ.
ಎಲ್ ಅಂಡ್ ಟಿಯಲ್ಲಿ ಉದ್ಯೋಗ ಗಿಟ್ಟಿಸದ ಕಾರಣ ಅವರು ನೆಸ್ಟರ್ ಬಾಯ್ಲರ್‌ಗೆ ಸೇರಿದ್ದರು. ಅಲ್ಲಿ ಅವರು ಅಗಾಧ ಅನುಭವವನ್ನು ಪಡೆದುಕೊಂಡು ಬಳಿಕ ಮತ್ತೆ ನಿರ್ಮಾಣ ಕ್ಷೇತ್ರದ ದೈತ್ಯ ಕಂಪನಿಯಲ್ಲಿ ಕೆಲಸ ಮುಂದುವರಿಸಿದರು. ಕೇವಲ ಆರು ತಿಂಗಳಲ್ಲಿ ಸುಪರ್‌ವೈಸರ್ ಆಗಿ ಬಡ್ತಿಯನ್ನು ಪಡೆದುಕೊಂಡರು.
18 ತಿಂಗಳ ಬಳಿಕ ಅವರನ್ನು 800 ಮಂದಿ ಇದ್ದ ಕಂಪನಿಯ ಮೇಲುಸ್ತವಾರಿ ಹುದ್ದೆಯನ್ನು ನೀಡಲಾಯಿತು. ತಾವು ವೃತ್ತಿಯಲ್ಲಿ ಸಾಧಿಸಿರುವ ಹಂತವನ್ನು ಹಿಂತಿರುಗಿ ನೋಡಿದಾಗ ಈ ಹಂತಕ್ಕೆ ಬೆಳೆಯುತ್ತೇನೆಂದು ಯಾವತ್ತೂ ಯೋಚಿಸಿರಲಿಲ್ಲ ಎಂದು ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಆಗ ಅವರು ಇನ್ನು ಕೂಡ 25 ವರ್ಷಕ್ಕೆ ತಲುಪಿರಲಿಲ್ಲ. ಸೇರುವಾಗ 1000 ರೂಪಾಯಿ ಸಂಬಳ ಆಗುವಾಗ ನಿವೃತ್ತಿಯಾಗುವುದಾಗಿ ಊಹಿಸಿದ್ದರು.
ಆದರೆ ಅವರು 1999ರಲ್ಲಿ ಕಂಪನಿ ಸಿಇಒ ಆದರು. 2003ರಲ್ಲಿ ಗ್ರೂಪ್‌ನ ಅಧ್ಯಕ್ಷರಾಗಿ ನೇಮಕಗೊಂಡರು. ತಮ್ಮ ನಾಯಕತ್ವದಲ್ಲಿ ಕಂಪನಿಯ ಆಸ್ತಿಯನ್ನು 870 ಕೋಟಿ ಡಾಲರ್‌ಗೆ ಏರಿಸಿದ್ದಾರೆ. ಅಷ್ಟೇಅಲ್ಲ ಅನಿಲ್ ಅವರು ಈಗ ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಸಂಬಳ ಪಡೆಯುವ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದಾರೆ. 2017-18ರ ಮಾಹಿತಿಯಂತೆ ಕಂಪನಿಯು ಅವರಿಗೆ 137 ಕೋಟಿ ರೂಪಾಯಿ ಪಾವತಿಸಿದೆ. ಅನಿಲ್ ಅವರ ಆಸ್ತಿ ಮೌಲ್ಯ 2016 ರಲ್ಲಿ 400 ಕೋಟಿ ರೂಪಾಯಿ ಆಗಿತ್ತು.


Click it and Unblock the Notifications